ದಾವಣಗೆರೆ:ಸರ್ಕಾರಿ ಶಾಲೆಗಳಲ್ಲಿ ಧ್ಯಾನ ಅಳವಡಿಕೆಯ ಬಗ್ಗೆ ಕೇಳಿ ಬರುತ್ತಿರುವ ಅಪಸ್ವರದ ಬಗ್ಗೆ ನನಗೆ ಗೊತ್ತಿಲ್ಲ, ಆದರೆ ಶಾಲೆಗಳಲ್ಲಿ ಮಕ್ಕಳಿಗೆ ಧ್ಯಾನ ಮಾಡಿಸುವುದು ಒಳ್ಳೆಯದು ಎಂದು ಸೋಂದಾ ಸ್ವರ್ಣವಲ್ಲಿ ಶಿರಸಿ ಮಠದ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿಯವರು ಅಭಿಪ್ರಾಯ ವ್ಯಕ್ತಪಡಿಸಿದರು.
ದಾವಣಗೆರೆ ತಾಲೂಕಿನ ಕಡ್ಲೆಬಾಳು ಗ್ರಾಮದಲ್ಲಿ ಮಾತನಾಡಿದ ಅವರು ಧ್ಯಾನದ ಬಗ್ಗೆ ವಿಶ್ವಮಟ್ಟದಲ್ಲಿ ಸಂಶೋಧನೆಗಳಾಗಿವೆ. ಹಾಗಾಗಿ ಶಾಲೆಗಳಲ್ಲಿ ಧ್ಯಾನ ಮಾಡುವುದು ಯೋಗ್ಯ ಎಂದರು. ಶಾಲೆಗಳಲ್ಲಿ ವಿವಿಧ ಧರ್ಮದ ವಿದ್ಯಾರ್ಥಿಗಳಿದ್ದರೆ ಅವರು ಕೂಡ ಧಾನ್ಯದಲ್ಲಿ ಭಾಗವಹಿಸಬಹದು, ಆದರೆ ಧ್ಯಾನ ಮಾಡಿ ಎಂದು ಅನ್ಯಧರ್ಮೀಯರಿಗೆ ಒತ್ತಡ ಹೇರುವುದಿಲ್ಲ ಎಂದರು.
ಇನ್ನು ಸೂರ್ಯ ನಮಸ್ಕಾರ ಮಾಡುವುದ್ದರಿಂದ ಪ್ರತಿಯೊಬ್ಬರಿಗೂ ಒಳ್ಳೆದಾಗುತ್ತದೆ. ಸೂರ್ಯ ನಮಸ್ಕಾರ ಶರೀರಕ್ಕೆ ವ್ಯಾಯಾಮ, ಶರೀರಕ್ಕೆ ಹಿತ, ಮಾನಸಿಕ ಸಮಸ್ಯೆಗಳು ಪ್ರತಿಯೊಬ್ಬರಿಗಿವೆ ಅಲ್ವಾ ಎಂದು ಪ್ರಶ್ನಿಸಿದರು. ಇನ್ನು ಶಿಕ್ಷಣದಲ್ಲಿ ಭಗವದ್ಗೀತೆ ಅಳವಡಿಸುವುದರ ಬಗ್ಗೆ ಚಿಂತನೆ ನಡೆಸಿದ್ದೇವೆ, ಇದರ ಬಗ್ಗೆ ಶಿಕ್ಷಣ ಸಚಿವರಾದ ನಾಗೇಶ್ ಅವರಿಗೂ ಕಾರ್ಯಕ್ರಮಕ್ಕೆ ಕರೆದಿದ್ದೇವೆ ಅವರು ಡಿ.4ಕ್ಕೆ ಬರಲಿದ್ದು ಆಗಾಗ ಅವರೊಂದಿಗೆ ಮಾತನಾಡಲಿದ್ದೇವೆ ಎಂದರು.
ದೇವಸ್ಥಾನಗಳಲ್ಲಿ ಸರ್ಕಾರ ಹಸ್ತಕ್ಷೇಪ ಮಾಡುವುದು ಒಳ್ಳೆಯದಲ್ಲ:ಇನ್ನು ದೇವಸ್ಥಾನಗಳಲ್ಲಿ ಸರ್ಕಾರದ ಹಸ್ತಕ್ಷೇಪದ ಬಗ್ಗೆ ಪ್ರತಿಕ್ರಿಯಿಸಿದ ಅವರು ಧಾರ್ಮಿಕ ದತ್ತಿ ಇಲಾಖೆಯಡಿ ಸರ್ಕಾರ ದೇವಾಲಯಗಳಲ್ಲಿ ಹಸ್ತಕ್ಷೇಪ ಮಾಡುವ ನಿರ್ಧಾರದ ವಿರುದ್ಧ 40 ವರ್ಷಗಳಿಂದ ಹೋರಾಟ ನಡೆಯುತ್ತಿದೆ. ನಾವು 30 ವರ್ಷಗಳಿಂದ ಈ ಹೋರಾಟದಲ್ಲಿದ್ದೇವೆ. ದೇವಸ್ಥಾನಗಳಿಗೆ ಸ್ವಾಯತ್ತತೆ ಬರಬೇಕೆಂಬುದು ನಮ್ಮ ಹೋರಾಟದ ಮುಖ್ಯವಾದ ಆಶಯ ಎಂದರು.