ರಾಣೇಬೆನ್ನೂರು:ನಡೆದಾಡುವ ದೇವರು, ಶತಾಯುಷಿ, ಸಿದ್ಧಗಂಗಾಧೀಶ ಲಿಂಗೈಕ್ಕೆ ಶ್ರೀ ಶಿವಕುಮಾರ ಸ್ವಾಮೀಜಿ ಸ್ಮರಣಾರ್ಥ 3ನೇ ವರ್ಷದ ಸರಳ ಸಾಮೂಹಿಕ ವಿವಾಹ ನಡೆಸಲಾಯಿತು.
ರಾಣೇಬೆನ್ನೂರು: ಸಿದ್ಧಗಂಗಾ ಸ್ವಾಮೀಜಿ ಸ್ಮರಣಾರ್ಥ ಸರಳ ಸಾಮೂಹಿಕ ವಿವಾಹ - ಸರಳ ಸಾಮೂಹಿಕ ವಿವಾಹ
ಇಂದು ತರಳಬಾಳು ನಗರದಲ್ಲಿ ತುಮಕೂರು ಸಿದ್ಧಗಂಗಾ ಸ್ವಾಮೀಜಿ ಲಿಂ.ಶಿವಕುಮಾರ ಮಹಾಸ್ವಾಮಿಗಳ ನೆನಪಿಗಾಗಿ 3ನೇ ವರ್ಷದ ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಯಿತು.

Mass marriage programe
ಸಿದ್ಧಗಂಗಾ ಸ್ವಾಮೀಜಿ ಸ್ಮರಣಾರ್ಥ ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮ
ಇಂದು ತರಳಬಾಳು ನಗರದಲ್ಲಿ ತುಮಕೂರು ಸಿದ್ಧಗಂಗಾ ಸ್ವಾಮೀಜಿ ಲಿಂ.ಶಿವಕುಮಾರ ಮಹಾಸ್ವಾಮಿಗಳ ನೆನಪಿಗಾಗಿ ನಿವೃತ್ತ ರೈಲ್ವೆ ಉದ್ಯೋಗಿ ಶ್ರೀನಿವಾಸ ಅಯ್ಯಂಗಾರವರು ಉಚಿತ ಸಾಮೂಹಿಕ ವಿವಾಹ ನಡೆಸಿ ಕೊಟ್ಟರು. ಈ ಸರಳ ಸಾಮೂಹಿಕ ವಿವಾಹದಲ್ಲಿ ಐದು ನವ ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ಕಾರ್ಯಕ್ರಮದಲ್ಲಿ ತಿಪ್ಪಾಯಿಕೊಪ್ಪದ ವಿರುಪಾಕ್ಷ ಮಹಾಸ್ವಾಮಿಗಳು, ಲಿಂಗದಹಳ್ಳಿ ಹಿರೇಮಠದ ವಿರಭದ್ರಶಿವಾಚಾರ್ಯ ಸ್ವಾಮಿಜಿ, ಲಿಂಗನಾಯಕನಹಳ್ಳಿ ಚೆನ್ನವೀರ ಶಿವಯೋಗಿಗಳು, ಗುಡ್ಡದ ಆನ್ವೇರಿ ಶಿವಯೋಗಿ ಶಿವಾಚಾರ್ಯ ಸ್ವಾಮಿಜಿ ಸಾನ್ನಿಧ್ಯ ವಹಿಸಿದ್ದರು.
TAGGED:
ಸರಳ ಸಾಮೂಹಿಕ ವಿವಾಹ