ದಾವಣಗೆರೆ: ಕೋರ್ಟ್ ಆವರಣದಲ್ಲೇ ವಿಚ್ಛೇದನ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಮೈದ ತನ್ನ ಬಾವನ ಕತ್ತು ಕೊಯ್ದಿರುವ ಘಟನೆಯಿಂದ ಇಡೀ ಜಗಳೂರು ಬೆಚ್ಚಿಬಿದ್ದಿದೆ.
ದಾವಣಗೆರೆ ಜಿಲ್ಲೆಯ ಜಗಳೂರು ಪಟ್ಟಣದಲ್ಲಿರುವ ಸಿವಿಲ್ ಕೋರ್ಟ್ ಆವರಣದಲ್ಲಿ ಈ ಘಟನೆ ಜರುಗಿದೆ. ವಿಚ್ಛೇದನಕ್ಕೆ ಸಂಬಂಧಿಸಿದಂತೆ ಸಿವಿಲ್ ಕೋರ್ಟ್ ಆವರಣದಲ್ಲಿ ಎರಡು ಕುಟುಂಬಗಳ ನಡುವೆ ಮೊದಲು ಮಾರಾಮಾರಿಯಾಗಿದೆ. ಬಾಮೈದ ಸ್ವಂತ ಬಾವನ ಮೇಲೆಯೇ ಚಾಕುವಿನಿಂದ ಹಲ್ಲೆ ಮಾಡಿ ಕತ್ತು ಕೊಯ್ದು ಕೊಲೆಗೆ ಯತ್ನಿಸಿದ್ದಾನೆ.
ಬಾವ ಮಂಜುನಾಥ್ (35) ಎಂಬುವರು ಹಲ್ಲೆಗೊಳಗಾದ ವ್ಯಕ್ತಿಯಾಗಿದ್ದಾರೆ. ಪತ್ನಿಯ ತಮ್ಮ ಮಲ್ಲಿಕಾರ್ಜುನ ಎಂಬಾತ ಮಂಜುನಾಥ್‌ನ ಮೇಲೆ ಹಲ್ಲೆ ಮಾಡಿದ್ದಾನೆ. ಮಂಜುನಾಥ್ ಹಾಗೂ ಆತನ ಪತ್ನಿ ವಿಚ್ಛೇದನಕ್ಕಾಗಿ 2008ರಿಂದ ಕೋರ್ಟ್‌ಗೆ ಅಲೆಯುತ್ತಿದ್ದಾರೆ.