ದಾವಣಗೆರೆ :ಬುಲೆರೋ ವಾಹನವೊಂದು ಯುವಕನ ಮೇಲೆ ಹರಿದು ಆತ ಮೃತಪಟ್ಟಿರುವ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿರುವ ಘಟನೆ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಶ್ರೀಕಾಂತ ಟಾಕೀಸ್ ಮುಂಭಾಗ ಜರುಗಿದೆ.
ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಬೆಳ್ಳೂಡಿ ಗ್ರಾಮದ ನವೀನ್ (20) ಎಂಬಾತ ಮೃತಪಟ್ಟ ಯುವಕ. ಇಂದು ಕೆಲಸ ಮುಗಿಸಿ ಮನೆಗೆ ಹೋಗುತ್ತಿದ್ದಾಗ ಹರಿಹರ ನಗರದಿಂದ ಬಂದ ಬುಲೆರೋ ವಾಹನ ಪಾದಚಾರಿ ಮೃತ ನವೀನ್ ಮೇಲೆ ಹರಿದಿದೆ.