ದಾವಣಗೆರೆ: ಜಿಲ್ಲೆಯ ಮಲೇಬೆನ್ನೂರಿನ ಹೋಟೆಲ್ ಒಂದರಲ್ಲಿ ಮಂಡಕ್ಕಿ, ಮೆಣಸಿನಕಾಯಿ ಬಜ್ಜಿ ಹಾಗೂ ಟೀ ಸೇವಿಸುವ ಮೂಲಕ ಜಿಲ್ಲಾಧಿಕಾರಿ ಮಹಾಂತೇಶ್ ಬಿಳಗಿ ಗಮನ ಸೆಳೆದರು.
ಜಿಲ್ಲಾಧಿಕಾರಿ ಸರಳತೆಗೆ ಮಲೇಬೆನ್ನೂರಿನ ಮಂದಿ ಫಿದಾ - ದಾವಣಗೆರೆ ಸುದ್ದಿ
ಜಿಲ್ಲೆಯ ಮಲೇಬೆನ್ನೂರಿನ ಹೊಟೇಲ್ ಒಂದರಲ್ಲಿ ಮಂಡಕ್ಕಿ,ಮೆಣಸಿನಕಾಯಿ ಬಜ್ಜಿ ಹಾಗೂ ಟೀ ಸೇವಿಸುವ ಮೂಲಕ ಜಿಲ್ಲಾಧಿಕಾರಿ ಮಹಾಂತೇಶ್ ಬಿಳಗಿ ಗಮನ ಸೆಳೆದರು.
![ಜಿಲ್ಲಾಧಿಕಾರಿ ಸರಳತೆಗೆ ಮಲೇಬೆನ್ನೂರಿನ ಮಂದಿ ಫಿದಾ malebennur people fida for District Collector Mahantesh Bilagi simplicity](https://etvbharatimages.akamaized.net/etvbharat/prod-images/768-512-6006961-thumbnail-3x2-sow.jpg)
ನ್ಯಾಮತಿ ತಾಲೂಕಿನ ಸೂರಗೊಂಡನಕೊಪ್ಪ ಗ್ರಾಮದಿಂದ ದಾವಣಗೆರೆ ಕಡೆಗೆ ಹೋಗುತ್ತಿದ್ದ ಡಿಸಿ, ಹೊಟೇಲ್ ಆಗಮಿಸಿ,ಸಾಮಾನ್ಯರಂತೆ ಕುಳಿತು ಮಂಡಕ್ಕಿ ಸವಿದರು. ಈ ಮಾತನಾಡಿದ ಅವರು,ಈ ರಸ್ತೆಯಲ್ಲಿ ಹೋಗುವಾಗ ಪ್ರತಿಬಾರಿಯೂ ಅಂದುಕೊಳ್ಳುತ್ತಿದ್ದೆ. ಇಲ್ಲಿ ಮಂಡಕ್ಕಿ, ಬಜ್ಜಿ ಚೆನ್ನಾಗಿರುತ್ತದೆ ಎಂದು ಎಲ್ಲರೂ ಹೇಳುತ್ತಿದ್ದರು. ಆದ್ರೆ, ಸಾಧ್ಯವಾಗಿರಲಿಲ್ಲ. ಇಂದೂ ಈ ದಾರಿಯಲ್ಲಿ ಹೋಗುವಾಗ ಮಂಡಕ್ಕಿಯನ್ನ ಇಲ್ಲಿಯೇ ಬಂದು ಸೇವಿಸಿದೆ ಎಂದರು.
ಮಂಡಕ್ಕಿ ಸೇವಿಸಿದ ಬಳಿದ ಹೊಟೇಲ್ ಮಾಲೀಕ ಮಧುಸೂದನ್ ಕರೆದ ಡಿಸಿ, ನಿಮ್ಮೊಂದಿಗೆ ಒಂದು ಫೋಟೋ ತೆಗೆಸಿಕೊಳ್ಳುತ್ತೇನೆ. ಬಾಳಾ ಚೆನ್ನಾಗಿತ್ರೀ, ತುಂಬಾನೇ ರುಚಿ ಇದೆ. ಖುಷಿಯಾಯ್ತು ಎಂದರು.