ದಾವಣಗೆರೆ: ಮಹಾರಾಷ್ಟ್ರ ಪದೇ ಪದೇ ಗಡಿ ಕ್ಯಾತೆ ತೆಗೆಯುತ್ತಿದೆ, ಇದಕ್ಕೆ ಕಡಿವಾಣ ಹಾಕ್ತೀವಿ ಎಂದು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ಮಹಾರಾಷ್ಟ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಮಹಾರಾಷ್ಟ್ರ ಗಡಿ ಕ್ಯಾತೆ: ಸಚಿವ ಭೈರತಿ ಬಸವರಾಜ್ ಪ್ರತಿಕ್ರಿಯೆ ದಾವಣಗೆರೆಯಲ್ಲಿ ಮಾತನಾಡಿದ ಅವರು, ಬೆಳಗಾವಿ ಕರ್ನಾಟಕ ರಾಜ್ಯದ ಅವಿಭಾಜ್ಯ ಅಂಗ. ಈ ರೀತಿಯ ಹೇಳಿಕೆಗಳನ್ನು ಒಂದು ರಾಜ್ಯದ ಮುಖ್ಯಮಂತ್ರಿ ನೀಡುವುದು ಶೋಭೆ ತರುವಂತದ್ದಲ್ಲ. ಮಹಾಜನ್ ವರದಿ ಕೂಡ ನಮ್ಮ ಪರವಾಗಿದೆ. ಅವರು ನ್ಯಾಯಾಲಯದಲ್ಲಿ ಕೇಸ್ ಹಾಕಿರಬಹುದು. ಆದರೆ ಅದರ ತೀರ್ಪು ನಮ್ಮ ಪರವಾಗಿ ಬರಲಿದ್ದು, ಸಿಎಂ ಉದ್ಧವ್ ಠಾಕ್ರೆಯವರ ಹೇಳಿಕೆಯನ್ನು ನಾನು ಖಂಡಿಸುತ್ತೇನೆ ಎಂದರು.
ಓದಿ:ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾಗಿ ನಡೆದುಕೊಂಡರೇ ಪ್ರತ್ಯುತ್ತರಕ್ಕೆ ನಾವೂ ಸಿದ್ಧ: ಠಾಕ್ರೆಗೆ ಸಚಿವ ಜಾರಕಿಹೊಳಿ ಟಾಂಗ್
ಶಾಸಕ ಹಾಗೂ ನಿರ್ಮಾಪಕ ಮುನಿರತ್ನ ಬೇಸರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಮುನಿರತ್ನ ಯಾವುದೇ ಕಾರಣಕ್ಕೂ ಬೇಜಾರಾಗಿಲ್ಲ. ಮುಂದಿನ ದಿನಗಳಲ್ಲಿ ಅವರಿಗೆ ಸಹಕಾರ ನೀಡುತ್ತೇವೆ. ಎಲ್ಲರಿಗೂ ಸಚಿವರಾಗುವ ಆಸೆ ಇರುತ್ತದೆ. ಆದ್ದರಿಂದ ಸಿಎಂ ಕೂಡ ವರಿಷ್ಠರನ್ನು ಭೇಟಿ ಮಾಡಿ ಎಂದು ಹೇಳಿದ್ದು. ಯಾರು ಕೂಡ ಹಾದಿ ಬೀದಿಯಲ್ಲಿ ಮಾತನಾಡಬಾರದು. ಪಕ್ಷದ ಚೌಕಟ್ಟಿನಲ್ಲಿ ಮಾತನಾಡುವ ಅವಕಾಶ ಇದೆ ಎಂದು ಭೈರತಿ ಬಸವರಾಜ್ ತಿಳಿಸಿದರು.