ದಾವಣಗೆರೆ:ಯಾರು ತಪ್ಪು ಮಾಡಿದ್ದಾರೆ ಅವರ ಮೇಲೆ ತನಿಖೆ ಆಗಲಿ, ಉಪ್ಪು ತಿಂದವರು ನೀರು ಕುಡಿಯುತ್ತಾರೆ ಎಂದು ಹೇಳುವ ಮೂಲಕ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ಬಿಬಿಎಂಪಿ ಮೇಲೆ ಎಸಿಬಿ ದಾಳಿ ವಿಚಾರವಾಗಿ ದಾವಣಗೆರೆ ಜಿಲ್ಲೆಯ ಹೊನ್ನಾಳಿ ಪಟ್ಟಣದಲ್ಲಿ ಮಾತನಾಡಿದ ಅವರು, ಭ್ರಷ್ಟಾಚಾರಿ ಅಧಿಕಾರಿಗಳನ್ನ ಮಟ್ಟ ಹಾಕಲೆಂದೇ ಎಸಿಬಿ ಇದೆ. ಭ್ರಷ್ಟ ಅಧಿಕಾರಿಗಳಿಗೆ ಬೆಂಬಲ ಕೊಡುವ ಪ್ರಶ್ನೆಯೇ ಇಲ್ಲ. ತನಿಖೆ ಆಗಲಿ ಈ ಬಗ್ಗೆ ಸಿಎಂ ಉತ್ತರ ಕೊಡುತ್ತಾರೆ. ಎಸಿಬಿ ವರದಿ ಬಳಿಕ ನಿರ್ದಾಕ್ಷಿಣ್ಯವಾಗಿ ಕ್ರಮ ಎಂದರು.
ಇದನ್ನೂ ಓದಿ:ರಾಜಕೀಯ ದ್ವೇಷದಿಂದ ಎಫ್ಐಆರ್ ದಾಖಲು ಮಾಡಿದ್ದಾರೆ : ಸರ್ಕಾರದ ವಿರುದ್ಧ ಡಿಕೆಶಿ ವಾಗ್ದಾಳಿ
ಬಿಬಿಎಂಪಿ ನಗರ ಯೋಜನೆ ಶಾಖೆ ಜಂಟಿ ನಿರ್ದೇಶಕನ ಭ್ರಷ್ಟಾಚಾರ ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಅಂತಹ ಭ್ರಷ್ಟ ಅಧಿಕಾರಿ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸುತ್ತೇವೆ. ಯಾವ ಅಧಿಕಾರಿಗೂ ಹಣ ಕೊಡಿ ಎಂದು ನಾನು ಕೇಳಿಲ್ಲ. ಬಿಬಿಎಂಪಿ ಸಿಎಂ ಕೈಯಲ್ಲಿದೆ ಅವರು ನೋಡಿಕೊಳ್ಳುತ್ತಾರೆ. ಹೊರಗಿಂದು ನನ್ನ ಜವಾಬ್ದಾರಿ ಇದೆ, ಯಾವ ಅಧಿಕಾರಿ ಆ ರೀತಿ ಕೆಲಸ ಮಾಡಿದ್ದಾರೆ ನೋಡಿ ಕ್ರಮ ತೆಗೆದುಕೊಳ್ಳುವೆ ಎಂದು ಹೇಳಿದ್ದಾರೆ.