ಕರ್ನಾಟಕ

karnataka

ETV Bharat / state

ಕೊರೊನಾ ಸೋಂಕಿತರ ಕರೆದೊಯ್ಯಲು ಆ್ಯಂಬುಲೆನ್ಸ್ ಕೊರತೆ: ಡಿಸಿಗೆ ಫೋನ್​​​​​​ ಮಾಡಿದ ರೇಣುಕಾಚಾರ್ಯ - ನ್ಯಾಮತಿ ತಾಲೂಕಿನ ಸುರಹೊನ್ನೆ ಗ್ರಾಮ

ಆ್ಯಂಬುಲೆನ್ಸ್ ಚಾಲಕನಿಗೆ ಸೋಂಕಿತರು ಕರೆ ಮಾಡಿದರೂ ಸ್ವಿಚ್ ಆಫ್ ಆಗಿದ್ದು ಗೊತ್ತಾಗಿದೆ. ಇನ್ನು‌ ಸೋಂಕಿತರನ್ನು ಆಸ್ಪತ್ರೆಗೆ ಕರೆದೊಯ್ಯಲು ಆ್ಯಂಬುಲೆನ್ಸ್ ಕೊರತೆ ಇದೆ ಎಂಬ ಮಾತು ಕೇಳಿ ಬರುತ್ತಿದೆ. ಆರೋಗ್ಯ ಇಲಾಖೆಯ ನಿರ್ಲಕ್ಷ್ಯಕ್ಕೆ ಜನರು ಹಿಡಿಶಾಪ ಹಾಕುವಂತಾಗಿದೆ. ಇದು ಹೊನ್ನಾಳ್ಳಿ ಶಾಸಕ ಎಂ ಪಿ ರೇಣುಕಾಚಾರ್ಯರ ಗಮನಕ್ಕೆ ಬಂದಾಗ ಅವರು ಜಿಲ್ಲಾಧಿಕಾರಿಗೆ ಫೋನ್​ ಮಾಡಿದ್ದಾರೆ.

ಕೊರೊನಾ ಸೋಂಕಿತರ ಕರೆದೊಯ್ಯಲು ಆಂಬುಲೆನ್ಸ್ ಕೊರತೆ?
ಕೊರೊನಾ ಸೋಂಕಿತರ ಕರೆದೊಯ್ಯಲು ಆಂಬುಲೆನ್ಸ್ ಕೊರತೆ?

By

Published : Aug 3, 2020, 9:06 PM IST

Updated : Aug 3, 2020, 11:31 PM IST

ದಾವಣಗೆರೆ: ನ್ಯಾಮತಿ ತಾಲೂಕಿನ ಸುರಹೊನ್ನೆ ಗ್ರಾಮದಲ್ಲಿಂದು 12 ಮಂದಿಗೆ ಕೊರೊನಾ ಪಾಸಿಟಿವ್ ಬಂದಿದ್ದರೂ ಆ್ಯಂಬುಲೆನ್ಸ್ ಬಂದಿರಲಿಲ್ಲ. ಸುರಹೊನ್ನೆ ಕ್ವಾಟ್ರಸ್ ಸುತ್ತಮುತ್ತ ಸುಮಾರು 7,500ಕ್ಕೂ ಹೆಚ್ಚು ಮಂದಿ ವಾಸವಿದ್ದು, ಈ ಪ್ರದೇಶದಲ್ಲಿಯೇ ಇಂದು ಒಂದೇ ದಿನ 29 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ.

ಕೊರೊನಾ ಸೋಂಕಿತರನ್ನು ಕರೆದೊಯ್ಯಲು ಆ್ಯಂಬುಲೆನ್ಸ್ ಕೊರತೆ: ಡಿಸಿಗೆ ಫೋನಾಯಿಸಿದ ರೇಣುಕಾಚಾರ್ಯ

ಇಲ್ಲಿ ಆರು ಕಂಟೈನ್‌ಮೆಂಟ್ ಝೋನ್‌ಗಳಿವೆ. ಆ್ಯಂಬುಲೆನ್ಸ್ ಚಾಲಕನಿಗೆ ಸೋಂಕಿತರು ಕರೆ ಮಾಡಿದರೂ ಸ್ವಿಚ್ ಆಫ್ ಆಗಿದ್ದು ಗೊತ್ತಾಗಿದೆ. ಸೋಂಕಿತರನ್ನು ಆಸ್ಪತ್ರೆಗೆ ಕರೆದೊಯ್ಯಲು ಆ್ಯಂಬುಲೆನ್ಸ್ ಕೊರತೆ ಇದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಆರೋಗ್ಯ ಇಲಾಖೆಯ ನಿರ್ಲಕ್ಷ್ಯಕ್ಕೆ ಜನರು ಹಿಡಿಶಾಪ ಹಾಕುವಂತಾಗಿದೆ.

45 ಕುಟುಂಬಗಳಿಗೆ ಆಹಾರ ಕಿಟ್ ವಿತರಿಸಲು ಬಂದ ಹೊನ್ನಾಳಿ ಶಾಸಕ ಎಂ. ಪಿ. ರೇಣುಕಾಚಾರ್ಯರಿಗೆ ಸ್ಥಳೀಯರು ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಜಿಲ್ಲಾಧಿಕಾರಿ ಮಹಾಂತೇಶ್ ಆರ್. ಬೀಳಗಿ ಅವರಿಗೆ ಕರೆ‌ ಮಾಡಿದ ರೇಣುಕಾಚಾರ್ಯ ರೋಗಿಗಳನ್ನು‌ ಕರೆದೊಯ್ಯಲು ಆ್ಯಂಬುಲೆನ್ಸ್ ಬಾರದಿದ್ದರೆ ಹೇಗೆ? ಡಿಹೆಚ್​​ಒ ಗೆ ಕರೆ ಮಾಡಿದರೆ ಫೋನ್​ ಸ್ವಿಚ್ ಆಫ್ ಆಗಿದೆ. ಸೋಂಕಿತರ ಜೊತೆಗಿರುವ ಜನರ ಗತಿಯೇನು? ತಕ್ಷಣವೇ ವ್ಯವಸ್ಥೆ ಮಾಡಿ ಎಂದು ತಾಕೀತು ಮಾಡಿದರು.

Last Updated : Aug 3, 2020, 11:31 PM IST

ABOUT THE AUTHOR

...view details