ಕರ್ನಾಟಕ

karnataka

ETV Bharat / state

ಅದು ಭ್ರಷ್ಟಾಚಾರ ನಿರ್ಮೂಲನಾ ವೇದಿಕೆ ಅಲ್ಲ, ಸುಲಿಗೆ ಮಾಡುವ ಸಂಘಟನೆ: ರೇಣುಕಾಚಾರ್ಯ ಆಕ್ರೋಶ - corruption eradication forum

ಹೊನ್ನಾಳಿ ಕ್ಷೇತ್ರದಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ ಎಂದು ಭ್ರಷ್ಟಾಚಾರ ನಿರ್ಮೂಲನಾ ವೇದಿಕೆ ವತಿಯಿಂದ ಕೇಳಿ ಬಂದ ಆರೋಪಗಳಿಗೆ ಪ್ರತಿಕ್ರಿಯಿಸಿದ ಶಾಸಕ, ಅದು ಭ್ರಷ್ಟಾಚಾರ ನಿರ್ಮೂಲನಾ ವೇದಿಕೆ ಅಲ್ಲ. ಸುಲಿಗೆ ಮಾಡುವ ಸಂಘಟನೆ ಎಂದು ತಿರುಗೇಟು ನೀಡಿದರು.

ರೇಣುಕಾಚಾರ್ಯ
renukacharya

By

Published : Oct 27, 2022, 10:38 AM IST

ದಾವಣಗೆರೆ: ಅದು ಭ್ರಷ್ಟಾಚಾರ ನಿರ್ಮೂಲನಾ ವೇದಿಕೆ ಅಲ್ಲ. ಸುಲಿಗೆ ಮಾಡುವ ಸಂಘಟನೆ ಎಂದು ಹೊನ್ನಾಳಿ ಶಾಸಕ ಎಂಪಿ ರೇಣುಕಾಚಾರ್ಯ ಆಕ್ರೋಶ ವ್ಯಕ್ತಪಡಿಸಿದರು. ಹೊನ್ನಾಳಿ ಕ್ಷೇತ್ರದಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ ಎಂದು ಭ್ರಷ್ಟಾಚಾರ ನಿರ್ಮೂಲನಾ ವೇದಿಕೆ ವತಿಯಿಂದ ಕೇಳಿ ಬಂದ ಆರೋಪಗಳಿಗೆ ಜಿಲ್ಲೆಯ ಹೊನ್ನಾಳಿ ಪಟ್ಟಣದಲ್ಲಿ ರೇಣುಕಾಚಾರ್ಯ ಪ್ರತಿಕ್ರಿಯಿಸಿದ್ದಾರೆ.

ಭ್ರಷ್ಟಾಚಾರ ನಿರ್ಮೂಲನಾ ವೇದಿಕೆ ಮಾಡಿಕೊಂಡು ಜನರನ್ನ, ಅಧಿಕಾರಿಗಳನ್ನ ಸುಲಿಗೆ ಮಾಡಲಾಗುತ್ತಿದೆ. ಇವರೆಲ್ಲಾ ಒಂದು ರೀತಿ ದಗಾಕೋರರು. ಅದು ಭ್ರಷ್ಟಾಚಾರ ನಿರ್ಮೂಲನೆ ಅಲ್ಲ, ಸುಲಿಗೆ ಮಾಡುವ ಸಂಘಟನೆ ಎಂದು ಶಾಸಕ ಎಂಪಿ ರೇಣುಕಾಚಾರ್ಯ ಆಕ್ರೋಶ ವ್ಯಕ್ತಪಡಿಸಿದರು.

ಭ್ರಷ್ಟಾಚಾರ ನಿರ್ಮೂಲನಾ ವೇದಿಕೆ ವಿರುದ್ಧ ಶಾಸಕ ಎಂಪಿ ರೇಣುಕಾಚಾರ್ಯ ಆಕ್ರೋಶ

ಇದನ್ನೂ ಓದಿ:ಮಹಿಳೆಯರೊಂದಿಗೆ ಭರ್ಜರಿ ಸ್ಟೆಪ್​ ಹಾಕಿದ ಶಾಸಕ ರೇಣುಕಾಚಾರ್ಯ- ವಿಡಿಯೋ

ದಾವಣಗೆರೆ ಜಿಲ್ಲೆಯ ಹೊನ್ನಾಳಿ ಮತ ಕ್ಷೇತ್ರದಲ್ಲಿ ಮೂರು ಸಾವಿರ ಕೋಟಿ ರೂಪಾಯಿ ಅನುದಾನ ಎಲ್ಲಿ ಬಳಕೆ ಆಗಿದೆ ಎಂದು ಪ್ರಶ್ನೆ ಮಾಡಿದ್ದ ಹೊನ್ನಾಳಿ ಭ್ರಷ್ಟಾಚಾರ ನಿರ್ಮೂಲನಾ ವೇದಿಕೆ ಗುರುಪಾದಯ್ಯ ಮಠದರವರಿಗೆ ಖಡಕ್ ಎಚ್ಚರಿಕೆ ನೀಡಿದ ಶಾಸಕ ರೇಣುಕಾಚಾರ್ಯ, ನನ್ನ ವಿರುದ್ಧ ಯಾವುದೇ ಹೇಳಿಕೆ ನೀಡಿದ್ರೆ ಹುಷಾರ್​. ನಾನು ಹೊನ್ನಾಳಿ ಕ್ಷೇತ್ರದ ಜನತೆಗೆ ಲೆಕ್ಕ ಕೊಡುವೆ. ನೀ ಯಾರು ಲೆಕ್ಕ ಕೇಳಲು ಎಂದು ವಾಗ್ದಾಳಿ ನಡೆಸಿದರು.

ಇದನ್ನೂ ಓದಿ:ನಾನು ಅಧಿಕಾರ ತ್ಯಾಗ ಮಾಡಿದ್ದೇನೆ, ನನಗೆ ಅನ್ಯಾಯವಾಗಿದೆ: ಎಂ ಪಿ ರೇಣುಕಾಚಾರ್ಯ ಅಸಮಾಧಾನ

ABOUT THE AUTHOR

...view details