ದಾವಣಗೆರೆ:ನಕಲಿ ಜಾತಿ ಸರ್ಟಿಫಿಕೇಟ್ ವಿವಾದದ ಕಾವು ದಿನೇ ದಿನೇ ಏರುತ್ತಲೇ ಇದೆ. ಶಾಸಕ ರೇಣುಕಾಚಾರ್ಯ ಹಾಗು ಅವರ ಸಹೋದರ ದ್ವಾರಕೇಶ್ವರಯ್ಯ ವಿರುದ್ಧ ದಲಿತ ಪರ ಸಂಘಟನೆಗಳು ಕೆಂಡಕಾರುತ್ತಿವೆ. ಬೇಡ ಜಂಗಮ ನಕಲಿ ಎಸ್ಸಿ ಸರ್ಟಿಫಿಕೇಟ್ ಪಡೆದ ರೇಣುಕಾಚಾರ್ಯ ಕುಟುಂಬದ ವಿರುದ್ಧ ಕಾನೂನು ಕ್ರಮಕ್ಕೆ ದಲಿತ ಸಂಘಟನೆಗಳು ಪಟ್ಟು ಹಿಡಿದು ಇಂದು ಹೊನ್ನಾಳಿಯಲ್ಲಿ ಬೃಹತ್ ಪ್ರತಿಭಟನೆ ಮಾಡಿ ತಮ್ಮ ಶಕ್ತಿ ಪ್ರದರ್ಶನ ಮಾಡಿದರು.
ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ ಇಡೀ ಕುಟುಂಬ ನಕಲಿ ಬೇಡ ಜಂಗಮ ಎಸ್ಸಿ ಜಾತಿ ಪ್ರಮಾಣಪತ್ರ ಪಡೆದಿರುವುದು ಜಗತ್ ಜಾಹಿರ್ ಆಗಿದೆ. ನಕಲಿ ಜಾತಿ ಸರ್ಟಿಫಿಕೇಟ್ನ್ನು ರೇಣುಕಾಚಾರ್ಯ ಮಗಳು ಚೇತನಾ, ಅವರ ಸಹೋದರ ದ್ವಾರಕೇಶ್ವರಯ್ಯ ಕುಟುಂಬ ನಕಲಿ ಎಸ್ಸಿ ಸರ್ಟಿಫಿಕೇಟ್ ಬೆಂಗಳೂರು ಉತ್ತರ ತಾಲೂಕಿನಲ್ಲಿ ಪಡೆದಿರುವುದು ತುಂಬಿದ ಸಧನದಲ್ಲಿ ಶಾಸಕ ರೇಣುಕಾಚಾರ್ಯ ಒಪ್ಪಿಕೊಂಡು, ತಮ್ಮ ಮಗಳಿಗೆ ಅದನ್ನು ಹಿಂದಿರುಗಿಸುವಂತೆ ಒತ್ತಾಯಿಸಿದ್ದೆ ಎಂದು ಸ್ಪಷ್ಟನೆ ನೀಡಿದ್ದರು.