ಕರ್ನಾಟಕ

karnataka

ETV Bharat / state

'ಲವ್ ಮಾಕ್ ಟೆಲ್' ಜ. 31 ಕ್ಕೆ ತೆರೆಗೆ: ಚಿತ್ರಕ್ಕೆ ಧ್ವನಿ ನೀಡಿರುವ ಸುದೀಪ್ ಮೆಚ್ಚುಗೆ - Love Mocktail movie

ಮದರಂಗಿ, ಚಾರ್ಲಿ, ರುದ್ರತಾಂಡವ, ಹುಚ್ಚ-2 ಸಿನಿಮಾಗಳಲ್ಲಿ ನಟಿಸಿದ್ದ ಡಾರ್ಲಿಂಗ್ ಕೃಷ್ಣ ಹಾಗೂ ನಟಿ ಮಿಲನ ನಾಗರಾಜ್ ಅಭಿನಯಿಸಿರುವ ಲವ್ ಮಾಕ್ ಟೆಲ್ ಸಿನಿಮಾ ಇದೇ 31ರಂದು ರಾಜ್ಯಾದ್ಯಂತ ತೆರೆ ಕಾಣಲಿದೆ.

Love maktele movie team press meet
ಲವ್ ಮಾಕ್ ಟೆಲ್ ಚಿತ್ರತಂಡ

By

Published : Jan 22, 2020, 1:32 PM IST

ದಾವಣಗೆರೆ: 'ಲವ್ ಮಾಕ್ ಟೆಲ್' ಸಿನಿಮಾ ಇದೇ 31ರಂದು ರಾಜ್ಯಾದ್ಯಂತ ತೆರೆ ಕಾಣಲಿದೆ. ಈ ಚಿತ್ರಕ್ಕೆ ಅಭಿನಯ ಚಕ್ರವರ್ತಿ ನಟ ಸುದೀಪ್ ಹಿನ್ನೆಲೆ ಧ್ವನಿ ನೀಡಿದ್ದಾರೆ.‌ ಮಾತ್ರವಲ್ಲ, ಚಿತ್ರದ ಸಂಭಾಷಣೆ ಕೇಳಿ ಫಿದಾ ಆಗಿದ್ದಾರೆ.

ಲವ್ ಮಾಕ್ ಟೆಲ್ ಚಿತ್ರತಂಡದ ಸುದ್ದಿಗೋಷ್ಟಿ

ಮದರಂಗಿ, ಚಾರ್ಲಿ, ರುದ್ರತಾಂಡವ, ಹುಚ್ಚ-2 ಸಿನಿಮಾಗಳಲ್ಲಿ ನಟಿಸಿದ್ದ ಡಾರ್ಲಿಂಗ್ ಕೃಷ್ಣ ಚಿತ್ರದ ನಾಯಕರಾಗಿದ್ದು, ನಾಯಕಿಯರಾಗಿ ಮಿಲನ ನಾಗರಾಜ್, ಅಮೃತ ಅಯ್ಯಂಗಾರ್, ರಚನಾ ನಟಿಸಿದ್ದಾರೆ. ಚಿತ್ರದಲ್ಲಿ ಐದು ಹಾಡುಗಳಿದ್ದು, ರಘು ದೀಕ್ಷಿತ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಕಥೆ, ಚಿತ್ರಕಥೆ, ಸಂಭಾಷಣೆ, ನಿರ್ದೇಶನದ ಜೊತೆಗೆ ನಿರ್ಮಾಣದ ಹೊಣೆಯನ್ನು ಕೃಷ್ಣ ಹೊತ್ತಿದ್ದು, ಮಿಲನ ನಾಗರಾಜ್ ಬಂಡವಾಳ ಹೂಡಿದ್ದಾರೆ.

ಇದೊಂದು ವಿಭಿನ್ನ ಪ್ರೀತಿ ಕಥಾ ಹಂದರ ಇರುವ ಚಿತ್ರ. ಎಲ್ಲರಿಗೂ ಇಷ್ಟವಾಗಲಿದೆ. ಮೈಸೂರು, ಬೆಂಗಳೂರು, ಉಡುಪಿ, ಮಂಗಳೂರು, ಕಳಸ ಸುತ್ತಮುತ್ತ ಚಿತ್ರದ ಚಿತ್ರೀಕರಣ ನಡೆದಿದ್ದು, ಈಗಾಗಲೇ ಚಿತ್ರದ ಟ್ರೈಲರ್, ಲಿರಿಕಲ್ ಸಾಂಗ್ ಅತಿ ಹೆಚ್ಚು ವೀಕ್ಷಣೆಗಳಿಸಿದೆ. ಇನ್ನು ಚಿತ್ರದ ಬಗ್ಗೆ ಸುದೀಪ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ನಾಯಕ ನಟ ಕೃಷ್ಣ, ನಾಯಕಿ ಮಿಲನ ನಾಗರಾಜ್ ತಿಳಿಸಿದರು.

ABOUT THE AUTHOR

...view details