ಕರ್ನಾಟಕ

karnataka

ETV Bharat / state

ಐದಾರು ದಶಕಗಳಿಂದ ದೀಪಾವಳಿ ಆಚರಣೆಗೆ ಬ್ರೇಕ್: ಹಬ್ಬದ ದಿನದಂದು ಆ ಗ್ರಾಮದಲ್ಲಿಲ್ಲ ಸಂಭ್ರಮ - ದೀಪಾವಳಿ ಹಬ್ಬ

ದಾವಣಗೆರೆ ತಾಲೂಕಿನ ಲೋಕಿಕೆರೆ ಗ್ರಾಮದಲ್ಲಿ ಐದಾರು ದಶಕಗಳಿಂದ ದೀಪಾವಳಿ ಹಬ್ಬದ ಆಚರಣೆ ಕೈಬಿಡಲಾಗಿದೆ. ಈ ಹಬ್ಬವನ್ನ ಆಚರಿಸಿದ್ರೆ ಏನೋ ಕೆಡುಕಾಗುತ್ತದೆ ಎಂಬ ಆತಂಕದಿಂದ ಈ ಗ್ರಾಮದ ಜನ ದೀಪಾವಳಿ ಆಚರಿಸುವುದಿಲ್ಲ.

lokikere village will not celebrate deepavali
ಐದಾರು ದಶಕಗಳಿಂದ ದೀಪಾವಳಿ ಆಚರಣೆಗೆ ಬ್ರೇಕ್

By

Published : Nov 3, 2021, 8:21 PM IST

ದಾವಣಗೆರೆ:ದಾವಣಗೆರೆ ತಾಲೂಕಿನ ಲೋಕಿಕೆರೆ ಗ್ರಾಮದಲ್ಲಿ ಬೆಳಕಿನ ಹಬ್ಬ ದೀಪಾವಳಿಯನ್ನು ಹಬ್ಬದ ದಿನವೇ ಆಚರಣೆ ಮಾಡುವುದಿಲ್ಲ.ದೀಪಾವಳಿ ಹಬ್ಬದಂದು ಈ ಗ್ರಾಮದಲ್ಲಿ ಕರಾಳ ದಿನವಂತೆ.

ಲೋಕಿಕೆರೆ ಗ್ರಾಮದಲ್ಲಿ ದೀಪಾವಳಿ ಹಬ್ಬ ಆಚರಣೆ ಇಲ್ಲ

ಐದಾರು ದಶಕಗಳಿಂದ ಈ ಗ್ರಾಮದ ಹಿರಿಯರು ದೀಪಾವಳಿ ಹಬ್ಬ ಆಚರಿಸುವುದನ್ನು ಬಿಟ್ಟಿದ್ದು,ಇಂದಿಗೂ ಅದನ್ನೇ ಮುಂದುವರಿಸಿಕೊಂಡು ಬರಲಾಗಿದೆ.ಪರಿಶಿಷ್ಟ ಜಾತಿ ಹಾಗೂ ಕುರುಬ ಸಮುದಾಯದವರೇ ಹೆಚ್ಚಿರುವ ಈ ಲೋಕಿಕೆರೆ ಗ್ರಾಮದಲ್ಲಿ ಕೆಲವರು ಗ್ರಾಮದ ಆಂಜನೇಯನ ತೇರಿನ ಸಮಯದಲ್ಲಿ, ಇನ್ನು ಕೆಲವರು ವಿಜಯದಶಮಿಯಂದು ದೀಪಾವಳಿ ರೂಪದಲ್ಲಿ ಹಿರಿಯರ ಹಬ್ಬ ಆಚರಣೆ ಮಾಡುತ್ತಾರೆ. ಇದನ್ನು ಹೊರತುಪಡಿಸಿ ದೀಪಾವಳಿ ಹಬ್ಬದಂದೇ ಆಚರಣೆ ಮಾಡಿದ್ರೇ ಏನೋ ಕೆಡಕಾಗುತ್ತೆ ಎಂಬ ಮೂಢನಂಬಿಕೆ ಈ ಗ್ರಾಮಸ್ಥರದು.

ಕೆಲ ವರ್ಷಗಳ ಹಿಂದೆ ಗ್ರಾಮದ ಕೆಲವು ಮಂದಿ ದೀಪಾವಳಿ ಹಬ್ಬ ಆಚರಿಸಲು ಕಾಶಿ ಹುಲ್ಲು ತರಲು ತೆರಳಿದವರು ಹಿಂದಿರುಗಲೇ ಇಲ್ವಂತೆ. ಇದರಿಂದ ಈ ಗ್ರಾಮದಲ್ಲಿ ದೀಪಾವಳಿ ಹಬ್ಬ ಆಚರಣೆ ಮಾಡಕೂಡದು ಎಂದು ಗ್ರಾಮದ ಹಿರಿಯರು ನಿರ್ಧಾರ ಮಾಡಿದ್ರಂತೆ.

ಇದನ್ನೂ ಓದಿ:ಬೆಳಕಿನ ಹಬ್ಬ: ಹುಬ್ಬಳ್ಳಿ ಮಾರುಕಟ್ಟೆಯಲ್ಲಿ ಖರೀದಿಗೆ ಮುಗಿಬಿದ್ದ ಜನ

ಇನ್ನು ಈ ಗ್ರಾಮದಲ್ಲಿ ಕೆಲವರು ಹಬ್ಬ ಮಾಡಲು ಯತ್ನಿಸಿ ಬೆನ್ನಲ್ಲೇ ಕೆಡಕಾಗಿರುವ ಉದಾಹರಣೆಗಳಿವೆಯಂತೆ. ಬೆಳಕಿನ ಹಬ್ಬವನ್ನು ಆಚರಣೆ ಮಾಡಲೇಬೇಕೆಂಬ ನಿರ್ಧಾರ ಮಾಡಿದ ಈ ಗ್ರಾಮದ ಯುವಕರು ಎಲ್ಲಾ ಹಿರಿಯ ಮುಖಂಡರನ್ನು ಕರೆದು ಸಭೆ ಮಾಡಿ ಚರ್ಚೆ ನಡೆಸಿದರು ಕೂಡ ಹಬ್ಬ ಆಚರಣೆ ಮಾಡಲು ಹಿರಿಯರು ಒಪ್ಪಿಗೆ ನೀಡಿಲ್ಲವಂತೆ‌.

ABOUT THE AUTHOR

...view details