ಕರ್ನಾಟಕ

karnataka

ETV Bharat / state

ವಾರೆಂಟ್ ಜಾರಿಗೆ ಲಂಚಕ್ಕೆ ಬೇಡಿಕೆ: ಬಸ್ಟ್ಯಾಂಡ್​ನಲ್ಲೇ ರೆಡ್​ಹ್ಯಾಂಡಾಗಿ ಕಾನ್​ಸ್ಟೇಬಲ್ ಲೋಕಾಯುಕ್ತ ಬಲೆಗೆ - ETV Bharath Karnataka

ಚೆಕ್ ಬೌನ್ಸ್ ಪ್ರಕರಣಕ್ಕೆ ವಾರೆಂಟ್ ಜಾರಿ ಮಾಡಲು ಲಂಚಕ್ಕೆ ಬೇಡಿಕೆ - ಹೆಡ್​ ಕಾನ್​ಸ್ಟೇಬಲ್​ ಮತ್ತು ಆತನ ಮಾವ ಲೋಕಾಯುಕ್ತ ಖೆಡ್ಡಾಕ್ಕೆ - ಬಸ್ ನಿಲ್ದಾಣದಲ್ಲಿ ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ದಾಳಿ.

Lokayukru arrested  constable who demanded a bribe
ವಾರೆಂಟ್ ಜಾರಿ ಮಾಡಲು ಲಂಚಕ್ಕೆ ಬೇಡಿಕೆ ಇಟ್ಟ ಕಾನ್ಸಟೇಬಲ್​ನ್ನು ಲೋಕಾಯುಕ್ರು ಬಂಧಿಸಿದ್ದಾರೆ

By

Published : Dec 28, 2022, 7:25 AM IST

ದಾವಣಗೆರೆ:ತಮಿಳುನಾಡು ಮೂಲದ ಆರೋಪಿಗೆ ವಾರೆಂಟ್ ಜಾರಿ ಮಾಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಹೆಡ್ ಕಾನ್​ಸ್ಟೇಟೇಬಲ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುನಾಡು ಮೂಲದ ಆರೋಪಿಗೆ ವಾರೆಂಟ್ ಜಾರಿ ಮಾಡಲು ಹೊನ್ನಾಳಿ ಪೊಲೀಸ್ ಠಾಣೆಯ ಹೆಡ್ ಕಾನ್​ಸ್ಟೇಬಲ್ ಹಾಗೂ ಅವರ ಮಾವ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ಭರತ್ ಲೋಕಾಯುಕ್ತ ಬಲೆಗೆ ಬಿದ್ದಿರುವ ದಾವಣಗೆರೆ ಜಿಲ್ಲೆಯ ಹೊನ್ನಾಳಿ ಪೊಲೀಸ್ ಠಾಣೆಯ ಹೆಡ್ ಕಾನ್​ಸ್ಟೇಬಲ್. ಹೊನ್ನಾಳಿ ಬಸ್ ನಿಲ್ದಾಣದಲ್ಲಿ ಹೆಡ್ ಕಾನ್​ಸ್ಟೇಬಲ್ ಭರತ್ ತಮ್ಮ ಮಾವ ಸುರೇಶ ಮೂಲಕ 15 ಸಾವಿರ ರೂಪಾಯಿ ಲಂಚ ಪಡೆಯುವಾಗ ಲೋಕಾಯುಕ್ತ ತೋಡಿದ ಖೆಡ್ಡಾಕ್ಕೆ ಬಿದ್ದಿದ್ದಾನೆ.

20 ಸಾವಿರ ಲಂಚಕ್ಕೆ ಬೇಡಿಕೆ:ಗುಡ್ಡದ ಮಾದಾಪುರ ಗ್ರಾಮದ ಅವಿನಾಶ ಎಂಬುವರ ಕಡೆಯಿಂದ ಲಂಚ ಪಡೆಯುವಾಗ ಲೋಕಾಯುಕ್ತ ಪೊಲೀಸರು ದಾಳಿ ಮಾಡಿದ್ದಾರೆ. ಚೆಕ್ ಬೌನ್ಸ್ ಕೇಸ್​ನಲ್ಲಿ ತಮಿಳುನಾಡು ಮೂಲದ ಆರೋಪಿತರಿಗೆ ವಾರೆಂಟ್ ಜಾರಿ ಮಾಡಲು 20 ಸಾವಿರ ರೂಪಾಯಿ ಲಂಚಕ್ಕೆ ಭರತ್​ ಬೇಡಿಕೆ ಇಟ್ಟಿದ್ದರಂತೆ. 20 ಸಾವಿರ ರೂಪಾಯಿಯಲ್ಲಿ 15 ಸಾವಿರ ರೂಪಾಯಿ ಹಣವನ್ನು ತಮ್ಮ ಮಾವ‌ ಸುರೇಶ ಮೂಲಕ ಪಡೆದಿದ್ದರು. ಈ ವೇಳೆ ಲೋಕಾಯುಕ್ತ ಎಸ್​ಪಿ ಎಂ.ಎಸ್. ಕೌಲಾಪುರೆ ನೇತೃತ್ವದಲ್ಲಿ ಇನ್​ಸ್ಪೆಕ್ಟರ್​ಗಳಾದ ರಾಷ್ಟ್ರಪತಿ ಹಾಗೂ ಆಂಜನೇಯ ದಾಳಿ ನಡೆಸಿ ಹೆಡ್ ಭರತ್ ಹಾಗೂ ಸುರೇಶ್​ನನ್ನು ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ:ಲೋಕಾಯುಕ್ತ ಬಲೆಗೆ ಬಿದ್ದ ಭೂ ಅಧೀಕ್ಷಕ: ರೈತನಿಂದ ಲಂಚ ಪಡೆಯುತ್ತಿದ್ದ ಚಿತ್ತಣ್ಣ ಪಾಟೀಲ

ABOUT THE AUTHOR

...view details