ದಾವಣಗೆರೆ: ಹೆಣ್ಣು ಮಗು ಜನಿಸಿದೆ ಎಂದು ಮಗುವನ್ನು ಎತ್ತಿಕೊಂಡು ಮೇಲಿಂದ ನೆಲಕ್ಕೆ ಬಿಟ್ಟು ಕೊಂದುಹಾಕಿದ್ದಾನೆ ಎಂದು ಆರೋಪಿಸಿ ತಂದೆಗೆ ಸಂಬಂಧಿಕರೇ ಮನಬಂದಂತೆ ಥಳಿಸಿ ಮೆರವಣಿಗೆ ಮಾಡಿರುವ ಘಟನೆ ಬೆಣ್ಣೆ ನಗರಿಯ ಅಖ್ತರ್ ರಜಾ ವೃತ್ತದ ಬಳಿ ನಡೆದಿದೆ.
ದಾವಣಗೆರೆ ನಗರದ ಮಿಲ್ಲತ್ ಕಾಲೋನಿಯ ನಿವಾಸಿ ಮನ್ಸೂರ್ ಥಳಿತಕ್ಕೊಳಗಾದವರು. ಮಿಲ್ಲತ್ ಕಾಲೋನಿಯಲ್ಲಿ ಕಳೆದ ಮೂರು ತಿಂಗಳ ಹಿಂದೆ ಮಗಳನ್ನು ಸಾಯಿಸಿರುವ ಆರೋಪದ ಮೇಲೆ ಪತ್ನಿ ಕಡೆಯವರು, ಕಳೆದ ದಿನ ಆರೋಪಿ ಗಂಡ ಮನ್ಸೂರ್ ಹಾಗೂ ಆತನ ತಮ್ಮ ಮೈನುದ್ದೀನ್ನನ್ನು ಹಿಗ್ಗಾಮುಗ್ಗಾ ಥಳಿಸಿ ಬೀದಿಯಲ್ಲಿ ಮೆರವಣಿಗೆ ಮಾಡಿದ್ದಾರೆ.
ಅಖ್ತರ್ ರಜಾ ವೃತ್ತದಿಂದ ಬಾಷಾ ನಗರದ ತನಕ ಮನಬಂದಂತೆ ಥಳಿಸಿ ಮೆರವಣಿಗೆ ಮಾಡಿದ್ರು. ಈ ಹಿಂದೆ ಮಸೀದಿ ಜಮಾಯತ್ನಿಂದ ಪಂಚಾಯಿತಿ ಮಾಡಲು ಸಭೆ ಕರೆಯಲಾಗಿತ್ತು. ಸಭೆಗೆ ಆರೋಪಿ ಬಾರದ ಹಿನ್ನೆಲೆ ಸಂಬಂಧಿಸಕರು ಮನ್ಸೂರ್ ಹಾಗೂ ಆತನ ತಮ್ಮ ಮೈನುದ್ದೀನ್ ಅನ್ನು ಹಿಡಿದು ಜಮಾಯತ್ ಬಳಿ ಕರೆ ತಂದಿದ್ದಾರೆ.