ದಾವಣಗೆರೆ: ಈ ಹಿಂದೆಯೂ ಕೂಡ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಸಿಎಂ ಅಭ್ಯರ್ಥಿ ಎಂದು ಘೋಷಣೆ ಮಾಡಿದ್ದರು. ಈಗಲೂ ಕೂಡ ಲಿಂಗಾಯತ ಸಿಎಂ ಬಗ್ಗೆ ಒಮ್ಮತದ ಅಭಿಪ್ರಾಯವಿದೆ. ಅದೇ ಕಾಂಗ್ರೆಸ್ನಲ್ಲಿ ಧಮ್ ಇದ್ರೆ ಲಿಂಗಾಯತ ಮುಖ್ಯಮಂತ್ರಿ ಯಾರು ಎಂದು ಘೋಷಣೆ ಮಾಡಲಿ, ಮೊದಲು ಲಿಂಗಾಯತರನ್ನೇ ಸಿಎಂ ಮಾಡುವುದಾಗಿ ಘೋಷಣೆ ಮಾಡಿ ಚುನಾವಣೆಗೆ ಹೋಗಲಿ ಎಂದು ಕೈ ನಾಯಕರಿಗೆ ಸಂಸದ ಜಿ.ಎಂ.ಸಿದ್ದೇಶ್ವರ್ ಸವಾಲೆಸೆದರು.
ದಾವಣಗೆರೆ ಜಿಲ್ಲೆಯ ಹೊನ್ನಾಳಿ ಪಟ್ಟಣದಲ್ಲಿಂದು ಮಾತನಾಡಿದ ಅವರು, ಲಿಂಗಾಯತರು ಬಿಜೆಪಿ ಬಿಟ್ಟು ಹೋಗಲ್ಲ. ಮತ್ತೆ 130 ಸ್ಥಾನಗಳನ್ನು ಗೆದ್ದು ಅಧಿಕಾರಕ್ಕೆ ಬರಲಿದ್ದೇವೆ. ಬೊಮ್ಮಾಯಿ ಅವರೇ ಸಿಎಂ ಆಗಲಿದ್ದಾರೆ. ಕಾಂಗ್ರೆಸ್ನವರು ಅವರನ್ನು ಇವರನ್ನು ಪಕ್ಷಕ್ಕೆ ಕರೆದುಕೊಂಡು ಟ್ರಂಪ್ ಕಾರ್ಡ್ ಮಾಡ್ತಿದ್ದಾರೆ. ಇದೇ ತಿಂಗಳು 24 ರ ನಂತರ ದಾವಣಗೆರೆಯಲ್ಲಿ ರಾಷ್ಟ್ರೀಯ ನಾಯಕರ ಪ್ರವಾಸ ಇತ್ತು. ಆದರೆ 22ರಂದು ಮುಸ್ಲಿಮರ ಹಬ್ಬ ಇರುವುದರಿಂದ ಅದನ್ನು ಮುಂದೂಡಲಾಗಿದೆ ಎಂದರು.