ದಾವಣಗೆರೆ: ಆಹಾರಕ್ಕಾಗಿ ಗ್ರಾಮದೊಳಗೆ ನುಗ್ಗಿದ ಚಿರತೆ ಜನರ ಮೇಲೆ ದಾಳಿ ನಡೆಸಿದ್ದು, ಮೂವರು ಗಾಯಗೊಂಡಿರುವ ಘಟನೆ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಹೊಳೆ ಸಿರಿಗೆರೆ ಗ್ರಾಮದಲ್ಲಿ ನಡೆದಿದೆ.
ಹರಿಹರದ ಗ್ರಾಮವೊಂದಕ್ಕೆ ನುಗ್ಗಿದ ಚಿರತೆ: ಮೂವರ ಮೇಲೆ ದಾಳಿ - KN_DVG_04_CHIRATHE_DAALI_KA10016
ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಹೊಳೆ ಸಿರಿಗೆರೆ ಗ್ರಾಮದಲ್ಲಿ ಆಹಾರಕ್ಕಾಗಿ ಗ್ರಾಮದೊಳಗೆ ಚಿರತೆ ನುಗ್ಗಿದೆ. ಆಗ ಮನೆಯೊಂದರಲ್ಲಿ ಅವಿತು ಕುಳಿತಿದ್ದು, ನಂತರ ಮನೆಯಿಂದ ತಪ್ಪಿಸಿಕೊಂಡು ಹೋಗುವಾಗ ಮೂವರ ಮೇಲೆ ದಾಳಿ ನಡೆಸಿದೆ. ಘಟನೆಯಲ್ಲಿ ಮೂವರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
![ಹರಿಹರದ ಗ್ರಾಮವೊಂದಕ್ಕೆ ನುಗ್ಗಿದ ಚಿರತೆ: ಮೂವರ ಮೇಲೆ ದಾಳಿ](https://etvbharatimages.akamaized.net/etvbharat/prod-images/768-512-3715020-thumbnail-3x2-tiger.jpg)
ಚಿರತೆ ದಾಳಿ ನಡೆಸಿರುವುದು
ಚಿರತೆ ದಾಳಿಯಿಂದ ಆತಂತಕ್ಕೆ ಒಳಗಾದ ಗ್ರಾಮಸ್ಥರು
ಆಹಾರಕ್ಕಾಗಿ ಗ್ರಾಮದೊಳಗೆ ಚಿರತೆ ನುಗ್ಗಿದ್ದು, ಮನೆಯೊಂದರಲ್ಲಿ ಅವಿತು ಕುಳಿತಿದೆ. ಈ ವೇಳೆ ಮನೆಯಿಂದ ತಪ್ಪಿಸಿಕೊಂಡು ಹೋಗುವಾಗ ಮೂವರ ಮೇಲೆ ದಾಳಿ ನಡೆಸಿದೆ. ಘಟನೆಯಲ್ಲಿ ಮೂವರು ಗಾಯಗೊಂಡಿದ್ದು, ಗಾಯಗೊಂಡವರನ್ನು ಹರಿಹರ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇದೀಗ ಚಿರತೆ ಪೊದೆಯೊಳಗೆ ಅವಿತು ಕುಳಿತಿದೆ ಎನ್ನಲಾಗ್ತಿದೆ. ಸ್ಥಳಕ್ಕೆ ಹರಿಹರ ಗ್ರಾಮಾಂತರ ಪೊಲೀಸರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಆಗಮಿಸಿದ್ದು, ಚಿರತೆ ಹಿಡಿಯಲು ಬಲೆ ಹಾಕಿ ಕಾದು ಕುಳಿತಿದ್ದಾರೆ. ಚಿರತೆಯ ಆಗಮನದಿಂದ ಗ್ರಾಮದಲ್ಲಿ ಆತಂಕ ಮನೆ ಮಾಡಿದೆ.