ಕರ್ನಾಟಕ

karnataka

ETV Bharat / state

ದಾವಣಗೆರೆಯಲ್ಲಿ ಮಹಿಳೆಯನ್ನು ಬಲಿ ಪಡೆದು ಆತಂಕ ಮೂಡಿಸಿದ್ದ ಚಿರತೆ ಸೆರೆ - ವಿಡಿಯೋ - etv bharath kannada news

ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಅಲದಹಳ್ಳಿ ಹಾಗೂ ಮುಷ್ಯಾನ ಹಾಳ್ ಗ್ರಾಮದ ಬಳಿ ಇರಿಸಲಾಗಿದ್ದ ಬೋನ್​ನಲ್ಲಿ ಚಿರತೆ ಸೆರೆಯಾಗಿದ್ದು, ಇಡೀ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.

ದಾವಣಗೆರೆಯಲ್ಲಿ ಚಿರತೆ ಸೆರೆ
ದಾವಣಗೆರೆಯಲ್ಲಿ ಚಿರತೆ ಸೆರೆ

By

Published : Aug 30, 2022, 5:56 PM IST

ದಾವಣಗೆರೆ:ಜಿಲ್ಲೆಯ ಹೊನ್ನಾಳಿ ತಾಲೂಕಿನ ಫಲವನಹಳ್ಳಿಯಲ್ಲಿ ಕೂಲಿ ಕಾರ್ಮಿಕ ಮಹಿಳೆಯನ್ನು ಕೊಂದು ಇಡೀ ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿದ್ದ ಚಿರತೆ ಸೆರೆಯಾಗಿದೆ.

ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಅಲದಹಳ್ಳಿ ಹಾಗೂ ಮುಷ್ಯಾನ ಹಾಳ್ ಗ್ರಾಮದ ಬಳಿ ಇರಿಸಲಾಗಿದ್ದ ಬೋನ್​ನಲ್ಲಿ ಚಿರತೆ ಸೆರೆಯಾಗಿದ್ದು, ಇಡೀ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.

ಬೋನ್​ನಲ್ಲಿ ಸೆರೆಯಾದ ಚಿರತೆ: ಹೊನ್ನಾಳಿ ಅರಣ್ಯ ವ್ಯಾಪ್ತಿಗೆ ಬರುವ ಅಲದಹಳ್ಳಿ ಹಾಗೂ ಮುಷ್ಯಾನ ಹಾಳ್ ಗ್ರಾಮಗಳ ಗಡಿಭಾಗದಲ್ಲಿ ಚಿರತೆ ಸೆರೆಗೆ ಅರಣ್ಯ ಇಲಾಖೆಯ ಸಿಬ್ಬಂದಿ ಎರಡು ಬೋನು​ಗಳನ್ನು ಅಳವಡಿಕೆ ಮಾಡಿದ್ದರು. ಎರಡು ಬೋನುಗಳ ಪೈಕಿ ಒಂದರಲ್ಲಿ ಈ ಪುಂಡ ಚಿರತೆ ಸೆರೆಯಾಗಿದೆ.

ದಾವಣಗೆರೆಯಲ್ಲಿ ಚಿರತೆ ಸೆರೆ

ಇನ್ನು‌, ಸೆರೆಯಾದ ಚಿರತೆಗೆ ಗಾಯಳಾಗಿದ್ದು, ಅದನ್ನು ಶಿವಮೊಗ್ಗ ಬಳಿಯ ಲಯನ್ ಸಫಾರಿಗೆ ಕೊಂಡೊಯ್ದು ಅಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗುವುದೆಂದು ಅರಣ್ಯ ಇಲಾಖೆಯ ಡಿಎಫ್ಓ‌ ಜಗನ್ನಾಥ್ ಹಾಗೂ ಹೊನ್ನಾಳಿ ರೇಂಜರ್​ ಆಫೀಸರ್ ಯೋಗೇಶ್​ ಅವರು ಮಾಹಿತಿ ನೀಡಿದ್ರು.

ಕೂಲಿ ಕಾರ್ಮಿಕ ಮಹಿಳೆ ಬಲಿ: ಒಂದು ವಾರದಿಂದ ಸ್ಥಳದಲ್ಲೇ ಮೊಕ್ಕಾಂ ಹೂಡಿರುವ ಅರಣ್ಯ ಇಲಾಖೆಯ ಸಿಬ್ಬಂದಿ ಚಿರತೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ಚಿರತೆ ಕಳೆದ ಒಂದು‌ ವಾರದ ಹಿಂದೆ ಜಮೀನಿನಲ್ಲಿ ಕಳೆ ಕೀಳುತ್ತಿದ್ದ ಕೂಲಿ ಕಾರ್ಮಿಕ ಮಹಿಳೆ ಕಮಲಬಾಯಿ ಎಂಬುವವರನ್ನು ಬಲಿ ಪಡೆದಿತ್ತು. ಈ ಘಟನೆ ಬಳಿಕ ಜಿಲ್ಲೆಯ ಜನರಲ್ಲಿ ಆತಂಕ ಮನೆಮಾಡಿತ್ತು.

ಓದಿ:ಶಿವಮೊಗ್ಗದಲ್ಲಿ ಬೋನಿಗೆ ಬಿದ್ದ ಚಿರತೆ.. ನಿಟ್ಟುಸಿರು ಬಿಟ್ಟ ಜನತೆ

ABOUT THE AUTHOR

...view details