ದಾವಣಗೆರೆ:ಚಿರತೆ ಹಾಗೂ ಅದರ ಮರಿಗಳು ಏಕಾಏಕಿಯಾಗಿ ಕುರಿ ಹಿಂಡಿನ ಮೇಲೆ ದಾಳಿ ನಡೆಸಿದ್ದು, ಒಂಬತ್ತು ಕುರಿಗಳನ್ನು ಕೊಂದು ಹಾಕಿರುವ ಘಟನೆ ದಾವಣಗೆರೆಯ ಹರಿಹರ ತಾಲೂಕಿನ ಧೂಳೆಹೊಳೆ ಗಡಿಭಾಗದಲ್ಲಿ ನಡೆದಿದೆ.
ಕುರಿ ಹಿಂಡಿನ ಮೇಲೆ ಚಿರತೆ ದಾಳಿ: 9 ಕುರಿಗಳು ಸಾವು - undefined
ಕುರಿ ಹಿಂಡಿನ ಮೇಲೆ ದಾಳಿ ನಡೆಸಿದ ಚಿರತೆವೊಂದು 9 ಕುರಿಗಳನ್ನು ಕೊಂದು ಹಾಕಿರುವ ಘಟನೆ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಧೂಳೆಹೊಳೆ ಗಡಿಭಾಗದಲ್ಲಿ ನಡೆದಿದೆ.
![ಕುರಿ ಹಿಂಡಿನ ಮೇಲೆ ಚಿರತೆ ದಾಳಿ: 9 ಕುರಿಗಳು ಸಾವು](https://etvbharatimages.akamaized.net/etvbharat/prod-images/768-512-3747953-thumbnail-3x2-dvd.jpg)
ಕುರಿಗಳನ್ನು ಕೊಂದ ಚಿರತೆ
ಕಳೆದ ಮೂರು ದಿನಗಳಿಂದ ಈ ಭಾಗದಲ್ಲಿ ಚಿರತೆಗಳ ಓಡಾಟ ಕಂಡು ಬಂದಿದ್ದು, ಹೊಳೆಸಿರಿಗೆರೆ ಗ್ರಾಮದಲ್ಲಿ ಮೊನ್ನೆ ಮೂವರ ಮೇಲೆ ಚಿರತೆ ಅಟ್ಯಾಕ್ ಮಾಡಿ ಗಾಯಗೊಳಿಸಿತ್ತು. ಈಗ 9 ಕುರಿಗಳನ್ನು ಸಾಯಿಸಿದೆ ಎಂದು ತಿಳಿದು ಬಂದಿದೆ.
ಕುರಿಗಳನ್ನು ಕೊಂದ ಚಿರತೆ
ಚಿರತೆ ಕಾಟದಿಂದ ಸ್ಥಳೀಯರಲ್ಲಿ ಭಯದ ವಾತವರಣ ನಿರ್ಮಾಣವಾಗಿದ್ದು. ಎರಡು ದಿನಗಳಿಂದ ಚಿರತೆಗಳಿಗಾಗಿ ಅರಣ್ಯ ಇಲಾಖೆ ಪ್ರಯತ್ನ ನಡೆಸುತ್ತಿದ್ದು, ಇಲ್ಲೊಯವರೆಗೆ ಅದರಲ್ಲಿ ಯಶಸ್ವಿಯಾಗಿಲ್ಲ.