ಕರ್ನಾಟಕ

karnataka

ETV Bharat / state

ದೇವದಾಸಿ ಪದ್ಧತಿ ಮುಂದುವರೆಸಿದರೆ ಕಾನೂನು ಕ್ರಮ: ಶಶಿಕಲಾ ವಿ. ಟೆಂಗಳಿ - ದಾವಣಗೆರೆ

ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿಂದು ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷರು ನಿಗಮಗಳ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದ್ದಾರೆ.

Progress review meeting
ಪ್ರಗತಿ ಪರಿಶೀಲನಾ ಸಭೆ

By

Published : Jan 20, 2021, 7:35 PM IST

ದಾವಣಗೆರೆ: ರಾಜ್ಯಾದ್ಯಂತ ಫಲಾನುಭವಿಗಳಿಗಾಗಿಯೇ ಒಂದು ಉದ್ಯಮ ಅಥವಾ ಘಟಕವನ್ನು ಸ್ಥಾಪಿಸುವ ಹಂಬಲವನ್ನು ಮಹಿಳಾ ಅಭಿವೃದ್ಧಿ ನಿಗಮ ಹೊಂದಿದೆ ಎಂದು ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಶಶಿಕಲಾ ವಿ. ಟೆಂಗಳಿ ಹೇಳಿದ್ದಾರೆ.

ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿಂದು ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷರು ನಿಗಮಗಳ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ‌ ಅವರು, ನಿಗಮದಡಿ ಧನಶ್ರೀ (ಹೆಚ್‍ಐವಿ ಸೋಂಕಿತ ಸಂತ್ರಸ್ತೆಯರು), ಚೇತನ(ಲೈಂಗಿಕ ಕಾರ್ಯಕರ್ತೆಯರು), ಲಿಂಗತ್ವ ಅಲ್ಪಸಂಖ್ಯಾತರು, ಮಹಿಳೆಯರು, ಸ್ತ್ರೀಶಕ್ತಿ ಗುಂಪುಗಳು, ಮಾಜಿ ದೇವದಾಸಿಯರು ಹೀಗೆ ದಮನಿತ ಮಹಿಳೆಯರ ಸಬಲೀಕರಣಕ್ಕೆ ನಿಗಮದ ವತಿಯಿಂದ ಯೋಜನೆಗಳನ್ನು ಹಾಕಿಕೊಂಡು ಸೌಲಭ್ಯ ನೀಡಲಾಗುತ್ತಿದೆ ಎಂದರು.

ದೇವದಾಸಿ ಪದ್ಧತಿಯಂತಹ ಅನಿಷ್ಟ ಪದ್ಧತಿಗಳು ನಿರ್ಮೂಲನೆ ಆಗಬೇಕು. ಧನಶ್ರೀ, ಚೇತನ ಮಹಿಳೆಯರು ಸ್ವಾವಲಂಬಿಗಳಾಗಿ ಸಮಾಜದ ಮುಖ್ಯವಾಹಿನಿಗೆ ಬರಬೇಕೆಂಬ ಹಂಬಲ ನಿಗಮದ್ದಾಗಿದ್ದು, ದವನಿತರ ಕಣ್ಣೊರೆಸುವ ಕೆಲಸದಿಂದ ನೆಮ್ಮದಿ ಲಭಿಸಿದೆ. ಈ ಮಹಿಳೆಯರನ್ನು ಮುಖಾಮುಖಿ ಭೇಟಿ ಮಾಡಿ, ಸಮಸ್ಯೆಗಳು ಮತ್ತು ಯೋಜನೆಗಳ ಕುರಿತು ಚರ್ಚಿಸಲು ಜಿಲ್ಲೆಗಳ ಭೇಟಿ ಮಾಡುತ್ತಿದ್ದೇನೆ ಎಂದು ತಿಳಿಸಿದರು.

ABOUT THE AUTHOR

...view details