ಕರ್ನಾಟಕ

karnataka

ETV Bharat / state

ಅಹಿಂದಾ ಶೋಷಿತರ ಜಾಗೃತಿ ಸಮಾವೇಶ: ದಾವಣಗೆರೆಯಲ್ಲಿ ಪೂರ್ವಭಾವಿ ಸಭೆ

ಎಲ್ಲಾ ಶೋಷಿತ ಸಮುದಾಯಗಳು ಸೇರಿ ಜ.28ರಂದು ಚಿತ್ರದುರ್ಗದ ಮಾದರ ಚನ್ನಯ್ಯ ಮಠದ ಪಕ್ಕದ ಆವರಣದಲ್ಲಿ ಸಮಾವೇಶ ನಡೆಸಲು ನಿರ್ಧರಿಸಿದ್ದೇವೆ ಎಂದು ರಾಮಚಂದ್ರಪ್ಪ ತಿಳಿಸಿದ್ದಾರೆ.

Etv Bharatleaders-held-a-preliminary-meeting-in-davangere-over-ahinda-convention
ಅಹಿಂದಾ ಶೋಷಿತರ ಜಾಗೃತಿ ಸಮಾವೇಶ: ದಾವಣಗೆರೆಯಲ್ಲಿ ಪೂರ್ವಭಾವಿ ಸಭೆ ನಡೆಸಿದ ಮುಖಂಡರು

By ETV Bharat Karnataka Team

Published : Jan 5, 2024, 10:50 PM IST

Updated : Jan 5, 2024, 11:02 PM IST

ಮುಖಂಡ ರಾಮಚಂದ್ರಪ್ಪ ಪ್ರತಿಕ್ರಿಯೆ

ದಾವಣಗೆರೆ: ಜ.28ರಂದು ಚಿತ್ರದುರ್ಗದಲ್ಲಿ ಅಹಿಂದಾ ಶೋಷಿತರ ಜಾಗೃತಿ ಸಮಾವೇಶ ನಡೆಯಲಿರುವ ಹಿನ್ನೆಲೆಯಲ್ಲಿ ಶೋಷಿತ ಸಮುದಾಯಗಳ ಮುಖಂಡರು ನಗರದ ರೋಟರಿ ಬಾಲ ಭವನದಲ್ಲಿ ಇಂದು ಪೂರ್ವಭಾವಿ ಸಭೆ ನಡೆಸಿದರು.

ಬಳಿಕ ರಾಜ್ಯ ಶೋಷಿತ ಸಮುದಾಯಗಳ ಮಹಾ ಒಕ್ಕೂಟದ ರಾಜ್ಯಾಧ್ಯಕ್ಷ ರಾಮಚಂದ್ರಪ್ಪ ಮಾತನಾಡಿ, "ಎಲ್ಲಾ ಶೋಷಿತ ಸಮುದಾಯಗಳು ಸೇರಿ ಮಾದರ ಚನ್ನಯ್ಯ ಮಠದ ಪಕ್ಕದಲ್ಲಿರುವ 150 ಎಕರೆ ಜಾಗದಲ್ಲಿ ಸಮಾವೇಶ ನಡೆಸಲು ನಾವು ನಿರ್ಧರಿಸಿದ್ದೇವೆ. ಈ ಸಮಾವೇಶಕ್ಕೆ ಎಲ್ಲಾ ಪಕ್ಷಗಳ ಶೋಷಿತ ಸಮುದಾಯಗಳ ಮುಖಂಡನ್ನು ಆಹ್ವಾನಿಸಿದ್ದೇವೆ. 10 ಲಕ್ಷಕ್ಕೂ ಹೆಚ್ಚು ಜನರು ಬರುತ್ತಾರೆ. ಹಿಂದುಳಿದ ಜಾತಿಗಳ ಜಾಗೃತಿ ಹಾಗೂ ಸಂಘಟನೆಗೆ ಸಮಾವೇಶ ಮಾಡುತ್ತಿದ್ದೇವೆ" ಎಂದರು.

"ಕಾಂತರಾಜು ವರದಿ ಅಂಗೀಕರಿಸಬೇಕು ಮತ್ತು ಜಾರಿಗೆ ತರಬೇಕು, ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳಲ್ಲಿ ಹಿಂದುಳಿದ ಜಾತಿಗಳಿಗೆ ಮೀಸಲಾತಿ ಕೊಡಬೇಕು. ಇಡಬ್ಲೂಎಸ್​ ಮೂಲಕ ನೀಡಿರುವ 10% ಮೀಸಲಾತಿಯನ್ನು ರದ್ದು ಮಾಡಬೇಕು. ಮಹಿಳಾ ಮೀಸಲಾತಿಯನ್ನು ತಕ್ಷಣ ಜಾರಿಗೆ ತಂದು ಅದರಲ್ಲಿ ಹಿಂದುಳಿದ, ಅಲ್ಪಸಂಖ್ಯಾತರ, ಎಸ್​ಟಿ -ಎಸ್​ಟಿ ಮಹಿಳೆಯರಿಗೆ ಒಳ ಮೀಸಲಾತಿಯನ್ನು ಕೊಡಬೇಕು. ಶೋಷಿತ ಮತ್ತು ಹಿಂದುಳಿದ ವರ್ಗಗಳ ಜನ ಸಂಖ್ಯೆ ಶೇ.70 ಇದೆ. ನಮ್ಮ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಕೊಡಬೇಕು ಎಂದು ಸಮಾವೇಶದಲ್ಲಿ ಹಕ್ಕೊತ್ತಾಯ ಮಾಡುತ್ತೇವೆ" ಎಂದು ಹೇಳಿದರು.

"ಸಮಾವೇಶದಲ್ಲಿ ಭಾಗವಹಿಸುವುದಾಗಿ ಸಿಎಂ ಮತ್ತು ಡಿಸಿಎಂ ತಿಳಿಸಿದ್ದಾರೆ. ಕರ್ನಾಟಕ ಶೋಷಿತ ಸಮುದಾಯಗಳ ಮಹಾಒಕ್ಕೂಟ ಹಾಗೂ ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ಸಹಯೋಗದಲ್ಲಿ ಒಂದು ದಿನದ ಸಮಾವೇಶ ನಡೆಯಲಿದೆ" ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ:ಬೆಳಗಾವಿ: ಮಹಿಳೆಯರಿಂದ ಮನೆ ಮನೆಗೆ ರಾಮ ಮಂದಿರದ ಮಂತ್ರಾಕ್ಷತೆ ವಿತರಣೆ

Last Updated : Jan 5, 2024, 11:02 PM IST

ABOUT THE AUTHOR

...view details