ಕರ್ನಾಟಕ

karnataka

ETV Bharat / state

ಮಾಜಿ ಶಾಸಕ ಎಚ್.ಎಸ್. ಶಿವಶಂಕರಪ್ಪನವರಿಗೆ ಕೊಲೆ ಬೆದರಿಕೆ; ರಕ್ಷಣೆ ನೀಡುವಂತೆ ಮನವಿ - ಮಾಜಿ ಶಾಸನ ಶಿವಶಂಕರಪ್ಪರ ಮೇಲೆ ಕೊಲೆ ಸಂಚು ಶಂಕೆ

ಮಾಜಿ ಶಾಸಕ ಎಚ್.ಎಸ್. ಶಿವಶಂಕರಪ್ಪನರನ್ನು ಕೊಲೆ ಮಾಡಲು ಸಂಚು ರೂಪಿಸಿದ್ದನ್ನು ಖಂಡಿಸಿದ್ದು, ಅವರಿಗೆ ಸೂಕ್ತ ರಕ್ಷಣೆ ನೀಡಬೇಕೆಂದು ಆಗ್ರಹಿಸಿ ವಕೀಲರ ಸಂಘದವರು ತಹಸೀಲ್ದಾರ್ ಕೆ.ಬಿ. ರಾಮಚಂದ್ರಪ್ಪರಿಗೆ ಮನವಿ ನೀಡಿದರು.

Harihara
Harihara

By

Published : Jun 20, 2020, 10:37 PM IST

ಹರಿಹರ : ಹಿರಿಯ ವಕೀಲರು ಹಾಗೂ ಮಾಜಿ ಶಾಸಕ ಎಚ್.ಎಸ್. ಶಿವಶಂಕರಪ್ಪನರನ್ನು ಕೊಲೆ ಮಾಡಲು ಸಂಚು ರೂಪಿಸಿದ್ದನ್ನು ಖಂಡಿಸಿದ್ದು, ಅವರಿಗೆ ಸೂಕ್ತ ರಕ್ಷಣೆ ನೀಡಬೇಕೆಂದು ಆಗ್ರಹಿಸಿ ವಕೀಲರ ಸಂಘದ ವತಿಯಿಂದ ತಹಸೀಲ್ದಾರ್ ಕೆ.ಬಿ. ರಾಮಚಂದ್ರಪ್ಪರಿಗೆ ಮನವಿ ಸಲ್ಲಿಸಲಾಯಿತು.

ಈ ವೇಳೆ ಸಂಘದ ಅಧ್ಯಕ್ಷ ನಾಗರಾಜ ಹಲವಾಗಲು ಮಾತನಾಡಿ, ಕೊಲೆ ಸಂಚಿನ ಕುರಿತು ಎಚ್.ಎಸ್. ಶಿವಶಂಕರಪ್ಪ ಈಗಾಗಲೇ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಕುರಿತು ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಶೀಘ್ರ ಉನ್ನತ ಮಟ್ಟದ ತನಿಖೆ ನಡೆಸಬೇಕು. ಅವರಿಗೆ ಸೂಕ್ತ ಭದ್ರತೆ ಒದಗಿಸಬೇಕು. ಆರೋಪದ ಕುರಿತು ನ್ಯಾಯಬದ್ಧವಾಗಿ ವಿಚಾರಣೆ ನಡೆಯಬೇಕೆಂದು ಆಗ್ರಹಿಸಿದರು.

ಈ ವೇಳೆ ಸಂಘದ ಕಾರ್ಯದರ್ಶಿ ಎಚ್.ಎಚ್. ಲಿಂಗರಾಜು, ಪದಾಧಿಕಾರಿಗಳಾದ ರಮೇಶ್ ಜಿ.ಬಿ., ಕೆ.ಜಿ.ಎಸ್. ಪಾಟೀಲ, ಸಂತೋಷ ಹಿರೇಮಠ, ಸಿ.ಬಿ. ರಾಘವೇಂದ್ರ, ಗಣೇಶ ಬಿ.ಎಸ್., ಸುರೇಶ್‌ಕುಮಾರ ವೈ., ನಾಗರಾಜ ಬಿ., ಮಾರುತಿ, ಜಿ.ಕೆ.ನಾಯ್ಕ, ಜಾರ್ಜ್, ಚೌಡಪ್ಪ ಕೆ.ಸಿ., ಬಸವರಾಜ ಓಂಕಾರಿ, ಮೌನೇಶ್, ಕೆ. ರಾಜಶೇಖರ‌ ಇತರರಿದ್ದರು.

ABOUT THE AUTHOR

...view details