ದಾವಣಗೆರೆ: ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ ಅವರ ದರ್ಶನಕ್ಕೆ ಬಂದವರಿಗೆ ಪೊಲೀಸರು ಲಾಠಿ ರುಚಿ ತೋರಿಸಿದ ಘಟನೆ ನಗರದ ಬಾಪೂಜಿ ಗೆಸ್ಟ್ಹೌಸ್ ಮುಂಭಾಗ ನಡೆದಿದೆ.
ದಾವಣಗೆರೆ: ಚಾಲೆಂಜಿಂಗ್ ಸ್ಟಾರ್ 'ದರ್ಶನ'ಕ್ಕೆ ಬಂದವರಿಗೆ ಲಾಠಿ ರುಚಿ - ನಟ ದರ್ಶನ್ ನೋಡಲು ಬಂದವರ ಮೇಲೆ ಲಾಠಿ ಚಾರ್ಜ್
ದಾವಣಗೆರೆಗೆ ಆಗಮಿಸಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ನೋಡಲು ಆಗಮಿಸಿದ ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದಾರೆ.
ನಟ ದರ್ಶನ್ ನೋಡಲು ಬಂದವರಿಗೆ ಲಾಠಿ ರುಚಿ
ಬೆಳಗ್ಗೆಯಿಂದಲೇ ಗೆಸ್ಟ್ಹೌಸ್ ಮುಂದೆ ಜನರು ಜಮಾಯಿಸತೊಡಿದ್ದಾರೆ. ಬಿಸಿಲಿನ ಕಾವು ಏರುತ್ತಿದ್ದಂತೆ ಅಭಿಮಾನಿಗಳು ಬರುವುದು ಜಾಸ್ತಿಯಾಯಿತು. ಗೇಟ್ ಹಾಕುವ ಮೂಲಕ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಆದರೂ ಜನರು ಒಳನುಗ್ಗಲು ಯತ್ನಿಸಿದಾಗ ಪೊಲೀಸರು ಪರಿಸ್ಥಿತಿ ನಿಯಂತ್ರಿಸಲು ಲಾಠಿಚಾರ್ಜ್ ಮಾಡಿದರು.
ಪೊಲೀಸರು ಲಾಠಿ ಬೀಸುತ್ತಿದ್ದಂತೆ ಯುವಕರು, ಯುವತಿಯರು, ಮಹಿಳೆಯರು ಚೆಲ್ಲಾಪಿಲ್ಲಿಯಾಗಿ ಓಡಿದರು. ಡಿ ಬಾಸ್.. ಡಿ ಬಾಸ್.. ನೋಡ್ಬೇಕು ಎಂಬ ಘೋಷಣೆಯನ್ನು ಹಾಕುತ್ತಾ ಯುವಕರು ಕುಣಿದು ಕುಪ್ಪಳಿಸಿದ್ದಾರೆ.
Last Updated : Aug 31, 2020, 12:39 PM IST