ದಾವಣಗೆರೆ: ಜಿಲ್ಲೆಯ ಲೋಕಸಭಾ ವ್ಯಾಪ್ತಿಯ ಉಚ್ಚೆಂಗಿ ದುರ್ಗದಲ್ಲಿ ಇಂದು ಹಮ್ಮಿಕೊಂಡಿದ್ದ ಕಾಂಗ್ರೆಸ್ ಪ್ರಚಾರ ಸಭೆ ಮುಗಿಸಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೊರಡುವ ವೇಳೆ ದಾರಿ ಬಿಡದ ಜನರಿಗೆ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ ಘಟನೆ ನಡೆಯಿತು.
ಸಿದ್ದರಾಮಯ್ಯ ಹೊರಡಲು ದಾರಿ ಬಿಡದ ಜನ: ಪೊಲೀಸರಿಂದ ಲಘು ಲಾಠಿ ಪ್ರಹಾರ - police
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೊರಡುವ ವೇಳೆ ದಾರಿ ಬಿಡದ ಜನರನ್ನು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ ಘಟನೆ ನಡೆಯಿತು.
ಜನರನ್ನು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸುತ್ತಿರುವುದು
ಸಿದ್ದರಾಮಯ್ಯ ಉಚ್ಚೆಂಗಿ ದುರ್ಗದಲ್ಲಿ ನಡೆದ ಸಮಾವೇಶದ ಉದ್ದಕ್ಕೂ ಬಿಜೆಪಿ ವಿರುದ್ಧ ಗುಡುಗಿದ್ದರು. ಬಳಿಕ ಸಮಾವೇಶ ಮುಗಿಸಿ ಹೊರಡುವ ವೇಳೆ ಟಗರು ಸಿನಿಮಾದ ಹಾಡು ಹಾಕಲಾಯಿತು. ಈ ವೇಳೆ ಹುಚ್ಚೆದ್ದ ಸಿದ್ದರಾಮಯ್ಯ ಅಭಿಮಾನಿಗಳು ಕಾರು ಮುತ್ತಿಗೆ ಹಾಕಿ ಫೋಟೋ ತೆಗೆದುಕೊಳ್ಳಲು ಮುಂದಾದರು. ಐದು ಗಂಟೆಗೆ ಒಳಗೆ ಹೆಲಿಕಾಪ್ಟರ್ ಟೆಕ್ ಆಫ್ ಆಗಬೇಕಿದ್ದ ಕಾರಣ ಪೊಲೀಸರು ಈ ವೇಳೆ ಲಘು ಲಾಠಿ ಬೀಸಿ ಜನರನ್ನು ಚದುರಿಸಿದರು.