ಕರ್ನಾಟಕ

karnataka

ETV Bharat / state

ಸತ್ತವರನ್ನು ಹೂಳಲು ಸ್ಮಶಾನದ ಕೊರತೆ: ರಸ್ತೆ ಬದಿಯಲ್ಲೇ ಶವ ಸಂಸ್ಕಾರ

ದಾವಣಗೆರೆಯ ಗ್ರಾಮವೊಂದರಲ್ಲಿ ಯಾರೇ ಸಾವನ್ನಪ್ಪಿದರೂ ಕೂಡ ಗ್ರಾಮದ ಕೂಗಳತೆ ದೂರಲ್ಲಿರುವ ಹಳ್ಳದ ಬಳಿಯಲ್ಲಿನ ರಸ್ತೆ ಬದಿಯೇ ಗತಿಯಾಗಿದೆ. ಇಲ್ಲಿಯ ತನಕ ಸ್ಮಶಾನ ಇಲ್ಲದೆ ದಿಕ್ಕು ತೋಚದೆ ಗ್ರಾಮದ ಜನರು ರಸ್ತೆ ಬದಿಯಲ್ಲೇ ಸುಮಾರು 20ಕ್ಕೂ ಹೆಚ್ಚು ಮೃತದೇಹಗಳನ್ನು ಹೂಳುವುದು ಹಾಗೂ ಸುಡುವುದನ್ನು ಮಾಡುವ ಮೂಲಕ ಅಂತ್ಯ ಸಂಸ್ಕಾರ ಮಾಡಿದ್ದಾರೆ.

ಶವ ಸಂಸ್ಕಾರ
ಶವ ಸಂಸ್ಕಾರ

By

Published : Dec 24, 2020, 9:09 PM IST

ದಾವಣಗೆರೆ:‌ ತಾಲೂಕಿನ ಪುಟಗನಾಳ್ ಗ್ರಾಮದಲ್ಲಿ ಸುಮಾರು 40 ವರ್ಷಗಳಿಂದ ಸ್ಮಶಾನದ ಕೊರತೆ ಇದೆ. ಗ್ರಾಮದಲ್ಲಿ ಒಟ್ಟು ಮೂರು ಸಾವಿರ ಜನರಿದ್ದರೂ ಕೂಡ ಜಿಲ್ಲಾಡಳಿತ ಈ ಗ್ರಾಮಕ್ಕೆ ಸ್ಮಶಾನದ ವ್ಯವಸ್ಥೆ ಮಾಡಿಲ್ಲ.

ಗ್ರಾಮದಲ್ಲಿ ಯಾರೇ ಸಾವನ್ನಪ್ಪಿದರೂ ಕೂಡ ಗ್ರಾಮದ ಕೂಗಳತೆ ದೂರದಲ್ಲಿರುವ ಹಳ್ಳದ ಬಳಿಯಲ್ಲಿನ ರಸ್ತೆ ಬದಿಯೇ ಗತಿಯಾಗಿದೆ. ಇಲ್ಲಿಯ ತನಕ ಸ್ಮಶಾನ ಇಲ್ಲದೆ ದಿಕ್ಕು ತೋಚದೆ ಗ್ರಾಮದ ಜನರು ರಸ್ತೆ ಬದಿಯಲ್ಲೇ ಸುಮಾರು 20ಕ್ಕೂ ಹೆಚ್ಚು ಮೃತದೇಹಗಳನ್ನು ಹೂಳುವುದು ಹಾಗೂ ಸುಡುವುದನ್ನು ಮಾಡುವ ಮೂಲಕ ಅಂತ್ಯ ಸಂಸ್ಕಾರ ಮಾಡಿದ್ದಾರೆ.

ಈ ಹಿಂದೆ ಮೃತರನ್ನು ಗ್ರಾಮದ ಜಮಿನೊಂದರಲ್ಲಿ ಹೂಳುತ್ತಿದ್ದರು. ಅದರೆ ಇದೀಗ‌ ಆ ಜಮೀನನ್ನು ಕೂಡ ಕೆಲ ಖಾಸಗಿಯವರು ಉಳುಮೆ ಮಾಡುತ್ತಿದ್ದರುವುದರಿಂದ ಮೃತದೇಹಗಳನ್ನು ಹೂಳಲು ಜಾಗದ ಅಭಾವ ಎದುರಾಗಿದೆ ಎನ್ನುತ್ತಾರೆ ಗ್ರಾಮಸ್ಥರು.

ಹೂಳಲು ಜಾಗವಿಲ್ಲದೇ ರಸ್ತೆ ಬದಿಯಲ್ಲೇ ಗ್ರಾಮಸ್ಥರ ಶವ ಸಂಸ್ಕಾರ

ಮಂಜುನಾಥ್ ಎಂಬುವರು ಕೊನೆಯುಸಿರೆಳೆದಾಗ ಹೂಳಲು ಸ್ಮಶಾನ ಇಲ್ಲದೆ ಮೃತದೇಹ ಇರಿಸಿ ಜಿಲ್ಲಾಡಳಿತ ವಿರುದ್ಧ ಪ್ರತಿಭಟನೆ ಅಸ್ತ್ರ ಪ್ರಯೋಗ‌ ಮಾಡಿದರೂ ಸಮಸ್ಯೆ ಸಮಸ್ಯೆಯಾಗಿಯೇ ಉಳಿದಿದೆ. ಜಿಲ್ಲಾಧಿಕಾರಿ ಹಾಗೂ ತಹಶೀಲ್ದಾರ್ ಪುಟುಗನಾಳ್ ಗ್ರಾಮಕ್ಕೆ ಭೇಟಿ ನೀಡಿ ಆಶ್ವಾಸನೆ ನೀಡಿದರೂ ಕೂಡ ಸ್ಮಶಾನ ಮಾತ್ರ ಮರೀಚಿಕೆಯಾಗಿದೆ.

ಸ್ಮಶಾನ ಇಲ್ಲದೆ ಹೈರಾಣಾಗಿರುವ ಜನರಿಗೆ ಮುಂದಿನ ದಿನಗಳಲ್ಲಿ ಯಾರಾದರೂ ಸಾವನ್ನಪ್ಪಿದರೆ ಗತಿ ಏನಪ್ಪ‌ ಎಂಬ ಆತಂಕ ಕಾಡುತ್ತಿದೆ.

ABOUT THE AUTHOR

...view details