ಕರ್ನಾಟಕ

karnataka

ETV Bharat / state

ಲಾಕ್ ಡೌನ್ ಗೆ ಕ್ಯಾರೇ ಎನ್ನದ ಬೆಣ್ಣೆನಗರಿ ಮಂದಿ...! ಜನರನ್ನು ನಿಯಂತ್ರಿಸಲು ಪೊಲೀಸರ ಹರಸಾಹಸ - davanagere latest news

ನಗರದ ಎಪಿಎಂಸಿ‌ ಮಾರುಕಟ್ಟೆಯಲ್ಲಿ ತರಕಾರಿ ಖರೀದಿಗೆ ಜನರು ಮುಗಿಬೀಳುವುದು ಕಡಿಮೆ ಆಗಿಲ್ಲ. ಎಷ್ಟೇ ಮನವಿ ಮಾಡಿದರೂ ಸಾಮಾಜಿಕ ಅಂತರ ಕಾಪಾಡಿಕೊಳ್ಳುತ್ತಿಲ್ಲ. ಇದರಿಂದಾಗಿ ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುವಂತಾಗಿದೆ.

Lack down effect on davanagere
ಲಾಕ್ ಡೌನ್ ಗೆ ಕ್ಯಾರೇ ಎನ್ನದ ಬೆಣ್ಣೆನಗರಿ ಮಂದಿ

By

Published : Apr 7, 2020, 2:32 PM IST

ದಾವಣಗೆರೆ : ಕೊರೊನಾ ಭೀತಿಯಿಂದಾಗಿ ದೇಶದೆಲ್ಲೆಡೆ ಲಾಕ್ ಡೌನ್​ಗೆ ಕರೆ ನೀಡಿದ್ದರೂ ಬೆಣ್ಣೆನಗರಿ ಮಂದಿ ಕ್ಯಾರೇ ಎನ್ನದೆ ಮಾರುಕಟ್ಟೆಯತ್ತ ತೆರಳುತ್ತಿರುವುದು ಪೊಲೀಸರಿಗೆ ತಲೆನೋವು ಉಂಟು ಮಾಡಿದೆ.

ನಗರದ ಎಪಿಎಂಸಿ‌ ಮಾರುಕಟ್ಟೆಯಲ್ಲಿ ತರಕಾರಿ ಖರೀದಿಗೆ ಜನರು ಮುಗಿಬೀಳುವುದು ಕಡಿಮೆ ಆಗಿಲ್ಲ. ಎಷ್ಟೇ ಮನವಿ ಮಾಡಿದರೂ ಸಾಮಾಜಿಕ ಅಂತರ ಕಾಪಾಡಿಕೊಳ್ಳುತ್ತಿಲ್ಲ. ಇದರಿಂದಾಗಿ ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುವಂತಾಗಿದೆ.

ಹತ್ತಾರು ಆಟೋಗಳ ಸಂಚಾರವಿದ್ದು, ಎಷ್ಟೇ ವಿನಂತಿ ಮಾಡಿಕೊಂಡರೂ, ಮನವಿ ಮಾಡಿದರೂ ಮಾರುಕಟ್ಟೆಯತ್ತ ಜನರು ಬರುವುದು ಕಡಿಮೆ ಆಗುತ್ತಿಲ್ಲ. ಮನೆ ಬಾಗಿಲಿಗೆ ತರಕಾರಿ ವ್ಯವಸ್ಥೆ ಮಾಡುವುದಾಗಿ ಜಿಲ್ಲಾಡಳಿತ ಮನವಿ ಮಾಡಿದರೂ ಜನರು‌ ಮಾತ್ರ ಸ್ಪಂದಿಸುತ್ತಿಲ್ಲ ಎಂದು ಪೊಲೀಸರು ಬೇಸರ ವ್ಯಕ್ತಪಡಿಸಿದ್ದಾರೆ.

ABOUT THE AUTHOR

...view details