ಕರ್ನಾಟಕ

karnataka

ETV Bharat / state

ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ಕೂಡ ಎಸ್‌ಟಿ ಹೋರಾಟದ ಬ್ರ್ಯಾಂಡ್ ; ಬಿ ಎಂ ಸತೀಶ್ - ಕುರುಬ ಸಮಾಜದ ಮುಖಂಡ ಬಿಎಮ್ ಸತೀಶ್

ಕುರುಬ ಸಮಾಜ ಸಾಮಾಜಿಕವಾಗಿ ಹಾಗೂ ಶೈಕ್ಷಣಿಕವಾಗಿ ತೀವ್ರವಾಗಿ ಹಿಂದುಳಿದ ಸಮಾಜ. ಕೊಡಗು, ಬೀದರ್‌, ಕಲಬುರ್ಗಿ ಹಾಗೂ ಯಾದಗಿರಿ ಜಿಲ್ಲೆಗಳಲ್ಲಿ ಮಾತ್ರ ಕುರುಬರನ್ನು ಎಸ್ಟಿ‌ ಪಟ್ಟಿಗೆ ಸೇರಿಸಲಾಗಿದೆ. ಅದು ಎಲ್ಲಾ ಜಿಲ್ಲೆಗಳಿಗೆ ವಿಸ್ತರಣೆ‌‌ ಆಗಬೇಕು ಅನ್ನೋದು ನಮ್ಮ ಬೇಡಿಕೆ..

Kuruba community
ಬಿ.ಎಮ್ ಸತೀಶ್

By

Published : Dec 10, 2020, 8:33 PM IST

ದಾವಣಗೆರೆ : ಮಾಜಿ ಸಿಎಂ ಸಿದ್ದರಾಮಯ್ಯನವರು ನಮ್ಮ ಸಮಾಜದ ನಾಯಕರು. ಇಂತಹ ನೂರು ಸಂಘಟನೆಗಳು ಹುಟ್ಟಿಕೊಂಡ್ರು ಕೂಡ ಅವರ ವರ್ಚಸ್ಸನ್ನು ಕುಗ್ಗಿಸಲು ಆಗುವುದಿಲ್ಲ ಎಂದು ಕಾಗಿನೆಲೆ ಶ್ರೀ ನಿರಂಜನಾನಂದ ಸ್ವಾಮೀಜಿಗಳು ಮಾಜಿ ಸಿಎಂ‌ ಸಿದ್ದರಾಮಯ್ಯನವರು ಕುರುಬ ಎಸ್ಟಿ ಹೋರಾಟಕ್ಕೆ ಬಾರದೆ ಇದ್ರೂ ಕೂಡ ಅವರ ಪರ ಕಳೆದ ಕೆಲ ದಿನಗಳ‌ ಹಿಂದೆ ಬ್ಯಾಟ್ ಬೀಸಿದ್ರು.

ಕುರುಬ ಸಮಾಜದ ಸಭೆ ಕುರಿತು ಮಾಹಿತಿ ನೀಡಿದ ಮುಖಂಡರು

ಆದರೆ, ಇದೀಗ ಇದೇ ಕುರುಬ ಸಮಾಜದ ಮುಖಂಡ ಬಿ ಎಂ ಸತೀಶ್ ಎಂಬುವರು ಗ್ರಾಮೀಣಾಭಿವೃದ್ಧಿ ಸಚಿವ ಕೆ ಎಸ್ ಈಶ್ವರಪ್ಪನವರ ಪರ ಬ್ಯಾಟ್ ಬೀಸಿದ್ದು, ಈಶ್ವರಪ್ಪನವರು ಕೂಡ ಬ್ರ್ಯಾಂಡ್ ಎಂದು ಹೇಳಿದ್ದಾರೆ. ಆ ಮೂಲಕ ಸಿದ್ದರಾಮಯ್ಯ ಹಾಗೂ ಈಶ್ವರಪ್ಪನವರ ಮಧ್ಯೆ ಮತ್ತು ಕುರುಬ ಎಸ್ಟಿ ಮೀಸಲಾತಿ ಹೋರಾಟದಲ್ಲಿ ಎಲ್ಲವೂ ಸರಿ ಇಲ್ಲ ಎಂಬಂತೆ ಕಾಣಿಸಿತು.

ಇದೇ ಡಿ.12ಕ್ಕೆ ಹಮ್ಮಿಕೊಂಡಿರುವ ಹೋರಾಟದ ಪೂರ್ವಭಾವಿ ಸಮಾವೇಶದ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಮುಖಂಡ ಬಿ ಎಂ ಸತೀಶ್ ಸಿದ್ದರಾಮಯ್ಯನವರು ಕೊನೆಯ ಸಮಾವೇಶದಲ್ಲಿ ಭಾಗಿಯಾಗುವ ಆಶಾಭಾವನೆ ಇದ್ದು, ಈ ಹೋರಾಟಕ್ಕೆ ಅವರ ಸಹಮತ ಇದೆ.

ಸಿದ್ದರಾಮಯ್ಯನವರ ವರ್ಚಸ್ಸನ್ನು ಕುಗ್ಗಿಸಲು ಆಗುವುದಿಲ್ಲ ಎಂದು ಕಾಗಿನೆಲೆ ಶ್ರೀ ನಿರಂಜನಾನಂದ ಸ್ವಾಮೀಜಿ ಹೇಳಿದ್ದಾರೆ. ಆದ್ರೆ, ಇಲ್ಲಿ ಎಲ್ಲರೂ ಬ್ರಾಂಡೆಡ್, ಬಿಜೆಪಿ ಸರ್ಕಾರದಲ್ಲಿ ಈಶ್ವರಪ್ಪನವರನ್ನು ಮಂತ್ರಿ ಮಾಡಿರುವುದು ಕುರುಬ ಜನಾಂಗಕ್ಕೆ ಪ್ರಾತಿನಿಧ್ಯ ಕೊಡ್ಬೇಕು ಅಂತಾ ಅಲ್ವೇ.. ಆದ್ದರಿಂದ ಅವರು ಕೂಡ ಬ್ರ್ಯಾಂಡ್ ಎಂದರು.

ಇದನ್ನೂ ಓದಿ: ಹತ್ತು ಪೀಠಗಳಾಗಲಿ ಅಭ್ಯಂತರ ಇಲ್ಲ, 2ಎ ಮೀಸಲಾತಿ ಹೋರಾಟ ನಿಲ್ಲಿಸೋದಿಲ್ಲ - ವಿಜಯಾನಂದ ಕಾಶಪ್ಪನವರ

ಕುರುಬ ಸಮಾಜ ಸಾಮಾಜಿಕವಾಗಿ ಹಾಗೂ ಶೈಕ್ಷಣಿಕವಾಗಿ ತೀವ್ರವಾಗಿ ಹಿಂದುಳಿದ ಸಮಾಜ, ಕೊಡಗು ಜಿಲ್ಲೆಯಲ್ಲಿ ಮಾತ್ರ ಕುರುಬರನ್ನು ಎಸ್ಟಿ‌ ಪಟ್ಟಿಗೆ ಸೇರಿಸಲಾಗಿದೆ. ಅದು ಎಲ್ಲಾ ಜಿಲ್ಲೆಗಳಿಗೆ ವಿಸ್ತರಣೆ‌‌ ಮಾಡುವುದು ಮಾತ್ರ ನಮ್ಮ ಬೇಡಿಕೆಯಾಗಿದೆ ಎಂದರು.

ಬೇರೆ ರಾಜ್ಯಗಳಲ್ಲಿ‌ ಕುರುಬನ್, ಕುರುಮನ್ ಎಂದು ಕುರುಬರನ್ನು ಕೇಂದ್ರ ಸರ್ಕಾರದ ಎಸ್ಟಿ ಮೀಸಲಾತಿ ಪಟ್ಟಿಯಲ್ಲಿ ಸೇರಿಸಲಾಗಿದೆ. ಆದ್ರೇ, ನಮ್ಮ ರಾಜ್ಯದಲ್ಲಿ‌ ಮಾತ್ರ ಮೀಸಲಾತಿ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬಹುದಿತ್ತು, ಅದು ಕೂಡಲ ಆಗಿಲ್ಲ ಎಂದರು.

ದಾವಣಗೆರೆಯಲ್ಲಿ‌ ನಡೆಯಲಿದೆ ಮಹತ್ವದ ಸಭೆ :ಇದೇ ಡಿ.12ರಂದು ದಾವಣಗೆರೆ ನಗರದ ಬೀರೇಶ್ವರ ಭವನದಲ್ಲಿ ದಾವಣಗೆರೆ, ಹಾವೇರಿ, ಚಿತ್ರದುರ್ಗ ಜಿಲ್ಲೆಗಳಿಗೆ ಸಂಬಂಧಿಸಿದಂತೆ ಹೋರಾಟದ ಬಗ್ಗೆ ಹಾಗೂ ಪಾದಯಾತ್ರೆ ಬಗ್ಗೆ ಪೂರ್ವಭಾವಿ ಸಭೆ ಹಮ್ಮಿಕೊಳ್ಳಲಾಗಿದೆ.

ಈ ಸಭೆಯು ಕಾಗಿನೆಲೆ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ಹಾಗೂ ಹೊಸದುರ್ಗ ಶಾಖಾ ಮಠದ ಈಶ್ವರಾನಂದ ಶ್ರೀ ನೇತೃತ್ವದಲ್ಲಿ ನಡೆಯಲ್ಲಿದೆ. ಸಚಿವರಾದ ಕೆ ಎಸ್ ಈಶ್ವರಪ್ಪ, ಸಚಿವ ಬೈರತಿ ಬಸವರಾಜ್, ಮಾಜಿ ಸಚಿವ ಹೆಚ್ ಎಂ ರೇವಣ್ಣ, ಬಂಡೆಪ್ಪ ಕಾಶೆಂಪೂರ್, ಹೆಚ್ ವಿಶ್ವನಾಥ್, ಎಂಟಿಬಿ ನಾಗರಾಜ್‌ ಸಭೆಯಲ್ಲಿ ಭಾಗಿಯಾಗಲಿದ್ದಾರೆ ಎಂದು ತಿಳಿಸಿದರು.

ABOUT THE AUTHOR

...view details