ಕರ್ನಾಟಕ

karnataka

ETV Bharat / state

ಹಿರೇಮಠದ ಶ್ರೀಗಳು ಪ್ರಯಾಣಿಸುತ್ತಿದ್ದ ಕಾರಿಗೆ ಸಾರಿಗೆ ಬಸ್ ಡಿಕ್ಕಿ - ಹಿರೇಮಠದ ಶಿವಾಚಾರ್ಯ ಸ್ವಾಮೀಜಿ ಪ್ರಯಾಣಿಸುತ್ತಿದ್ದ ಕಾರಿಗೆ ಸಾರಿಗೆ ಬಸ್​ ಡಿಕ್ಕಿ

ರಂಭಾಪುರಿ ಶಾಖಾ ಮಠವಾಗಿರುವ ಹಿರೇಮಠದ ಶಿವಾಚಾರ್ಯ ಸ್ವಾಮೀಜಿ ಪ್ರಯಾಣಿಸುತ್ತಿದ್ದ ಕಾರಿಗೆ ಸಾರಿಗೆ ಬಸ್​ ಡಿಕ್ಕಿ ಹೊಡೆದಿದ್ದು, ಅದೃಷ್ಠವಶಾತ್​ ಯಾವುದೇ ಹಾನಿ ಸಂಭವಿಸಿಲ್ಲ.

KSRTC bus collided with a car
ಇನೋವಾ ಕಾರಿಗೆ ಕೆಎಸ್​​ಆರ್​ಟಿಸಿ ಬಸ್ ಡಿಕ್ಕಿ

By

Published : Dec 27, 2019, 12:59 PM IST

ದಾವಣಗೆರೆ:ಶ್ರೀ ಮಹೇಶ ಶಿವಾಚಾರ್ಯ ಸ್ವಾಮೀಜಿ ಪ್ರಯಾಣಿಸುತ್ತಿದ್ದ ಇನೋವಾ ಕಾರಿಗೆ ಕೆಎಸ್​​ಆರ್​ಟಿಸಿ ಬಸ್ ಡಿಕ್ಕಿ ಹೊಡೆದ ಘಟನೆ ತಾಲೂಕಿನ ಬಾತಿ ಕೆರೆ ಸಮೀಪ ನಡೆದಿದ್ದು, ಶ್ರೀಗಳು ಅಪಾಯದಿಂದ ಪಾರಾಗಿದ್ದಾರೆ.

ಹಿಂದಿನಿಂದ ಕೆಎಸ್​​ಆರ್​ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಇನೋವಾ ಕಾರಿನ ಹಿಂಭಾಗ ಸಂಪೂರ್ಣ ಜಖಂಗೊಂಡಿದ್ದು, ಬಸ್ಸಿನಲ್ಲಿದ್ದ ಹಾಗು ಕಾರಿನಲ್ಲಿದ್ದ ಯಾವುದೇ ಪ್ರಯಾಣಿಕರಿಗೆ ಯಾವುದೇ ಅಪಾಯವಾಗಿಲ್ಲ.

ಇನೋವಾ ಕಾರಿಗೆ ಕೆಎಸ್​​ಆರ್​ಟಿಸಿ ಬಸ್ ಡಿಕ್ಕಿ

ಬಳ್ಳಾರಿ ಜಿಲ್ಲೆಯ ನುಗ್ಗೆಹಳ್ಳಿ ಅಯ್ಯನಹಳ್ಳಿಯ ರಂಭಾಪುರಿ ಶಾಖಾ ಮಠವಾಗಿರುವ ಹಿರೇಮಠದ ಶ್ರೀಗಳು, ಬಾತಿ ಗ್ರಾಮದಲ್ಲಿರುವ ತಪೋವನದ ಶ್ರೀಶೈಲ ಜಗದ್ಗುರುಗಳ ದರ್ಶನಕ್ಕೆ ತೆರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.‌

ABOUT THE AUTHOR

...view details