ಕರ್ನಾಟಕ

karnataka

ETV Bharat / state

ಪಂಚಾಯತ್ ರಾಜ್ ಎಂಜಿನಿಯರಿಂಗ್ ಇಲಾಖೆ ಕಚೇರಿಯ ನೂತನ ಕಟ್ಟಡ ಉದ್ಘಾಟಿಸಿದ ಸಚಿವ ಈಶ್ವರಪ್ಪ - KS Eshwarappa latest news

ಪಂಚಾಯತ್ ರಾಜ್ ಎಂಜಿನಿಯರಿಂಗ್ ಇಲಾಖೆ ಕಚೇರಿಯ ನೂತನ ಕಟ್ಟಡ ಉದ್ಘಾಟಿಸಿದ ಸಚಿವ ಕೆ.ಎಸ್.ಈಶ್ವರಪ್ಪ, ವೇದಿಕೆಗೆ ಬಾರದೆ ಅಲ್ಲಿಂದಲೇ ಗ್ರಾಮ ಸ್ವರಾಜ್​ ಸಮಾವೇಶಕ್ಕೆ ತೆರಳಿದ್ದಾರೆ.

ks-eshwarappa-inaugurates-new-building-at-panchayat-raj-engineering-department
ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆ ಕಚೇರಿಯ ನೂತನ ಕಟ್ಟಡ ಉದ್ಘಾಟಿಸಿದ ಸಚಿವ ಕೆಎಸ್ ಈಶ್ವರಪ್ಪ

By

Published : Dec 4, 2020, 3:28 PM IST

ದಾವಣಗೆರೆ: ನಗರದಲ್ಲಿಂದು ಹಮ್ಮಿಕೊಂಡಿದ್ದ ಪಂಚಾಯತ್ ರಾಜ್ ಎಂಜಿನಿಯರಿಂಗ್ ಇಲಾಖೆ ಕಚೇರಿಯ ನೂತನ ಕಟ್ಟಡ ಉದ್ಘಾಟನಾ ಕಾರ್ಯಕ್ರಮಕ್ಕೆ ಸಚಿವ ಕೆ.ಎಸ್.ಈಶ್ವರಪ್ಪ ಬಂದಿದ್ದರು. ಅದ್ರೆ ಟೇಪ್ ಕತ್ತರಿಸಿ, ಸಾಕಷ್ಟು ಸಿದ್ಧತೆ ನಡೆಸಿದ್ದ ವೇದಿಕೆಗೆ ಬಾರದೆ ಜಿಎಂಯುಟಿ ಕಾಲೇಜಿನ ಆವರಣದಲ್ಲಿ ಹಮ್ಮಿಕೊಂಡಿದ್ದ ಗ್ರಾಮ ಸ್ವರಾಜ್​ ಸಮಾವೇಶಕ್ಕೆ ತೆರಳಿದರು.

ಪಂಚಾಯತ್ ರಾಜ್ ಎಂಜಿನಿಯರಿಂಗ್ ಇಲಾಖೆ ಕಚೇರಿಯ ನೂತನ ಕಟ್ಟಡ ಉದ್ಘಾಟನಾ ಕಾರ್ಯಕ್ರಮ

ಈ ಸುದ್ದಿಯನ್ನೂ ಓದಿ:ಶಿವಮೊಗ್ಗದಲ್ಲಿ ಮುಂದುವರೆದ ನಿಷೇಧಾಜ್ಞೆ: ನಗರದಾದ್ಯಂತ ಪೊಲೀಸ್ ಕಟ್ಟೆಚ್ಚರ

ಪಂಚಾಯತ್ ರಾಜ್ ಇಲಾಖೆಯ ಸಿಬ್ಬಂದಿ ಸಂಬಂಧಪಟ್ಟ ಇಲಾಖೆ ಸಚಿವರು ಬರುತ್ತಾರೆಂದು ಸಕಲ‌ ಸಿದ್ಧತೆ‌ ನಡೆಸಿದ್ದರು. ಅದರಂತೆ ಸಮಾರಂಭಕ್ಕೆ ಆಗಮಿಸಿದ ಸಚಿವ ಕೆ.ಎಸ್.ಈಶ್ವರಪ್ಪ ಟೇಪ್ ಮಾತ್ರ ಕತ್ತರಿಸಿ, ನೂತನ ಕಟ್ಟಡ ಉದ್ಘಾಟಿಸಿ ಅಲ್ಲಿಂದಲೇ ಗ್ರಾಮ ಸ್ವರಾಜ್​ ಸಮಾವೇಶಕ್ಕೆ ತೆರಳಿದರು.

ABOUT THE AUTHOR

...view details