ಕರ್ನಾಟಕ

karnataka

ETV Bharat / state

ಕಟೀಲ್ ಜೋಕರ್, ಅಶ್ವತ್ಥ್ ಬ್ರೋಕರ್: ಕೆಪಿಸಿಸಿ ವಕ್ತಾರ ಬಸವರಾಜ್ ಟೀಕಾಪ್ರಹಾರ - ದಾವಣಗೆರೆಯಲ್ಲಿ ಕೆಪಿಸಿಸಿ ವಕ್ತಾರ ಡಿ. ಬಸವರಾಜ್ ಸುದ್ದಿಗೋಷ್ಟಿ

ಜೆಡಿಎಸ್ ಮತ್ತು ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಪತನಗೊಳಿಸಲು ಬ್ರೋಕರ್ ಆಗಿ ಕೆಲಸ ಮಾಡಿದ್ದು, ಅಶ್ವತ್ಥ್ ನಾರಾಯಣ್. ಇನ್ನು ನಳಿನ್​ ಕುಮಾರ್ ಕಟೀಲ್​ ಒಬ್ಬ ಅಸಮರ್ಥ ರಾಜ್ಯಾಧ್ಯಕ್ಷ ಹಾಗೂ ಜೋಕರ್​ ಎಂದು ಕೆಪಿಸಿಸಿ ವಕ್ತಾರ ಡಿ. ಬಸವರಾಜ್ ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

kpcc spokesperson D. basavraj outrage on bjp leaders
ಕೆಪಿಸಿಸಿ ವಕ್ತಾರ ಡಿ. ಬಸವರಾಜ್ ಸುದ್ದಿಗೋಷ್ಟಿ

By

Published : Oct 23, 2020, 5:11 PM IST

ದಾವಣಗೆರೆ: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಜೋಕರ್. ಡಿಸಿಎಂ ಅಶ್ವತ್ಥ್ ನಾರಾಯಣ್ ಒಬ್ಬ ಬ್ರೋಕರ್ ಎಂದು ಕೆಪಿಸಿಸಿ ವಕ್ತಾರ ಡಿ. ಬಸವರಾಜ್ ವ್ಯಂಗ್ಯವಾಡಿದ್ದಾರೆ.

ಕೆಪಿಸಿಸಿ ವಕ್ತಾರ ಡಿ. ಬಸವರಾಜ್ ಸುದ್ದಿಗೋಷ್ಠಿ

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಬಗ್ಗೆ ಬಿಜೆಪಿ ನಾಯಕರು ಹಗುರವಾಗಿ ಹೇಳಿಕೆ‌ ನೀಡುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು‌.

ಜೆಡಿಎಸ್ ಮತ್ತು ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಪತನಗೊಳಿಸಲು ಬ್ರೋಕರ್ ಆಗಿ ಕೆಲಸ ಮಾಡಿದ್ದು ಅಶ್ವತ್ಥ್ ನಾರಾಯಣ್.‌ ಹಾಗಾಗಿ ಡಿಸಿಎಂ ಸ್ಥಾನ ನೀಡಿದ್ದಾರೆ. ನೂರಾರು ಕೋಟಿ ರೂಪಾಯಿ ಖರ್ಚು ಮಾಡಿ ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರನ್ನು ಖರೀದಿಸಿ ಆಪರೇಷನ್ ಕಮಲ ಮಾಡಿದ್ದು, ಎಲ್ಲರಿಗೂ ಗೊತ್ತಿದೆ. ಸಿದ್ದರಾಮಯ್ಯ ಅವರ ಬಗ್ಗೆ ಮಾತನಾಡುವ ನೈತಿಕತೆ ನಳಿನ್ ಕುಮಾರ್ ಕಟೀಲ್​ಗೆ ಇಲ್ಲ ಎಂದು ಟೀಕಾ ಪ್ರಹಾರ ನಡೆಸಿದರು‌.

ಬಿಜೆಪಿಯವರು ಹೇಗೆ ಕಟೀಲ್ ಅವ​ರನ್ನು ರಾಜ್ಯಾಧ್ಯಕ್ಷರನ್ನಾಗಿ ನೇಮಕ‌ ಮಾಡಿದ್ರು ಎಂಬುದೇ ಅರ್ಥವಾಗುತ್ತಿಲ್ಲ. ಅಸಮರ್ಥ ರಾಜ್ಯಾಧ್ಯಕ್ಷ. ಸಾಮಾನ್ಯ ಜ್ಞಾನ, ತಿಳಿವಳಿಕೆಯೂ ಇಲ್ಲ. ರಾಜ್ಯ ಬಿಜೆಪಿಯಲ್ಲಿ ಜೋಕರ್ ಇದ್ದ ಹಾಗೆ. ಸಿದ್ದರಾಮಯ್ಯ ವಿದೂಷಕ ಹಾಗೂ ಶಿವಕುಮಾರ್​ರನ್ನು ಮೀರ್ ಸಾದಿಕ್ ಅಂದಿರುವ ಬಿಜೆಪಿ ನಾಯಕರಿಗೆ ಉಪಚುನಾವಣೆಯಲ್ಲಿ ಜನರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಬಸವರಾಜ್ ಭವಿಷ್ಯ ನುಡಿದರು.

ಪ್ರಧಾನಿ ಮೋದಿಗೆ ಪತ್ರ:
ಉತ್ತರ ಪ್ರದೇಶದ ಹಥ್ರಾಸ್​ನಲ್ಲಿ ದಲಿತ ಯುವತಿ ಮೇಲೆ ನಡೆದ ಅತ್ಯಾಚಾರ, ಕೊಲೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಇದುವರೆಗೆ ಮಾತನಾಡಿಲ್ಲ. ತಮ್ಮ‌‌ ಮನ್ ಕೀ ಬಾತ್ ನಲ್ಲಿ ಈ ಪೈಶಾಚಿಕ ಕೃತ್ಯದ ಬಗ್ಗೆ ಪ್ರಸ್ತಾಪಿಸಿ ಅಂತಾ ಒತ್ತಾಯಿಸಿ ಪತ್ರ ಬರೆದು ಅಂಚೆ ಮೂಲಕ ಪ್ರಧಾನಿ ನಿವಾಸ ಹಾಗೂ ಕಾರ್ಯಾಲಯಕ್ಕೆ ಕಳುಹಿಸಿದ್ದೇನೆ ಎಂದು ಡಿ. ಬಸವರಾಜ್ ತಿಳಿಸಿದರು.

For All Latest Updates

TAGGED:

ABOUT THE AUTHOR

...view details