ದಾವಣಗೆರೆ: ಭಾಗ್ಯಗಳ ಸರದಾರ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡುರಾವ್ ವಿರುದ್ಧ ಹೇಳಿಕೆ ನೀಡಿರುವ ಸಿಎಂ ಕಾರ್ಯದರ್ಶಿ ಎಂ ಪಿ ರೇಣುಕಾಚಾರ್ಯ ಸಭ್ಯತೆ, ಗಂಭೀರತೆ ಇಲ್ಲದ ಕಾಮಿಡಿ ಪೀಸ್ ಎಂದು ಕೆಪಿಸಿಸಿ ಮಾಧ್ಯಮ ವಿಶ್ಲೇಷಕ ಡಿ ಬಸವರಾಜ್ ವ್ಯಂಗ್ಯವಾಡಿದ್ದಾರೆ.
ರೇಣುಕಾಚಾರ್ಯ ಸಭ್ಯತೆ ಇಲ್ಲದ ಕಾಮಿಡಿ ಪೀಸ್.. ಕೆಪಿಸಿಸಿ ಮಾಧ್ಯಮ ವಿಶ್ಲೇಷಕ ಡಿ ಬಸವರಾಜ್ ವ್ಯಂಗ್ಯ - ರೇಣುಕಾಚಾರ್ಯ ಸಭ್ಯತೆ ಇಲ್ಲದ ಕಾಮಿಡಿ ಪೀಸ್
ಕಾಂಗ್ರೆಸ್ ಮುಖಂಡರ ಬಗ್ಗೆ ಮಾತನಾಡುವ ಯುಡಿಯೂರಪ್ಪ ಅವರ ರಾಜಕೀಯ ಕಾರ್ಯದರ್ಶಿ ಎಂ ಪಿ ರೇಣುಕಾಚಾರ್ಯ ಬಿಜೆಪಿಯಲ್ಲಿ ಕಾಮಿಡಿ ಪೀಸ್ ಎಂದು ಕೆಪಿಸಿಸಿ ಮಾಧ್ಯಮ ವಿಶ್ಲೇಷಕ ಡಿ ಬಸವರಾಜ್ ವ್ಯಂಗ್ಯವಾಡಿದ್ದಾರೆ.
ದಾವಣಗೆರೆಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಏಕಾಂಗಿಯಾಗಿದ್ದಾರೆ. ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡುರಾವ್ ಬಫೂನ್ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ ಪಿ ರೇಣುಕಾಚಾರ್ಯ ಹೇಳಿಕೆ ನೀಡಿದ್ದಾರೆ. ಈ ರೇಣುಕಾಚಾರ್ಯ ಸಭ್ಯತೆ, ಗಂಭೀರತೆ ಇಲ್ಲದವರು, ಯಡಿಯೂರಪ್ಪನವರಿಗೆ ಬ್ಲ್ಯಾಕ್ ಮೇಲ್ ಮಾಡಿ ರಾಜಕೀಯ ಕಾರ್ಯದರ್ಶಿ ಹುದ್ದೆ ಪಡೆದಿದ್ದಾರೆ ಎಂದು ಆರೋಪಿಸಿದರು.
ಸಿದ್ದರಾಮಯ್ಯನವರು ಸಿಎಂ ಆಗಿದ್ದಾಗ ನಾಲ್ಕು ಕೋಟಿ ಜನರಿಗೆ ಅನ್ನವನ್ನು ಕೊಟ್ಟವರು. ಇಡೀ ದೇಶವೇ ಮೆಚ್ಚುವ ಕೆಲಸ ಮಾಡಿದ್ದರು. ದೇವರಾಜ್ ಅರಸು ಅವರ ನಂತರ ರಾಜ್ಯದಲ್ಲಿ ಐದು ವರ್ಷ ಕಾಲ ಮುಖ್ಯಮಂತ್ರಿಯಾಗಿ ಬಡ ಜನರ ಕಲ್ಯಾಣಕ್ಕಾಗಿ ನೂರಾರು ಯೋಜನೆ ರೂಪಿಸಿ ಜಾರಿಗೊಳಿಸಿದ್ದಾರೆ. ನಾಲ್ಕು ಕೋಟಿ ಜನರಿಗೆ ಅನ್ನಭಾಗ್ಯ ನೀಡಿರುವ ಸಿದ್ದರಾಮಯ್ಯ ಏಕಾಂಗಿಯಲ್ಲ. ಅವರ ಹಿಂದೆ ಕೋಟಿ ಬಡ ಜನರ ಬೆಂಬಲವಿದೆ ಎಂದು ತಿಳಿಸಿದರು.