ದಾವಣಗೆರೆ:ಕೊರೊನಾ ಸೋಂಕಿತರಿಗೆ ತ್ವರಿತ ಪರಿಣಾಮಕಾರಿಯಾಗಿ ಚಿಕಿತ್ಸೆ ನೀಡಲು ಮೇಲ್ವಿಚಾರಣೆ, ನಿಯಂತ್ರಣ ಹಾಗೂ ನಿರ್ವಹಣೆಗಾಗಿ ಜಿಲ್ಲಾ ಕೋವಿಡ್ ಕಂಟ್ರೋಲ್ ರೂಮ್ ರಚಿಸಲಾಗಿದ್ದು, ಇದು ರಾಜ್ಯದಲ್ಲೇ ವ್ಯವಸ್ಥಿತವಾದ ಮತ್ತು ಮಾದರಿಯಾದ ಕಂಟ್ರೋಲ್ ರೂಮ್ ಆಗಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಆರ್. ಬೀಳಗಿ ಹೇಳಿದ್ದಾರೆ.
ಜಿಲ್ಲಾಡಳಿತ ಕಚೇರಿಯಲ್ಲಿ ಸ್ಥಾಪಿಸಲಾಗಿರುವ ಜಿಲ್ಲಾ ಕೋವಿಡ್-19 ಕಂಟ್ರೋಲ್ ರೂಮ್ಗೆ ಚಾಲನೆ ನೀಡಿ ಮಾತನಾಡಿದ ಅವರು, ಈ ಹಿಂದೆ ಕೋವಿಡ್ ಫಲಿತಾಂಶಗಳನ್ನು ದೇಶಾದ್ಯಂತ ಐಸಿಎಂಆರ್ ಪೋರ್ಟಲ್‍ನಲ್ಲಿ ಅಪ್‍ಲೋಡ್ ಮಾಡಲಾಗುತ್ತಿತ್ತು. ಆ್ಯಪ್ ಮೂಲಕ ಜಿಲ್ಲೆಗಳು ಐಸಿಎಂಆರ್ನಿಂದ ಮಾಹಿತಿ ಪಡೆದು ತಾಲೂಕುವಾರು ಲೈನ್‍ಲಿಸ್ಟ್ ಮಾಡಲಾಗುತ್ತಿತ್ತು. ಲೈನ್‍ಲಿಸ್ಟ್ ಅ್ಯಪ್‍ನಲ್ಲಿ ಪಾಸಿಟಿವ್ ವರದಿಗಳು ಮತ್ತು ಆಪ್ತಮಿತ್ರ ಆ್ಯಪ್‍ನಲ್ಲಿ ಸೋಂಕಿತರ ಮಾಹಿತಿ ಲಭಿಸುತ್ತಿತ್ತು. ಇದೀಗ ಈ ಆಪ್‍ಗಳನ್ನು ವಿಲೀನಗೊಳಿಸಿ ಒಂದು ಲೈನ್‍ಲಿಸ್ಟ್ ಆ್ಯಪ್ನನ್ನು ಅಭಿವೃದ್ದಿಪಡಿಸಲಾಗಿದ್ದು, ಈ ಕಂಟ್ರೋಲ್ ರೂಮ್ನಿಂದ ಕಾರ್ಯ ನಿರ್ವಹಿಸಲಾಗುವುದು ಎಂದರು.
ನೇರವಾಗಿ ರಾಜ್ಯ ವಾರ್ ರೂಮ್ಗೆ ಸಂಪರ್ಕ ಹೊಂದಿ ಕೆಲಸ ನಿರ್ವಹಿಸಲಿರುವ ಕಂಟ್ರೋಲ್ ರೂಮ್ನಲ್ಲಿ 8 ವಿಭಾಗಗಳಿದ್ದು, ಕೋವಿಡ್ ಸೋಂಕಿತರ ಮೇಲ್ವಿಚಾರಣೆ ಮತ್ತು ನಿರ್ವಹಣೆ ಸೇರಿದಂತೆ ತ್ವರಿತ ಮತ್ತು ಶೀಘ್ರ ಚಿಕಿತ್ಸೆಗೆ ಸ್ಪಂದಿಸಲಿವೆ. ರಾಜ್ಯ ವಾರ್ ರೂಮ್ ವಿಂಗಡಿಸಿದ ಪ್ರಕರಣಗಳನ್ನು ಜಿಲ್ಲಾ ಕಂಟ್ರೋಲ್ ರೂಮ್ನಿಂದ ಪ್ರತಿದಿನ ವೀಕ್ಷಿಸಲಾಗುವುದು. ಜಿಲ್ಲೆಗೆ ಸಂಬಂಧಿಸಿದ ಪ್ರಕರಣಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಸಹ ಪಡೆಯಲಾಗುವುದು. ನಿಯೋಜಿತ ವೈದ್ಯರು ಮತ್ತು ಸಿಬ್ಬಂದಿ ಪ್ರತಿ ದಿನ ರೋಗಿಗಳಿಗೆ ಕರೆ ಮಾಡಿ ರೋಗಿಯ ಲಕ್ಷಣಗಳು, ಇತರೆ ವಿವರಗಳ ಮಾಹಿತಿ ಪಡೆದು ಕಂಟ್ರೋಲ್ ರೂಮ್ನ ಎಂಟು ವಿಭಾಗಗಳಲ್ಲಿ ಸಿಗುವ ಸೌಲಭ್ಯ ಮತ್ತು ರೋಗ ನಿಯಂತ್ರಣದ ಕುರಿತು ಮಾಹಿತಿ ನೀಡುವರು ಎಂದರು.
ಎಂಟು ವಿಭಾಗಗಳು & ಕಾರ್ಯ ನಿರ್ವಹಣೆ, ಸರ್ಕಾರಿ ಆಸ್ಪತ್ರೆ ಸೇವೆ: