ಕರ್ನಾಟಕ

karnataka

ETV Bharat / state

ದೇಶ, ರಾಜ್ಯದಲ್ಲಿ ರಾಜಕೀಯ ವಿಪ್ಲವ ಆಗಲಿದೆ: ಕೋಡಿಮಠ ಸ್ವಾಮೀಜಿ ಭವಿಷ್ಯ - ದಾವಣಗೆರೆಯಲ್ಲಿ ಕೋಡಿಮಠದ ಶ್ರೀಗಳ ಭವಿಷ್ಯ

kodimatha-shree-statement-about-politics
ದೇಶ ಹಾಗೂ ರಾಜ್ಯ ರಾಜಕಾರಣದ ಬಗ್ಗೆ ಕೋಡಿಮಠ ಶ್ರೀಗಳ ಭವಿಷ್ಯ ಹೀಗಿದೆ

By

Published : Nov 23, 2020, 12:39 PM IST

Updated : Nov 23, 2020, 1:16 PM IST

12:35 November 23

ಕೋಡಿಮಠದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮೀಜಿ ಇಂದು ದಾವಣಗೆರೆ ನಗರದಲ್ಲಿ ರಾಜಕೀಯ ಕ್ಷೇತ್ರದ ಬಗ್ಗೆ ಭವಿಷ್ಯ ನುಡಿದಿದ್ದು, ರಾಜಕೀಯ ವಿಪ್ಲವ ಆಗಲಿದೆ ಎಂದಿದ್ದಾರೆ.

ಕೋಡಿಮಠ ಸ್ವಾಮೀಜಿ ಭವಿಷ್ಯ

ದಾವಣಗೆರೆ: ದೇಶ ಹಾಗೂ ರಾಜ್ಯದಲ್ಲಿ ರಾಜಕೀಯ ವಿಪ್ಲವ ಆಗಲಿದೆ ಎಂದು ಕೋಡಿಮಠದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮೀಜಿ ಭವಿಷ್ಯ ನುಡಿದರು.  

ದಾವಣಗೆರೆಯಲ್ಲಿ ಮಾಜಿ ಶಾಸಕ ಮೋತಿ ವೀರಣ್ಣ ಅವರ ಮನೆಯಲ್ಲಿ‌ ಮಾಧ್ಯಮದವರ ಜೊತೆ ಮಾತನಾಡಿದ ಅವರು, ನಾನು ಈ ಹಿಂದೆ ಹೇಳಿದಂತೆ ವಿಶ್ವದಲ್ಲಿ ರಾಜಕೀಯ ತಲ್ಲಣ ಆಗಿದೆ. ಅಮೆರಿಕದಲ್ಲಿ ಡೋನಾಲ್ಡ್ ಟ್ರಂಪ್‌ ಸೋಲುವ ಬಗ್ಗೆ ನಾನು ಈ ಹಿಂದೆಯೇ ಭವಿಷ್ಯ ನುಡಿದಿದ್ದೆ. ಇದು ಈಗ ನಿಜವಾಗಿದೆ‌ ಎಂದರು.  

ರಾಜ್ಯ ರಾಜಕಾರಣದ ಬಗ್ಗೆ ಹೆಚ್ಚೇನೂ ಹೇಳಲು ಆಗದು. ಗ್ರಹಣದಲ್ಲಿ ಗೋಚರಿಸಿರುವ ಮಾಹಿತಿ ಪ್ರಕಾರ ಜನವರಿ, ಫೆಬ್ರವರಿವರೆಗೆ ಏನನ್ನೂ ಹೇಳಲಾಗದು‌. ಏಕ ವ್ಯಕ್ತಿ ಬಗ್ಗೆ ನಾನು ಏನನ್ನೂ ಹೇಳುವುದಿಲ್ಲ ಎಂದು ಹೇಳುವ ಮೂಲಕ ಯಡಿಯೂರಪ್ಪ ಸಿಎಂ ಆಗಿ ಅವಧಿ ಪೂರ್ಣಗೊಳಿಸುತ್ತಾರೋ ಇಲ್ಲವೋ ಎಂಬ ಬಗ್ಗೆ ಸ್ಪಷ್ಟ ಚಿತ್ರಣ ನೀಡಲು ನಿರಾಕರಿಸಿದರು.

Last Updated : Nov 23, 2020, 1:16 PM IST

ABOUT THE AUTHOR

...view details