ದಾವಣಗೆರೆ: ನೀರು ಕುಡಿಯಲು ಬಂದ ಕರಡಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಗ್ರಾಮಸ್ಥರು ಸೆರೆ ಹಿಡಿದಿದ್ದಾರೆ. ದಾವಣಗೆರೆ ಜಿಲ್ಲೆ ಜಗಳೂರು ತಾಲೂಕಿನ ಗಡಿಮಾಕುಂಟೆ ಗ್ರಾಮದಲ್ಲಿ ಇಂದು ಮಧ್ಯಾಹ್ನ ನೀರು ಅರಸಿ ಬಂದಿದ್ದ ಕರಡಿಯನ್ನು ಸೆರೆ ಹಿಡಿಯಲಾಗಿದೆ.
ಜಗಳೂರಲ್ಲಿ ಕರಡಿ ಸೆರೆ: ನಿಟ್ಟುಸಿರು ಬಿಟ್ಟ ಗ್ರಾಮಸ್ಥರು - undefined
ಹಲವು ದಿನಗಳಿಂದ ಕರಡಿ ಭಯದಿಂದ ಇದ್ದ ತಾಲೂಕಿನ ಗಡಿಮಾಕುಂಟೆ ಜನ ಸದ್ಯ ನಿಟ್ಟುಸಿರು ಬಿಟ್ಟಿದ್ದಾರೆ.
![ಜಗಳೂರಲ್ಲಿ ಕರಡಿ ಸೆರೆ: ನಿಟ್ಟುಸಿರು ಬಿಟ್ಟ ಗ್ರಾಮಸ್ಥರು](https://etvbharatimages.akamaized.net/etvbharat/prod-images/768-512-3253505-thumbnail-3x2-dvg.jpg)
ಸೆರೆಯಾದ ಕರಡಿ
ಹಲವು ದಿನದಿಂದ ಇದೇ ಕರಡಿ ಜನರಿಗೆ ಉಪಟಳ ನೀಡುತ್ತಿತ್ತು. ಕರಡಿ ಭಯದಲ್ಲಿ ಇದ್ದ ಗ್ರಾಮಸ್ಥರು ಸದ್ಯ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.