ಕರ್ನಾಟಕ

karnataka

ETV Bharat / state

ಮಾರಕಾಸ್ತ್ರಗಳಿಂದ ಕೊಚ್ಚಿ ರೌಡಿಶೀಟರ್ ಬುಳ್ ನಾಗನ ಹತ್ಯೆ - kannada news

ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ರೌಡಿಶೀಟರ್ ಬುಳ್ ನಾಗನ ಹತ್ಯೆ ಮಾಡಿದ ದುಷ್ಕರ್ಮಿಗಳು.

ರೌಡಿಶೀಟರ್ ಬುಳ್ ನಾಗ ಹತ್ಯೆ

By

Published : May 12, 2019, 5:52 AM IST

Updated : May 12, 2019, 6:00 AM IST

ದಾವಣಗೆರೆ :ಮಾರಾಕಾಸ್ತ್ರಗಳಿಂದ ಕೊಚ್ಚಿ ರೌಡಿಶೀಟರ್​ ಬುಳ್​ ನಾಗನನ್ನು ದುಷ್ಕರ್ಮಿಗಳು ಹತ್ಯೆ ಮಾಡಿರುವ ಘಟನೆ ನಿನ್ನೆ ರಾತ್ರಿ ನಡೆದಿದೆ.

ರೌಡಿಶೀಟರ್ ಬುಳ್ ನಾಗ ಹತ್ಯೆ

ಶ್ರೀರಾಮ ನಗರದ ನಾಗರಾಜ್ ಅಲಿಯಾಸ್ ಬುಳ್ ನಾಗ (30) ಹತ್ಯೆಯಾದ ರೌಡಿಶೀಟರ್. ಎಸ್ಓಜಿ ಕಾಲೋನಿ ಬಳಿಯ ಎಸ್.ಎಸ್ ಆಸ್ಪತ್ರೆಯ ಹಿಂಭಾಗ ದುಷ್ಕರ್ಮಿಗಳು ಮಾರಕಾಸ್ತ್ರದಿಂದ ಹಲ್ಲೆ ಮಾಡಿದ್ದು, ತೀವ್ರವಾಗಿ ಗಾಯಗೊಂಡಿದ್ದ ನಾಗನನ್ನ ಆಸ್ಪತ್ರೆಗೆ ಕರೆದೊಯ್ಯುವಾಗ ಸಾವಿಗೀಡಾಗಿದ್ದಾನೆ.

ಕೊಲೆ, ಜೀವ ಬೆದರಿಕೆ, ಹಲ್ಲೆ ಸೇರಿದಂತೆ ಹತ್ತಕ್ಕೂ ಹೆಚ್ಚು ಪ್ರಕರಣಗಳಲ್ಲಿ ಭಾಗಿಯಾಗಿದ್ದ ನಾಗರಾಜ ಮೂರು ಭಾರಿ ನಡೆದ ದಾಳಿಯಲ್ಲಿ ಅದೃಷ್ಟವಶಾತ್ ಪಾರಾರಿಯಾಗಿದ್ದ. ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್‌. ಚೇತನ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ಎಸ್ಪಿ ಚೇತನ್, ಬುಳ್ ನಾಗನ ಹತ್ಯೆಯಾಗಿದ್ದು, ಕೆಲ ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆ, ಅದರೆ ಯಾವ ಕಾರಣಕ್ಕೆ ಹತ್ಯೆ ನಡೆದಿದೆ ಎಂಬುದು ಗೊತ್ತಿಲ್ಲ. ಹಂತಕರ ಪತ್ತೆಗೆ ಬಲೆ ಬೀಸಲಾಗಿದೆ ಎಂದು ಮಾಹಿತಿ ನೀಡಿದರು.

Last Updated : May 12, 2019, 6:00 AM IST

ABOUT THE AUTHOR

...view details