ಕರ್ನಾಟಕ

karnataka

ETV Bharat / state

ಭಾವನಾತ್ಮಕವಾಗಿ ಒಂದಾಗಿದ್ವಿ ಆದ್ರೇ, ಆಡಳಿತ್ಮಕವಾಗಿ ಬೇರೆಯಾಗಿದ್ದೇವೆ: ಕೆ ಸಿ ಕೊಂಡಯ್ಯ - parishath Member k c kondayya

ವಿಜಯನಗರ ಜಿಲ್ಲೆ ರಚನೆಯಾಗಿದ್ದರ ಕುರಿತು ಮಾತನಾಡಿರುವ ವಿಧಾನ ಪರಿಷತ್​ ಸದಸ್ಯ ಕೆ. ಸಿ. ಕೊಂಡಯ್ಯ, ನಾವು ಭಾವನಾತ್ಮಕವಾಗಿ ಒಂದಾಗಿದ್ವಿ. ಆದರೆ, ಆಡಳಿತಾತ್ಮಕವಾಗಿ ಬೇರೆಯಾಗಿದ್ದೇವೆ ಎಂದು ತಿಳಿಸಿದ್ದಾರೆ.

kc-kondaiya
ಕೆ ಸಿ ಕೊಂಡಯ್ಯ

By

Published : Feb 25, 2021, 8:32 PM IST

ದಾವಣಗೆರೆ: ನಾವು ಭಾವನಾತ್ಮಕವಾಗಿ, ಸಾಂಸ್ಕೃತಿಕವಾಗಿ ಒಂದಾಗಿದ್ವಿ. ಆದರೆ, ಆಡಳಿತಾತ್ಮಕವಾಗಿ ಬೇರೆಯಾಗಿದ್ದೇವೆ ಎಂದು ವಿಜಯನಗರ ಜಿಲ್ಲೆ ರಚನೆಯಾಗಿದ್ದರ ಕುರಿತು ಪರಿಷತ್ ಸದಸ್ಯ ಕೆ. ಸಿ ಕೊಂಡಯ್ಯ ಬೇಸರ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು, ಬಳ್ಳಾರಿಯಿಂದ ವಿಜಯನಗರ ಬೇರೆಯಾಗಿದ್ದಕ್ಕೆ ನಮ್ಮ ಸಹಮತ ಕೂಡ ಇತ್ತು. ಅದಕ್ಕೆ ಪ್ರಮುಖ ಕಾರಣ ಅಂದ್ರೆ ದಾವಣಗೆರೆಗೆ ಸೇರಿದ ಹರಪ್ಪನಹಳ್ಳಿ ತಾಲೂಕನ್ನು ಬಳ್ಳಾರಿಗೆ ಸೇರಿಸಿದ್ದರಿಂದ ಅದು 371 ಜೆ ಕಾಲಂಗೆ ಒಳಪಟ್ಟಿತ್ತು. ಹರಪ್ಪನಹಳ್ಳಿ ಹಾಗೂ ಹೂವಿನಹಡಗಲಿ ತಾಲೂಕಿನ ಜನರು ಬಳ್ಳಾರಿಗೆ ಬರಬೇಕಂದ್ರೆ ಸುಮಾರು 250 ಕಿ. ಮೀ ದೂರ ಕ್ರಮಿಸಬೇಕಾಗಿತ್ತು ಎಂದು ತಿಳಿಸಿದರು.

ಪರಿಷತ್ ಸದಸ್ಯ ಕೆ. ಸಿ ಕೊಂಡಯ್ಯ ಮಾತನಾಡಿದರು

ಓದಿ:ದ್ವಿತೀಯ ಪಿಯು ಪಠ್ಯದಲ್ಲಿ ಶೇ. 30ರಷ್ಟು ಕಡಿತ: ಪುನರಾವರ್ತಿತ ವಿದ್ಯಾರ್ಥಿಗಳಿಗೂ ಅನ್ವಯ

ಹತ್ತು ವರ್ಷಗಳ ಕಾಲ ಅಧಿಕಾರಿಗಳು ಒಂದೇ ಜಾಗದಲ್ಲೇ ಕೆಲಸ‌ ಮಾಡುತ್ತಿದ್ದಾರೆ. ಹೀಗಿದ್ರೂ, ವಿಜಯನಗರ ಜಿಲ್ಲೆ ಆಗಿದ್ದಕ್ಕೆ ನಮ್ಮ ಸಹಮತ ಇದೆ. ನೂತನ‌ ಜಿಲ್ಲೆಯಾದ ಬಳಿಕ ಅಧಿಕಾರಿಗಳು ಸರಿಯಾಗಿ ಕೆಲಸ ಮಾಡ್ತಾರಾ? ಎಂಬುದನ್ನು ಕಾದು ನೋಡಬೇಕು ಎಂದರು.

ABOUT THE AUTHOR

...view details