ಕರ್ನಾಟಕ

karnataka

ETV Bharat / state

ತಮ್ಮ ಮೂಲ ಕೆದಕಿದ ಸಾಹಿತಿ ಕುಂ.‌ ವೀರಭದ್ರಪ್ಪ ವಿರುದ್ಧ ಕರುಣಾಕರ ರೆಡ್ಡಿ ಗರಂ - latest Kum.Veerabhadrappa news

ಬಳ್ಳಾರಿ ಜಿಲ್ಲೆ ವಿಭಜನೆ ವಿರೋಧಿಸುತ್ತಿರುವ ರೆಡ್ಡಿ ಬ್ರದರ್ಸ್ ಆಂಧ್ರದವರು ಎಂದು ಸಾಹಿತಿ ಕುಂ. ವೀರಭದ್ರಪ್ಪ ಹೇಳಿದ್ದರು. ಆದ್ರೆ, ನಾವು ಬಳ್ಳಾರಿಯಲ್ಲೇ ಇದ್ದೇವೆ ಅನ್ನೋದಕ್ಕೆ ಬರ್ತ್ ಸರ್ಟಿಫಿಕೆಟ್ ಕೊಡಬೇಕೇ ಎಂದು ಹರಪನಹಳ್ಳಿ ಶಾಸಕ ಕರುಣಾಕರ ರೆಡ್ಡಿ ಕಿಡಿಕಾರಿದ್ದಾರೆ.

ಹರಪನಹಳ್ಳಿ ಶಾಸಕ ಕರುಣಾಕರ ರೆಡ್ಡಿ

By

Published : Oct 2, 2019, 8:32 AM IST

ದಾವಣಗೆರೆ:ಕುಂ.ವೀರಭದ್ರಪ್ಪ ಮೂರ್ಖ ಸಾಹಿತಿ, ಇಂಥಹವರ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲವೆಂದು ಹರಪನಹಳ್ಳಿ ಶಾಸಕ ಕರುಣಾಕರ ರೆಡ್ಡಿ ಕಿಡಿಕಾರಿದರು.

ಕುಂ.‌ವೀರಭದ್ರಪ್ಪ ಮೂರ್ಖ ಸಾಹಿತಿ : ಕರುಣಾಕರ ರೆಡ್ಡಿ ಆಕ್ರೋಶ

ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ಪಟ್ಟಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಕರುಣಾಕರ ರೆಡ್ಡಿ, ಬಳ್ಳಾರಿ ಜಿಲ್ಲೆ ವಿಭಜನೆ ವಿರೋಧಿಸುತ್ತಿರುವ ರೆಡ್ಡಿ ಬ್ರದರ್ಸ್ ಆಂಧ್ರದವರು ಎಂದು ಕುಂ.ವೀರಭದ್ರಪ್ಪ ಹೇಳಿದ್ದರು. ಆದ್ರೆ, ನಾವು ಬಳ್ಳಾರಿಯಲ್ಲೇ ಇದ್ದೇವೆ ಅನ್ನೋದಕ್ಕೆ ಬರ್ತ್ ಸರ್ಟಿಫಿಕೆಟ್ ಕೊಡ್ಲಾ? ಎಂದು ಪ್ರಶ್ನಿಸಿದರು. ಅಲ್ಲದೆ ನಮ್ಮ ತಂದೆ 35 ವರ್ಷ ಇಲ್ಲೇ ಪೊಲೀಸ್ ಆಗಿ ಸೇವೆ ಸಲ್ಲಿಸಿದ್ದರು. ಈ ಬಗ್ಗೆ ಪ್ರಮಾಣಪತ್ರ ಕೊಡಬೇಕೇ ಎಂದು ಕುಂ.ವೀ. ವಿರುದ್ಧ ಗರಂ ಆದ್ರು.

ABOUT THE AUTHOR

...view details