ದಾವಣಗೆರೆ:ಇಂದಿನ ದಿನಗಳಲ್ಲಿ ಚಿಕಿತ್ಸೆ ಬಿಟ್ಟುಬಿಡಿ ವೈದ್ಯರ ಪ್ರವೇಶ ಫೀ ನೋಡಿದರೇ ತಲೆ ತಿರುಗುವ ಕಾಲವಿದು. ಅಂತಹುದರಲ್ಲಿ ಇಲ್ಲೊಬ್ಬ ವೈದ್ಯರು ಯಾರಾದರೂ ಬಳಿ ಬಂದ್ರೇ ಕೇವಲ ಎರಡು ರೂಪಾಯಿ ಪಡೆದು ಅವರಿಗೆ ಸೂಕ್ತ ಚಿಕಿತ್ಸೆ ನೀಡುತ್ತಾ ರಾಜ್ಯಾದ್ಯಂತ ಮನೆಮಾತಾಗಿದ್ದಾರೆ.
ಬಡವರ ಆಶಾಕಿರಣ, ಗ್ರಾಮೀಣ ಜನರ ಆರಾಧ್ಯದೈವ ಎಂದೇ ಜನಪ್ರಿಯಗಳಿಸಿರುವ ಡಾ ಎಂ. ಬಸವಂತಪ್ಪ ಅವರ ಹೆಸರು ಇದೀಗ ಮುನ್ನಲೆಗೆ ಬಂದಿದೆ. ರಾಜ್ಯ ಸರಕಾರ ಡಾ ಎಂ. ಬಸವಂತಪ್ಪ ಅವರ ಸೇವೆ ಗುರುತಿಸಿ ಪ್ರಸಕ್ತ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಘೋಷಿಸಿದೆ.
ಎರಡು ರೂಪಾಯಿ ಡಾಕ್ಟರ್ ಬಸವಂತಪ್ಪ:ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಸಂತೇಬೆನ್ನೂರಿನ ಎರಡು ರೂಪಾಯಿ ಡಾಕ್ಟರ್ ಎಂದೇ ಡಾ. ಬಸವಂತಪ್ಪ ಚಿರಪರಿಚಿತರು. ಅವರು ಗ್ರಾಮೀಣ ಭಾಗದಲ್ಲಿ ಸಿದ್ದೇಶ್ವರ ಹೆಸರಿನ ಪುಟ್ಟ ಕ್ಲಿನಿಕ್ ಇಟ್ಟುಕೊಂಡು ಸುಮಾರು 18 ವರ್ಷಗಳಿಂದ ಬಡವರ ಸೇವೆ ಮಾಡುತ್ತಿದ್ದರು. ಇವರ ಸೇವೆಯನ್ನು ಸರ್ಕಾರ ಗುರುತಿಸಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಘೋಷಿಸಿ,ಗೌರವಿಸಿದೆ.