ಕರ್ನಾಟಕ

karnataka

ETV Bharat / state

ಕುತೂಹಲ ಮೂಡಿಸುತ್ತಿದೆ ದಾವಣಗೆರೆ ದಕ್ಷಿಣ.. ಶಿವಶಂಕರಪ್ಪ ಅವರಿಗೆ ಟಕ್ಕರ್​ ಕೊಡಲು ಬಿಜೆಪಿ ರಣತಂತ್ರ! - ವಿಧಾನಸಭಾ ಕ್ಷೇತ್ರದಲ್ಲಿ ಸಮಸ್ಯೆಗಳ ಸರಮಾಲೇ

ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ವಿಧಾನಸಭಾ ಚುನಾವಣೆ ರಂಗೇರುತ್ತಿದೆ. ಈ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್​ ನಡುವೆ ನೇರ ಪೈಪೋಟಿ ನಡೆಯುತ್ತಿದೆ. ಬಿಜೆಪಿಯ ಅಬ್ಬರದ ಪ್ರಚಾರದ ನಡುವೆಯೂ ಕಾಂಗ್ರೆಸ್​ ತನ್ನ ಪರಂಪರಾಗತ ಮತಗಳ ಮೇಲೆ ಹೆಚ್ಚಿನ ವಿಶ್ವಾಸ ಇಟ್ಟಂತಿದೆ.

Karnataka assembly election  Shamanur Shivashankarappa  Shivashankarappa will win again in Davanagere  Davanagere South Constituency  ಭಾರೀ ಕೂತುಹಲ ಮೂಡಿಸುತ್ತಿದೆ ದಾವಣಗೆರೆ ದಕ್ಷಿಣ  ಮತ್ತೊಮ್ಮೆ ಗೆದ್ದು ಬರಲಿದ್ದಾರಾ ಶಾಮನೂರು ಶಿವಶಂಕರಪ್ಪ  ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ವಿಧಾನಸಭಾ ಚುನಾವಣೆ  ಬಿಜೆಪಿ ಮತ್ತು ಕಾಂಗ್ರೆಸ್​ ನಡುವೆ ನೇರ ಪೈಪೋಟಿ  ಕ್ಷೇತ್ರದಲ್ಲಿ ಅಲ್ಪಸಂಖ್ಯಾತ ಮತಗಳೇ ಗೆಲುವಿಗೆ ನಿರ್ಣಾಯ  ಕಾಂಗ್ರೆಸ್​ ಅಭ್ಯರ್ಥಿ ಶಾಮನೂರು ಶಿವಶಂಕರಪ್ಪ  ವಿಧಾನಸಭಾ ಕ್ಷೇತ್ರದಲ್ಲಿ ಸಮಸ್ಯೆಗಳ ಸರಮಾಲೇ  ಜನ್ರು ಪರಿತಾಪಿಸುವ ಪರಿಸ್ಥಿತಿ ನಿರ್ಮಾಣ
ಭಾರೀ ಕೂತುಹಲ ಮೂಡಿಸುತ್ತಿದೆ ದಾವಣಗೆರೆ ದಕ್ಷಿಣ

By

Published : Apr 29, 2023, 11:42 AM IST

Updated : Apr 30, 2023, 9:52 AM IST

ಕುತೂಹಲ ಮೂಡಿಸುತ್ತಿದೆ ದಾವಣಗೆರೆ ದಕ್ಷಿಣ ಕ್ಷೇತ್ರ

ದಾವಣಗೆರೆ:ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ ಸದ್ಯ ಹೈವೋಲ್ಟೆಜ್ ಕ್ಷೇತ್ರವಾಗಿ ಬದಲಾಗುತ್ತಿರುವ ಕ್ಷೇತ್ರ. ಇಲ್ಲಿ ಹಾಲಿ ಶಾಸಕ ಶಾಮನೂರು ಶಿವಶಂಕರಪ್ಪ ಹಾಗೂ ಬಿಜೆಪಿ ಮಧ್ಯೆ ನೇರ ನೇರ ಫೈಟ್ ನಡೆಯುತ್ತಿದೆ. ಆದರೆ, ಶಾಮನೂರು ಶಿವಶಂಕರಪ್ಪ ಅವರ ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಅಭಿವೃದ್ಧಿ ಕುಂಠಿತವಾಗಿದೆ ಎಂಬ ಕೂಗು ಕೇಳಿ ಬರುತ್ತಿದೆ.

ಈ ಹೈವೋಲ್ಟೇಜ್​​ ​ ಕ್ಷೇತ್ರದಲ್ಲಿ ಅಲ್ಪಸಂಖ್ಯಾತ ಮತಗಳೇ ಗೆಲುವಿಗೆ ನಿರ್ಣಾಯವಾಗಿದೆ. ಮುಸ್ಲಿಮರೇ ಹೆಚ್ಚಿರುವ ಆಜಾದ್ ನಗರ, ಬಾಷಾ ನಗರ, ಮೆಹೆಬೂಬ್ ನಗರ, ಮುಸ್ತಾಫ ನಗರ, ಹೀಗೆ ಈ ಭಾಗದಲ್ಲಿ ಹತ್ತು ಹಲುವು ಮುಸ್ಲಿಂ‌ ಕಾಲೋನಿಗಳಿದ್ದು, ಅಭಿವೃದ್ಧಿ ಮಾತ್ರ ಎದ್ದು ಕಾಣುತ್ತಿಲ್ಲ ಎನ್ನುವುದು ಇಲ್ಲಿನ ಮತದಾರರ ಅನಿಸಿಕೆ ಆಗಿದೆ.

ಕಾಂಗ್ರೆಸ್​ ಅಭ್ಯರ್ಥಿ ಶಾಮನೂರು ಶಿವಶಂಕರಪ್ಪ ಅವರು, 2008, 2013 ಹಾಗೂ 2018ರಲ್ಲಿ ಸತತವಾಗಿ ಮೂರು ಬಾರಿ ಆಯ್ಕೆ ಆಗಿದ್ದು, ಇದೀಗ 2023 ಕ್ಕೆ ಮತ್ತೆ ಸ್ಪರ್ಧೆ ಮಾಡಿದ್ದಾರೆ. ಇವರ ವಿರುದ್ಧ ಬಿಜೆಪಿ ಗೆಲುವಿಗಾಗಿ ಟೊಂಕ ಕಟ್ಟಿ ನಿಂತಿದೆ.

ಶಾಲೆ ಕಾಲೇಜು, ಆಸ್ಪತ್ರೆ ಬೇಕು:2008ರಲ್ಲಿ ದಾವಣಗೆರೆ ದಕ್ಷಿಣ ಕ್ಷೇತ್ರ ವಿಂಗಡನೆಯಾದ ಬಳಿಕ ಮೂರು ಬಾರಿ ಶಾಮನೂರು ಶಿವಶಂಕರಪ್ಪ ಗೆಲುವು ಸಾಧಿಸಿದ್ದಾರೆ. ಇಲ್ಲಿ ಒಂದೊಳ್ಳೆ ಕಾಲೇಜು, ಆಸ್ಪತ್ರೆ, ಶಾಲೆಗಳನ್ನ ಕ್ಷೇತ್ರಕ್ಕೆ ತರಲು ಸಾಧ್ಯವಾಗಿಲ್ಲ ಎಂಬುದು ಮತದಾರರೊಬ್ಬರ ಅಸಮಾಧಾನಕ್ಕೆ ಕಾರಣವಾಗಿದೆ. ಈಟಿವಿ ಭಾರತದೊಂದಿಗೆ ಮಾತನಾಡಿದ ಅವರು, ಇಲ್ಲಿ ಒಂದೊಳ್ಳೆ ಆಸ್ಪತ್ರೆ, ಕಾಲೇಜು, ಶಾಲೆಗಳು ಇಲ್ಲದೇ ದಾವಣಗೆರೆ ದಕ್ಷಿಣ ಮತ ಕ್ಷೇತ್ರದ ಜನ್ರು ಪರಿತಾಪಿಸುವ ಪರಿಸ್ಥಿತಿ ನಿರ್ಮಾಣ ಆಗಿದೆ. ಅದರೆ ರಸ್ತೆ ಬ್ರಿಡ್ಜ್, ಚರಂಡಿ, ಕುಡಿವ ನೀರಿಗೆ ಆದ್ಯತೆ ನೀಡಿ ಅಭಿವೃದ್ಧಿ ಮಾಡಿದ್ದಾರೆ.ಈ ಬಾರಿ ಗೆದ್ದು ಮತ್ತಷ್ಟು ಅಭಿವೃದ್ಧಿ ಮಾಡುವುದಾಗಿ ಮಾತು ನೀಡಿದ್ದಾರೆ ಎಂದು ಹೇಳಿದರು.

ಈ ಕ್ಷೇತ್ರಗಳಲ್ಲಿ ಸಮಸ್ಯೆಗಳೇನು?:ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಸಮಸ್ಯೆಗಳ ಸರಮಾಲೆಯೇ ಇವೆ. ಸರ್ಕಾರಿ ಕಚೇರಿಗಳಲ್ಲದ್ದೆ ಜನ ಹಳೇ ದಾವಣಗೆರೆಯಿಂದ ಹೋಸ ದಾವಣಗೆರೆ ಕಡೆ ಬರುವ ಪರಿಸ್ಥಿತಿ ಇದೆ. ಒಂದೊಳ್ಳೆ ಶಾಲೆಗಳಿಲ್ಲ, ಆಸ್ಪತ್ರೆಗಳಿಲ್ಲದೆ ಆ ಭಾಗದ ಜನ ಚಿಕಿತ್ಸೆ ಹರಸಿ ದಾವಣಗೆರೆ ಹೃದಯ ಭಾಗಕ್ಕೆ ಬರುವ ಪರಿಸ್ಥಿತಿ ನಿರ್ಮಾಣ ಆಗಿದೆ. ಇನ್ನು ಮಂಡಕ್ಕಿ ಬಟ್ಟಿಗಳಿಂದ ಹೊರ ಸೂಸುವ ಹೊಗೆಯಿಂದ ಈ ಭಾಗದ ಜನ ರೋಸಿ ಹೋಗಿದ್ದಾರೆ.

ಜನರ ಬೇಡಿಕೆಗಳೇನು?:ದಾವಣಗೆರೆ ದಕ್ಷಿಣ ಮತಕ್ಷೇತ್ರದಲ್ಲಿ ಮತದಾರ ಬೇಡಿಕೆಗಳನ್ನು ನೋಡುವುದಾದರೆ ಕ್ಷೇತ್ರದಲ್ಲಿ ಒಂದೊಳ್ಳೆ ಹೈಟೆಕ್ ಸರ್ಕಾರಿ ಆಸ್ಪತ್ರೆ ಅವಶ್ಯಕವಾಗಿದೆ. ಈ ಕ್ಷೇತ್ರದಲ್ಲಿ ಶಿಕ್ಷಣದಿಂದ ಮಕ್ಕಳು ವಂಚಿತರಾಗುತ್ತಿರಿವುದ್ದರಿಂದ ಹೈಟೆಕ್ ಶಾಲಾ ಕಾಲೇಜುಗಳು ಬೇಕಾಗಿದೆ. ಇನ್ನು ದಾವಣಗೆರೆ ಉತ್ತರ ಕ್ಷೇತ್ರ ಯಾವ ರೀತಿ ಅಭಿವೃದ್ಧಿ ಆಗಿದಿಯೋ ಅಂದ್ರೇ ರಸ್ತೆ, ಒಳ ಚರಂಡಿ, ಹೈಟೆಕ್ ಫುಟ್ಪಾತ್, ಎಲ್​ಇಡಿ ಬೀದಿ ದೀಪಗಳು ಬೇಕಾಗಿದೆ. ಇದಲ್ಲದೆ ಕೆಲ ರಸ್ತೆಗಳು ಕಿರಿದಾಗಿದ್ದು, ಅವುಗಳನ್ನು ಅಗಲಿಕರಣ ಮಾಡ್ಬೇಕಾಗಿದೆ ಎಂಬುದು ಸ್ಥಳೀಯರ ಅಭಿಪ್ರಾಯವಾಗಿದೆ.

ಓದಿ:ದಾವಣಗೆರೆ: ಪ್ರಚಾರಕ್ಕೆ ಬಂದ ಶಾಸಕ ರೇಣುಕಾಚಾರ್ಯಗೆ ಗ್ರಾಮಸ್ಥರಿಂದ ತರಾಟೆ

Last Updated : Apr 30, 2023, 9:52 AM IST

ABOUT THE AUTHOR

...view details