ದಾವಣಗೆರೆ: ಇಂದು ರಾಜ್ಯಾದಂತ್ಯ 66ನೇ ಕನ್ನಡ ರಾಜ್ಯೋತ್ಸವದ ಸಂಭ್ರಮ ಮನೆ ಮಾಡಿದೆ. ನಮ್ಮ ರಾಜ್ಯವಲ್ಲದೆ ಉತ್ತರಖಂಡದಲ್ಲೂ ಕೂಡ ಕನ್ನಡದ ಕಂಪನ್ನು ಕನ್ನಡಭಿಮಾನಿಗಳು ಪಸರಿಸಿದ್ದಾರೆ.
ಉತ್ತರಖಂಡದ ಕೇದಾರದಲ್ಲಿ ಕನ್ನಡ ಡಿಂಡಿಮವನ್ನು ದಾವಣಗೆರೆಯ ಹುಡುಗರ ತಂಡ ಮೊಳಗಿಸಿದೆ. ದಾವಣಗೆರೆಯಿಂದ ಪ್ರವಾಸ ಹೋದವರಿಂದ ಕೇದಾರನಾಥದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಗಿದೆ. ಕೇದಾರನಾಥೇಶ್ವರ ದೇಗುಲದ ಆವರಣದಲ್ಲಿ ಕನ್ನಡದ ಬಾವುಟ ಹಿಡಿದು ಕನ್ನಡಾಂಭೆಗೆ ಜೈಕಾರ ಹಾಕಿದ್ದಾರೆ.