ಕರ್ನಾಟಕ

karnataka

ETV Bharat / state

ಕಲಬುರಗಿ ವಿಮಾನ ನಿಲ್ದಾಣಕ್ಕೆ ಸಂತ ಸೇವಾಲಾಲ್​​​ ಮಹಾರಾಜರ ಹೆಸರಿಡಬೇಕೆಂದು ಆಗ್ರಹ - ಲೆಟೆಸ್ಟ್ ದಾವಣಗೆರೆ ಪ್ರತಿಭಟನೆ

ಕಲಬುರಗಿ ವಿಮಾನ ನಿಲ್ದಾಣ ಉದ್ಘಾಟನೆ ನೆಪದಲ್ಲಿ ಶ್ರೀ ಸಂತ ಸೇವಾಲಾಲ್ ದೇವಾಲಯ ಹಾಗೂ ಮರಿಯಮ್ಮ ದೇವಾಲಯವನ್ನು ಧ್ವಂಸ ಮಾಡಿರುವ ಹಿನ್ನೆಲೆ ದಾವಣಗೆರೆಯಲ್ಲಿ ಕರ್ನಾಟಕ ತಾಂಡಾ ರಕ್ಷಣಾ ವೇದಿಕೆ ಆಕ್ರೋಶ ವ್ಯಕ್ತಪಡಿಸಿದ್ದು, ವಿಮಾನ ನಿಲ್ದಾಣಕ್ಕೆ ಸಂತ ಸೇವಾಲಾಲ್ ಮಹಾರಾಜರ ಹೆಸರಿಡಬೇಕು ಎಂದು ಆಗ್ರಹಿಸಿದೆ.

protest at davanagere
ಕಲಬುರಗಿ ವಿಮಾನ ನಿಲ್ದಾಣಕ್ಕೆ ಸಂತ ಸೇವಾಲಾಲ್ ಮಹಾರಾಜರ ಹೆಸರಿಡಬೇಕೆಂದು ಆಗ್ರಹ !

By

Published : Dec 3, 2019, 7:33 PM IST

ದಾವಣಗೆರೆ:ಕಲಬುರಗಿ ವಿಮಾನ ನಿಲ್ದಾಣ ಉದ್ಘಾಟನೆ ನೆಪದಲ್ಲಿ ಶ್ರೀ ಸಂತ ಸೇವಾಲಾಲ್ ದೇವಾಲಯ ಹಾಗೂ ಮರಿಯಮ್ಮ ದೇವಾಲಯವನ್ನು ಧ್ವಂಸ ಮಾಡಿರುವ ಹಿನ್ನೆಲೆ ದಾವಣಗೆರೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ ತಾಂಡಾ ರಕ್ಷಣಾ ವೇದಿಕೆ, ಕಲಬುರಗಿ ವಿಮಾನ ನಿಲ್ದಾಣಕ್ಕೆ ಸಂತ ಸೇವಾಲಾಲ್ ಮಹಾರಾಜರ ಹೆಸರಿಡಬೇಕು ಎಂದು ಆಗ್ರಹಿಸಿದೆ.

ಕಲಬುರಗಿ ವಿಮಾನ ನಿಲ್ದಾಣಕ್ಕೆ ಸಂತ ಸೇವಾಲಾಲ್ ಮಹಾರಾಜರ ಹೆಸರಿಡಬೇಕೆಂದು ಆಗ್ರಹ

ನಗರದ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ವೇದಿಕೆ ಕಾರ್ಯಕರ್ತರು, ಜಯದೇವ ವೃತ್ತದದಿಂದ ಗಾಂಧಿ ವೃತ್ತದವರೆಗೆ ಮಾನವ ಸರಪಳಿ ಮಾಡಿ ಆಕ್ರೋಶ ವ್ಯಕ್ತಪಡಿಸಿದರು. ಕಲಬುರಗಿ ವಿಮಾನ ನಿಲ್ದಾಣದ ಉದ್ದೇಶಕ್ಕೆ ಸುತ್ತಮುತ್ತ ವಾಸ ಮಾಡುತ್ತಿದ್ದ ಲಂಬಾಣಿ ತಾಂಡಗಳನ್ನು ಸರ್ಕಾರದ ಆದೇಶದ ಮೇರೆಗೆ ಬೇರೆಡೆ ಸ್ಥಳಾಂತರಿಸಿ ಸುಮಾರು 569 ಎಕರೆ ಭೂಮಿಯನ್ನು ಸರ್ಕಾರ ಸ್ವಾಧೀನ ಪಡೆದುಕೊಂಡಿದೆ. ಈ ಜಮೀನಿನಲ್ಲಿ ಸಂತ ಸೇವಾಲಾಲ್ ದೇವಾಲಯವಿದ್ದು, ದೇವಾಲಯಕ್ಕೆ ಧಕ್ಕೆ ಬಾರದಂತೆ ನೋಡಿಕೊಳ್ಳುವುದಾಗಿ ಹೇಳಿತ್ತು. ಆದರೆ ಉದ್ಘಾಟನೆಗೂ ಮುನ್ನ ದೇವಾಲಯ ನೆಲಸಮಗೊಳಿಸಿದೆ. ಈ ಹಿನ್ನೆಲೆ ಸಂತ ಸೇವಾಲಾಲ್ ಹಾಗೂ ಮರಿಯಮ್ಮ ದೇವಾಲಯದ ಮರು ನಿರ್ಮಾಣಕ್ಕೆ ಮುಂದಾಗಬೇಕೆಂದು ಒತ್ತಾಯಿಸಿದರು.

ಜೊತೆಗೆ ಉದ್ಘಾಟನೆಗೊಂಡಿರುವ ಕಲಬುರಗಿ ವಿಮಾನ ನಿಲ್ದಾಣಕ್ಕೆ ಸಂತ ಸೇವಾಲಾಲ್ ಅವರ ಹೆಸರಿಡಬೇಕು. ಸ್ಥಳೀಯ ರೈತ ಕುಟುಂಬಗಳಿಗೆ ಉದ್ಯೋಗಾವಕಾಶ ನೀಡಬೇಕು ಎಂದು ಆಗ್ರಹಿಸಿದರು.

ABOUT THE AUTHOR

...view details