ದಾವಣಗೆರೆ: ಎಸ್ಟಿ ಮೀಸಲಾತಿಗಾಗಿ ಕುರುಬ ಸಮುದಾಯ ಹೋರಾಟ ನಡೆಸುತ್ತಿರುವ ಬೆನ್ನಲ್ಲೇ ಇಂದು ಕಾಗಿನೆಲೆ ನಿರಂಜನಾನಂದ ಪುರಿ ಶ್ರೀ ನೇತೃತ್ವದಲ್ಲಿ ಚಿಂತನ ಸಭೆ ನಡೆಸಲಾಯಿತು.
ಎಸ್ಟಿ ಮೀಸಲಾತಿಗಾಗಿ ಕಾಗಿನೆಲೆ ಶ್ರೀಗಳಿಂದ ಚಿಂತನ ಸಭೆ: ಈಶ್ವರಪ್ಪ ಭಾಗಿ - ಎಸ್ಟಿ ಮೀಸಲಾತಿಗಾಗಿ ಕಾಗಿನೆಲೆ ಶ್ರೀ ಚಿಂತನ ಸಭೆ
ಎಸ್ಟಿ ಮೀಸಲಾತಿಗಾಗಿ ಕುರುಬ ಸಮುದಾಯ ನಿರಂತರ ಹೋರಾಟ ನಡೆಸುತ್ತಿದ್ದು, ಇಂದು ಈ ಬಗ್ಗೆ ಚರ್ಚೆ ನಡೆಸಲು ಕಾಗಿನೆಲೆ ನಿರಂಜನಾನಂದ ಪುರಿ ಶ್ರೀಗಳು ಚಿಂತನೆ ಸಭೆಯೊಂದನ್ನ ನಡೆಸಿದ್ದಾರೆ. ಈ ಸಭೆಯಲ್ಲಿ ಸಚಿವ ಕೆಎಸ್ ಈಶ್ವರಪ್ಪ ಸೇತರಿದಂತೆ ಎಲ್ಲ ಶಾಖಾ ಮಠಗಳ ಶ್ರೀಗಳು ಪಾಲ್ಗೊಂಡಿದ್ದರು.
ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಬೆಳ್ಳೂಡಿ ಶಾಖಾ ಮಠದಲ್ಲಿ ಎಲ್ಲ ಶಾಖಾ ಮಠಗಳ ಶ್ರೀಗಳನ್ನು ಕರೆಸಿ ನಿರಂಜನಾನಂದ ಪುರಿ ಶ್ರೀಯವರು ಚಿಂತನ ಸಭೆ ನಡೆಸಿದರು. ಈ ಸಭೆಯಲ್ಲಿ ಪಂಚಾಯತ್ ರಾಜ್ ಸಚಿವ ಕೆಎಸ್ ಈಶ್ವರಪ್ಪ ಕೂಡ ಭಾಗಿಯಾಗಿದ್ದು, ಮುಂದಿನ ಹೋರಾಟದ ಬಗ್ಗೆ ಚರ್ಚೆ ನಡೆಸಿದರು.
ದಾವಣಗೆರೆ, ಚಿತ್ರದುರ್ಗ, ಹಾವೇರಿ ಜಿಲ್ಲೆಯನ್ನು ಕೇಂದ್ರವಾಗಿಸಿಕೊಂಡು ಜನವರಿ 06 ರಂದು ದಾವಣಗೆರೆಯಲ್ಲಿ ಎಸ್ಟಿ ಮೀಸಲಾತಿಗಾಗಿ ಸಮಾವೇಶ ಹಮ್ಮಿಕೊಳ್ಳಲಾಗಿದ್ದು, ಆ ಸಮಾವೇಶದ ಬಗ್ಗೆ ಚರ್ಚಿಸಲು ಎಲ್ಲ ಶಾಖಾ ಮಠಗಳ ಶ್ರೀಗಳನ್ನು ಒಂದೆಡೆ ಸೇರಿಸಿ ಚಿಂತನ ಸಭೆ ನಡೆಸಿ ಸಮಾವೇಶದಲ್ಲಿ ಭಾಗಿಯಾಗುವಂತೆ ಹಾಲುಮತ ಸಮುದಾಯದ ಜನರಿಗೆ ಮನವಿ ಮಾಡಲಾಯಿತು.