ಕರ್ನಾಟಕ

karnataka

ETV Bharat / state

ಸಿಎಂ ಬಿಎಸ್​ವೈಗೆ ಸ್ವಾಗತ ಕೋರಿದ ಕೆ.ಎಸ್. ಈಶ್ವರಪ್ಪ - k s eshwarappa welcomes cm

ಕನಕದಾಸರ ಜಯಂತಿ ಆಚರಣೆಗೆ ಅವಕಾಶ ಮಾಡಿಕೊಟ್ಟಿದ್ದೇ ಯಡಿಯೂರಪ್ಪನವರು ಎಂದು ಸಿಎಂ ಬಿಎಸ್​ವೈ ಪರ ಸಚಿವ ಕೆ.ಎಸ್. ಈಶ್ವರಪ್ಪ ಭಾಷಣ ಮಾಡಿದರು.

k s eshwarappa
ಸಚಿವ ಕೆ.ಎಸ್. ಈಶ್ವರಪ್ಪ

By

Published : Apr 4, 2021, 7:55 PM IST

ದಾವಣಗೆರೆ: ನಮ್ಮೆಲ್ಲರ ನಾಯಕ ಹಾಗೂ ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪನವರೇ ಎಂದು ಭಾಷಣ ಆರಂಭ ಮಾಡಿ ಸಿಎಂ ಯಡಿಯೂರಪ್ಪನವರಿಗೆ ಸಚಿವ ಕೆ.ಎಸ್. ಈಶ್ವರಪ್ಪ ಸ್ವಾಗತ ಕೋರಿದರು.

ಸಚಿವ ಕೆ.ಎಸ್. ಈಶ್ವರಪ್ಪ ಭಾಷಣ

ಜಿಲ್ಲೆಯ ಹರಿಹರ ತಾಲೂಕಿನ ಬೆಳ್ಳೊಡಿ ಕಾಗಿನೆಲೆ ಶಾಖಾ ಮಠ ಗುರುಪೀಠದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕನಕದಾಸರ ಜಯಂತಿ ಆಚರಣೆಗೆ ಅವಕಾಶ ಮಾಡಿಕೊಟ್ಟಿದ್ದೇ ಯಡಿಯೂರಪ್ಪನವರು ಎಂದು ಸಿಎಂ ಯಡಿಯೂರಪ್ಪ ಪರ ಭಾಷಣ ಮಾಡಿದರು.

ಇದನ್ನೂ ಓದಿ:ಧರ್ಮಸ್ಥಳಕ್ಕೆ ಭೇಟಿ ನೀಡಿದ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್

ಮೀಸಲಾತಿಗಾಗಿ ನಾವು ಸ್ವಾಮೀಜಿ ಜೊತೆ ಹೋರಾಟ ಮಾಡಿದ್ದೇವೆ. ನಮಗೆ ಮಾತ್ರ ಮೀಸಲಾತಿ ನೀಡಿ ಎಂದು ಹೇಳುತ್ತಿಲ್ಲ, ಬದಲಾಗಿ ಕೋಳಿ ಸಮಾಜ, ಸವಿತ ಸಮಾಜ ಹಾಗೂ ಉಪ್ಪಾರ ಸಮಾಜಕ್ಕೆ ನಮ್ಮ ಜೊತೆ ಮೀಸಲಾತಿ ನೀಡಿ, ನಮ್ಮ ಜೊತೆ ಅವರು ಕೂಡ ಇದ್ದಾರೆಂದು ಹೇಳಿದ್ದೇವೆ. ನ್ಯಾಯದ ದಾರಿಯಲ್ಲಿ ಶ್ರೀಗಳು ಹೊರಟಿದ್ದಾರೆ. ರಾಜ್ಯ ಸರ್ಕಾರ ಮೀಸಲಾತಿ ನೀಡಲು ಒಪ್ಪಿಗೆ ನೀಡಿದೆ ಎಂದು ತಿಳಿಸಿದರು.

ABOUT THE AUTHOR

...view details