ಕರ್ನಾಟಕ

karnataka

ETV Bharat / state

ಮಾಜಿ ಶಾಸಕ ಮುನಿರತ್ನ ಋಣಭಾರ ನಮ್ಮ ಮೇಲಿದೆ: ಕೆ. ಎಸ್. ಈಶ್ವರಪ್ಪ ... - Iswarappa talks about muniratna

ಬಿಜೆಪಿ ಪಕ್ಷಕ್ಕೆ ಅಭ್ಯರ್ಥಿಯಾಗಲೀ, ವ್ಯಕ್ತಿ ಆಗಲೀ ಮುಖ್ಯ ಅಲ್ಲ. ಪಕ್ಷದ ಚಿಹ್ನೆಯಡಿ ಚುನಾವಣೆ ನಡೆಯುತ್ತದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ. ಎಸ್. ಈಶ್ವರಪ್ಪ ತಿಳಿಸಿದ್ದಾರೆ.

K. S. Eshwarappa talks about Muniratna
ಕೆ. ಎಸ್. ಈಶ್ವರಪ್ಪ

By

Published : Oct 12, 2020, 5:50 PM IST

ದಾವಣಗೆರೆ: ಮುನಿರತ್ನ ಅವರಿಗೆ ನ್ಯಾಯಯುತವಾಗಿ ಟಿಕೆಟ್ ಸಿಗಬೇಕು. ಅವರು ನಮ್ಮ ಪಕ್ಷಕ್ಕೆ ಬರದಿದ್ದರೆ ನಾವು ಮಂತ್ರಿಗಳೂ ಆಗ್ತಿರಲಿಲ್ಲ. ಸರ್ಕಾರವೂ ಅಸ್ತಿತ್ವಕ್ಕೆ ಬರುತ್ತಿರಲಿಲ್ಲ.ಅವರ ಋಣ ತೀರಿಸಬೇಕಾದ ಜವಾಬ್ದಾರಿ ನಮ್ಮ‌ ಮೇಲಿದೆ. ಅವರಿಗೆ ಅನ್ಯಾಯ ಆಗುವುದಿಲ್ಲ ಎಂದಷ್ಟೇ ಹೇಳಬಹುದು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ. ಎಸ್. ಈಶ್ವರಪ್ಪ ತಿಳಿಸಿದ್ದಾರೆ.

ಕೆ. ಎಸ್. ಈಶ್ವರಪ್ಪ
ನಗರದ ಹಿಮೋಫಿಲಿಯಾ ಸೊಸೈಟಿಗೆ ಭೇಟಿ ನೀಡಿದ ವೇಳೆ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಈ ಹಿಂದೆ ಬಿಜೆಪಿ ಟಿಕೆಟ್ ನೀಡುತ್ತದೆ ಎಂದರೆ ಡೆಪಾಸಿಟ್ ಕಳೆದುಕೊಳ್ಳುವ ಭಯದಲ್ಲಿ ಓಡಿ ಹೋಗ್ತಿದ್ದರು‌.‌ ಅಂತಹ ಕಾಲವೂ ಇತ್ತು. ಆದ್ರೆ, ಈಗ ಚುನಾವಣೆ ಬಂದರೆ ಬಿಜೆಪಿಯದ್ದೇ ಗೆಲುವು ಎಂಬ ವಾತಾವರಣ ಇದೆ. ಹಾಗಾಗಿ ಉಪಚುನಾವಣೆಯಲ್ಲಿ ಆಕಾಂಕ್ಷಿಗಳ ಪಟ್ಟಿ ಹೆಚ್ಚಿದೆ. ಸಿಎಂ ಯಡಿಯೂರಪ್ಪ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ತಿಳಿಸಿದರು. ಬಿಜೆಪಿ ಪಕ್ಷಕ್ಕೆ ಅಭ್ಯರ್ಥಿಯಾಗಲೀ, ವ್ಯಕ್ತಿ ಆಗಲೀ ಮುಖ್ಯ ಅಲ್ಲ. ಪಕ್ಷದ ಚಿಹ್ನೆಯಡಿ ಚುನಾವಣೆ ನಡೆಯುತ್ತದೆ. ನಮ್ಮಲ್ಲಿ ಮೂಲ, ಅಮೂಲ ಎನ್ನುವುದಿಲ್ಲ.‌ ಉಪಚುನಾವಣೆಯಲ್ಲಿ ಗೆಲುವು ನಮ್ಮದು ಎಂದು ಈಶ್ವರಪ್ಪ ವಿಶ್ವಾಸ ವ್ಯಕ್ತಪಡಿಸಿದರು.

For All Latest Updates

ABOUT THE AUTHOR

...view details