ಕರ್ನಾಟಕ

karnataka

ETV Bharat / state

ಕೊರೊನಾ ಭಯ: ರೈಲಿಗೆ ತಲೆಕೊಟ್ಟ ಪತ್ರಕರ್ತ - ರೈಲಿಗೆ ತಲೆಕೊಟ್ಟ ಪತ್ರಕರ್ತ

ಕೊರೊನಾ ಪಾಸಿಟಿವ್​ ಬಂದರೆ ಬೆಡ್, ವೆಂಟಿಲೇಟರ್, ಆಕ್ಸಿಜನ್ ಸಿಗುವುದಿಲ್ಲ ಎಂದು ಹೆದರಿ ಕೋವಿಡ್​ ಲಕ್ಷಣಗಳಿದ್ದ ಪತ್ರಕರ್ತರೊಬ್ಬರು ದಾವಣಗೆರೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

suicide
suicide

By

Published : May 5, 2021, 9:22 PM IST

ದಾವಣಗೆರೆ: ಕೊರೊನಾ ಭಯದ ಹಿನ್ನೆಲೆಯಲ್ಲಿ ಪತ್ರಕರ್ತನೊಬ್ಬ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆಗೆ ಶರಣಾಗಿರುವ ಘಟನೆ ದಾವಣಗೆರೆ ತಾಲೂಕಿನ ಕುಂದೂರು ಗ್ರಾಮದ ಬಳಿ ನಡೆದಿದೆ.

ಪತ್ರಕರ್ತ ಪರಮೇಶ್ ಕೊರೊನಾ ಭಯದ ಕಾರಣ ಅಮರಾವತಿ ಬಳಿ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡವರು. ಇವರಿಗೆ ಕೆಲ ದಿನಗಳ ಹಿಂದೆ ಶೀತ, ಜ್ವರ, ಕೆಮ್ಮು ಇದ್ದು, ಕೊರೊನಾ ಭಯಕ್ಕೊಳಗಾಗಿದ್ದರು. ಕೊರೊನಾ ಪರೀಕ್ಷೆ ಮಾಡಿಸಿ ಪರೀಕ್ಷಾ ವರದಿ ಪಾಸಿಟಿವ್ ಬಂದ್ರೆ ಎಲ್ಲಿ ಇರೋದು, ಬೆಡ್, ವೆಂಟಿಲೇಟರ್, ಆಕ್ಸಿಜನ್ ಸಿಗುತ್ತಿಲ್ಲ ಎಂಬ ಕಾರಣಕ್ಕೆ ರೈಲಿಗೆ ತಲೆ ಕೊಟ್ಟಿದ್ದಾನೆ ಎಂದು ಅವರ ಆಪ್ತ ಮೂಲ ತಿಳಿಸಿದೆ.

ಪರಮೇಶ್ ಸುಮಾರು 10ರಿಂದ 15 ವರ್ಷಗಳ ಕಾಲ ಪತ್ರಿಕೋದ್ಯಮದಲ್ಲಿ ಕೆಲಸ ಮಾಡಿದ್ದು, ಸರಕಾರಿ ಶಾಲೆಗಳಲ್ಲಿನ ಲೋಪ, ಖಾತರಿಯಲ್ಲಿ ಭ್ರಷ್ಟಾಚಾರ ಸೇರಿದಂತೆ ಇನ್ನಿತರ ಕಡೆ ನಡೆಯುತ್ತಿದ್ದ ಭ್ರಷ್ಟಚಾರವನ್ನು ತಡೆಗಟ್ಟುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಅದರಲ್ಲೂ ಸರಕಾರಿ ಶಾಲೆಗಳ ಮೇಲೆ ಅವರಿಗೆ ಅಪಾರವಾದ ಪ್ರೀತಿ ಇತ್ತು. ಎಷ್ಟೋ ಸಮಸ್ಯೆಗಳನ್ನು ಬರವಣಿಗೆ ಮೂಲಕ ಭ್ರಷ್ಟರನ್ನು ಕುಟುಕಿದ್ದರು. ಇನ್ನು ಆತ್ಮಹತ್ಯೆ ಘಟನೆ ಸಂಬಂಧ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details