ದಾವಣಗೆರೆ:ಕಳೆದ ಹದಿನಾರು ತಿಂಗಳ ಶಿಷ್ಯ ವೇತನಕ್ಕೆ ಆಗ್ರಹಿಸಿ ಎಂಟು ದಿನಗಳಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸುತ್ತಿರುವ ಜಯ ಜಗದ್ಗುರು ಮುರುಘಾರಾಜೇಂದ್ರ (ಜೆಜೆಎಂ) ಮೆಡಿಕಲ್ ಕಾಲೇಜಿನ 230 ವೈದ್ಯರು ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು, ತಮ್ಮ ಮುಷ್ಕರವನ್ನು ಮುಂದುವರಿಸಿದ್ದಾರೆ.
ಈಡೇರದ ಬೇಡಿಕೆಗಳು: ನಾಳೆಗೂ ಮುಷ್ಕರ ಮುಂದುವರಿಸಿದ ಜೆಜೆಎಂ ವೈದ್ಯರು
ಜಯ ಜಗದ್ಗುರು ಮುರುಘಾರಾಜೇಂದ್ರ ಮೆಡಿಕಲ್ ಕಾಲೇಜಿನ ವೈದ್ಯರು ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳ ಮುಷ್ಕರ ಸದ್ಯಕ್ಕೆ ನಿಲ್ಲುವ ಲಕ್ಷಣ ಕಾಣಿಸುತ್ತಿಲ್ಲ. ನಿನ್ನೆ ಒಂದು ದಿನ ಮುಷ್ಕರ ಕೈಬಿಟ್ಟಿದ್ದರೂ, ಇಂದು ಮತ್ತೆ ಧರಣಿ ನಡೆಸುತ್ತಿದ್ದಾರೆ. ನಾಳೆಯೂ ಪ್ರತಿಭಟನೆ ಮುಂದುವರಿಸುವುದಾಗಿ ಪಟ್ಟುಹಿಡಿದಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಅವರ ಭರವಸೆ ಹಿನ್ನೆಲೆ ನಿನ್ನೆ ಒಂದು ದಿನ ಮುಷ್ಕರ ಕೈಬಿಟ್ಟಿದ್ದರು. ಇಂದು ಮತ್ತೆ ಧರಣಿ ನಡೆಸುತ್ತಿದ್ದಾರೆ. ಸೋಮವಾರ ಈ ಹೋರಾಟ ನಿಲ್ಲುವ ಸಾಧ್ಯತೆ ಇತ್ತಾದರೂ ಆಡಳಿತ ಮಂಡಳಿ ಯಾವ ನಿರ್ಧಾರಕ್ಕೂ ಬಂದಿಲ್ಲ. ಹೀಗಾಗಿ, ನಾಳೆಯೂ ಅಮರಣಾಂತ ಉಪವಾಸ ಸತ್ಯಾಗ್ರಹ ಮುಂದುವರಿಸುವುದಾಗಿ ವೈದ್ಯರು ಹಾಗೂ ವಿದ್ಯಾರ್ಥಿಗಳು ತಿಳಿಸಿದ್ದಾರೆ.
ಸರ್ಕಾರ ಕೊರೊನಾ ಹೆಮ್ಮಾರಿ ಆರ್ಭಟಿಸುತ್ತಿರುವ ಇಂಥ ವೇಳೆಯಲ್ಲಿ ಇಷ್ಟೊಂದು ನಿರ್ಲಕ್ಷ್ಯ ವಹಿಸುತ್ತಿರುವುದು ಸರಿಯಲ್ಲ. ಹಗಲು- ರಾತ್ರಿ ಕೆಲಸ ಮಾಡುವ ಕೊರೊನಾ ವಾರಿಯರ್ಸ್ಗಳನ್ನು ಈ ರೀತಿ ನಡೆಸಿಕೊಳ್ಳುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದ್ದಾರೆ.