ಕರ್ನಾಟಕ

karnataka

ETV Bharat / state

ಫೆ.1ಕ್ಕೆ ಒಂದೇ ವೇದಿಕೆಯಲ್ಲಿ ಮಾಚಿದೇವ - ಸವಿತಾ  ಜಯಂತಿ ಆಚರಣೆ: ಆವರಗೆರೆ ಉಮೇಶ್ ಘೋಷಣೆ - davanegere news

ಮಡಿವಾಳ ಮಾಚಿದೇವ ಕಲ್ಯಾಣ ಮಂಟಪದಲ್ಲಿ ಜಿಲ್ಲಾಡಳಿದ ವತಿಯಿಂದ ಮಾಚಿದೇವ ಜಯಂತಿ ಹಾಗೂ ಸವಿತಾ ಮಹರ್ಷಿಗಳ ಜಯಂತಿಯನ್ನು ಜಂಟಿಯಾಗಿ ಹಮ್ಮಿಕೊಳ್ಳಲಾಗಿದೆ ಎಂದು ಮಡಿವಾಳ ಸಮಾಜದ ಮುಖಂಡ ಆವರಗೆರೆ ಉಮೇಶ್ ತಿಳಿಸಿದರು.

jayanthi-of-machideva-jayanti-and-savita-maharishi-at-davanagere
jayanthi-of-machideva-jayanti-and-savita-maharishi-at-davanagere

By

Published : Jan 29, 2020, 6:29 PM IST

ದಾವಣಗೆರೆ:ನಗರದ ಮಡಿವಾಳ ಮಾಚಿದೇವ ಕಲ್ಯಾಣ ಮಂಟಪದಲ್ಲಿ ಜಿಲ್ಲಾಡಳಿದ ವತಿಯಿಂದ ಮಾಚಿದೇವ ಜಯಂತಿ ಹಾಗೂ ಸವಿತಾ ಮಹರ್ಷಿಗಳ ಜಯಂತಿಯನ್ನು ಜಂಟಿಯಾಗಿ ಹಮ್ಮಿಕೊಳ್ಳಲಾಗಿದೆ ಎಂದು ಮಡಿವಾಳ ಸಮಾಜದ ಮುಖಂಡ ಆವರಗೆರೆ ಉಮೇಶ್ ತಿಳಿಸಿದರು.

ಫೆ.1ಕ್ಕೆ ಮಾಚಿದೇವ ಜಯಂತಿ ಹಾಗೂ ಸವಿತಾ ಮಹರ್ಷಿಗಳ ಜಯಂತಿ ಆಚರಣೆ

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಡಿವಾಳ ಮಾಚಿದೇವ, ಸವಿತಾ ಮಹರ್ಷಿಗಳ ಜಯಂತಿ ಒಂದೇ ಸಮಯದಲ್ಲಿ ಬಂದಿದ್ದರಿಂದ ಡಿಸಿ ಮನವಿ ಮೇರೆಗೆ ಹಾಗೂ ಇವ ನಮ್ಮವ ಇವ ನಮ್ಮವ ಎಂಬ ಬಸವಣ್ಣನವರ ಆಶಯದಂತೆ ಫೆಬ್ರವರಿ 1ರಂದು ಒಂದೇ ವೇದಿಕೆಯಲ್ಲಿ ಜಯಂತಿ ಆಚರಣೆಗೆ ಮುಂದಾಗಿದ್ದೇವೆ ಎಂದರು.

ಹಾಗೂ ಮಡಿವಾಳ ಮಾಚಿದೇವ ಕುರಿತು ಪ್ರಾಧ್ಯಾಪಕರಾಗಿ ಅನಿತಾ ಜಿ ಅವರು ಉಪನ್ಯಾಸ ನೀಡಲಿದ್ದಾರೆ, ಅಂತಾರಾಷ್ಟ್ರೀಯ ಯೋಗಪಟು ಪರುಶುರಾಮ್ ಪರಿಸರ ಪ್ರೇಮಿ ಸಾಲುಮರದ ವೀರಾಚಾರಿ, ಅಂತಾರಾಷ್ಟ್ರೀಯ ಜಿಮ್ನಾಸ್ಟಿಕ್ ಆದ್ವಿಕ್ ಸೇರಿದಂತೆ ವಿವಿಧ ಗಣ್ಯರಿಗೆ, ಸಾಧಕರನ್ನು ಸನ್ಮಾನಿಸಿ ಗೌರವಿಸಲಾಗುವುದು ಎಂದು ತಿಳಿಸಿದರು.

ABOUT THE AUTHOR

...view details