ಕರ್ನಾಟಕ

karnataka

ETV Bharat / state

ನಾಯಕತ್ವ ಬದಲಾವಣೆ ಮಾಡಿದ್ರೆ ಉಕ ಲಿಂಗಾಯತ ನಾಯಕರಿಗೆ ಅವಕಾಶ ಕೊಡಿ: ಜಯಮೃತ್ಯುಂಜಯ ಶ್ರೀ - CM Change news

ರಾಜ್ಯದಲ್ಲಿ ಒಂದು ವೇಳೆ ನಾಯಕತ್ವ ಬದಲಾವಣೆ ಮಾಡಿದರೆ ಉತ್ತರ ಕರ್ನಾಟಕದ ಲಿಂಗಾಯತ ನಾಯಕರಿಗೆ ಮಾನ್ಯತೆ ನೀಡಲು ಅರುಣ್ ಸಿಂಗ್ ಬಳಿ ಕೇಳಿರುವುದಾಗಿ ಶ್ರೀ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ.

jayamruthyunjaya swamiji
ಜಯಮೃತ್ಯುಂಜಯ ಶ್ರೀ

By

Published : Jun 19, 2021, 2:39 PM IST

ದಾವಣಗೆರೆ: ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್​ ಅವ​ರನ್ನು ಭೇಟಿ ಮಾಡಿದ್ದ ಕೂಡಲಸಂಗಮ ಮಠದ ಶ್ರೀ ಜಯಮೃತ್ಯುಂಜಯ ಸ್ವಾಮೀಜಿ ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಒಂದು ವೇಳೆ ನಾಯಕತ್ವ ಬದಲಾವಣೆ ಮಾಡಿದರೆ ಉತ್ತರ ಕರ್ನಾಟಕದ ಲಿಂಗಾಯತ ನಾಯಕರಿಗೆ ಮಾನ್ಯತೆ ನೀಡಲು ಕೇಳಿದ್ದೇನೆ ಎಂದು ತಿಳಿಸಿದರು.

ಉತ್ತರ ಕರ್ನಾಟಕದ ಅಭಿವೃದ್ಧಿಗೆ ಉತ್ತರ ಕರ್ನಾಟಕದವರೇ ಸಿಎಂ ಆದ್ರೆ ಸೂಕ್ತ. ಹಾಗೇಯೇ ಅರುಣ್‌ ಸಿಂಗ್‌ ಅವರ ಬಳಿ ಪಂಚಮಸಾಲಿ 2ಎ ಮೀಸಲಾತಿ ಬಗ್ಗೆ ಚರ್ಚೆ ಮಾಡಿದ್ದೇನೆ, ಅವರು ಈ ವಿಚಾರವಾಗಿ ದೆಹಲಿಗೆ ಬರುವಂತೆ ಆಹ್ವಾನ ನೀಡಿದ್ದಾರೆ ಎಂದು ಸ್ವಾಮೀಜಿ ಹೇಳಿದರು.

ನಾಯಕತ್ವ ಬದಲಾವಣೆ ಕುರಿತು ಜಯಮೃತ್ಯುಂಜಯ ಶ್ರೀ ಪ್ರತಿಕ್ರಿಯೆ

ಪಂಚಮಸಾಲಿ ಸಮಾಜಕ್ಕೆ ಸಿಎಂ ಸ್ಥಾನ ನೀಡಿ ಎಂಬ ವಿಶ್ವನಾಥ್ ಹೇಳಿಕೆಗೆ ಪ್ರತಿಕ್ರಿಯೆ

ಪಂಚಮಸಾಲಿ ಸಮಾಜಕ್ಕೆ ಮುಖ್ಯಮಂತ್ರಿ ಸ್ಥಾನ ನೀಡಿ ಎಂದು ಉತ್ತರ ಕರ್ನಾಟಕದ ಮೇಲಿನ ಅಭಿಮಾನದಿಂದ ಹೆಚ್ ವಿಶ್ವನಾಥ್ ಹೇಳಿಕೆ ನೀಡಿರಬಹುದು. ಅದರಿಂದ ಲಿಂಗಾಯತರ ಸ್ಥಾನಕ್ಕೆ ಲಿಂಗಾಯತರನ್ನೇ ತನ್ನಿ ಎಂದು ಹೇಳಿದ್ದಾರೆ.

ರೇಸ್‌ನಲ್ಲಿ ನಮ್ಮವರು ಮೂರು ಹುಲಿಗಳು ಓಡುತ್ತಿದ್ದಾರೆ. ನಾನು ಒಬ್ಬರ ಹೆಸರು ಹೇಳಿ ಉಳಿದವರ ಮನಸ್ಸಿಗೆ ನೋವು ಮಾಡೋಲ್ಲ. ಯಡಿಯೂರಪ್ಪ ಈಗಾಗಲೇ ರೇಸ್‌ನಲ್ಲಿ ಓಡಿ ಗೋಲ್ಡ್ ಮೆಡಲ್ ತೆಗೆದುಕೊಂಡಿದ್ದಾರೆ. ರಾಜ್ಯಕ್ಕೆ ನಾಯಕತ್ವ ನೀಡಿದ ಸಮಾಜ ಎಂದರೆ ಅದು ಲಿಂಗಾಯತ ಸಮಾಜವಾಗಿದೆ. ಬೇರೆ ಸಮಾಜದಲ್ಲಿ ರಾಜ್ಯಕ್ಕೆ ಒಂದು ಹುಲಿಯಾದರೆ, ನಮ್ಮ ಸಮಾಜದಲ್ಲಿ ಹಳ್ಳಿಗೊಂದು ಹುಲಿಗಳಿವೆ ಎಂದರು.

ಇದನ್ನೂ ಓದಿ:ಕೇಸರಿ ಪಡೆ ಪಾಲಿಟಿಕ್ಸ್​ನಲ್ಲಿ ಕಾವಿ ಎಂಟ್ರಿ : ಬಿಎಸ್​ವೈ ಪರ-ವಿರುದ್ಧ ನಿಂತ ಮಠಾಧೀಶರು

ಸಿಎಂ ಬದಲಾವಣೆ ಮಾಡಬೇಕು ಎಂದು ಹೇಳುವ ಅಧಿಕಾರ ಯಾವ ಮಠಾಧೀಶರಿಗೂ ಇಲ್ಲ. ರಾಜಕಾರಣದಲ್ಲಿ ಮೂಗು ತೂರಿಸುವುದು ಸರಿಯಲ್ಲ, ನಾನು ಅದರಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಪರೋಕ್ಷವಾಗಿ ಹರಿಹರ ಪಂಚಮಸಾಲಿ ಮಠದ ವಚನಾನಂದ ಶ್ರೀಗಳಿಗೆ ಟಾಂಗ್‌ ನೀಡಿದರು.

ABOUT THE AUTHOR

...view details