ದಾವಣಗೆರೆ: 2ಎ ಮೀಸಲಾತಿಗಾಗಿ ಒತ್ತಾಯಿಸಿ ಕೂಡಲಸಂಗಮದ ಬಸವ ಜಯಮೃತ್ಯುಂಜಯ ಶ್ರೀಯವರು ಹಮ್ಮಿಕೊಂಡಿರುವ ಪಾದಯಾತ್ರೆ ಜ. 29ಕ್ಕೆ ನಗರಕ್ಕೆ ಆಗಮಿಸಲಿದೆ ಎಂದು ಪಂಚಮಸಾಲಿ ಮುಖಂಡ ಹೆಚ್ ಎಸ್ ನಾಗರಾಜ್ ತಿಳಿಸಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಪಾದಯಾತ್ರೆ ಜಿಲ್ಲೆಗೆ ಆಗಮಿಸುತ್ತಿದ್ದಂತೆ ಹರಿಹರ-ಕೂಡಲಸಂಗಮ ಶ್ರೀಗಳನ್ನು ಜೊತೆಗೂಡಿಸಲು ಸಮಾಜಬಾಂಧವರು ಪಣ ತೊಟ್ಟಿದ್ದು, ಜನವರಿ 28ಕ್ಕೆ ಜಿಲ್ಲೆಯ ಹರಿಹರಕ್ಕೆ ಆಗಮಿಸಲಿರುವ ಪಾದಯಾತ್ರೆ ಹರಿಹರದಲ್ಲಿ ವಾಸ್ತವ್ಯ ಹೂಡಲಿದ್ದು, ವಿಜೃಂಭಣೆಯಿಂದ ಸಾವಿರಾರು ಜನರು ಪಾದಯಾತ್ರೆ ಸ್ವಾಗತಿಸಲು ಸಿದ್ಧತೆ ನಡೆಸಿದ್ದಾರೆ ಎಂದರು.
ಪಂಚಮಸಾಲಿ ಮುಖಂಡ ಹೆಚ್ ಎಸ್ ನಾಗರಾಜ್ ಮಾತನಾಡಿದರು ಜನವರಿ 29 ಕ್ಕೆ ನಗರಕ್ಕೆ ಆಗಮಿಸುವ ಹೋರಾಟಗಾರರು, ಇಲ್ಲಿನ ಸಂಗೊಳ್ಳಿ ರಾಯಣ್ಣನ ವೃತ್ತದಲ್ಲಿ ಮೂರ್ತಿಗೆ ಮಾಲಾರ್ಪಣೆ ಮಾಡಲಿದ್ದಾರೆ. ನಂತರ ಮೆರವಣಿಗೆ ಮುಂದುವರೆಯಲಿದ್ದು, ಈ ವೇಳೆ ಸುಮಾರು 500 ಮಹಿಳೆಯರು ಕುಂಬಮೇಳದೊಂದಿಗೆ ಸ್ವಾಗತಿಸಲಿದ್ದಾರೆ ಎಂದು ಹೇಳಿದರು.
ಓದಿ:ಕೃಷಿ ಕಾಯ್ದೆ ವಿರೋಧಿಸಿ ಸಿಐಟಿಯು ಸಂಘಟನೆ, ವಿಕಲಚೇತನರ ಒಕ್ಕೂಟದಿಂದ ಪ್ರತಿಭಟನೆ
ಪಾದಯಾತ್ರೆಯಲ್ಲಿ ಹತ್ತು ಸಾವಿರ ಜನರ ಆಗಮನದ ನಿರೀಕ್ಷೆ ಇದ್ದು, ನಗರದಲ್ಲಿ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಬೇವಿನಮರದ್ ಭಾಗಿಯಾಗಲಿದ್ದಾರೆ. 2ಎ ಮೀಸಲಾತಿಗಾಗಿ ಕೂಡಲಸಂಗಮದಿಂದ ಬೆಂಗಳೂರಿನವರೆಗೆ 600 ಕಿಲೋ ಮೀಟರ್ ಪಾದಯಾತ್ರೆ ಹಮ್ಮಿಕೊಂಡಿರುವ ಕೂಡಲಸಂಗಮ ಶ್ರೀ ಜಯಮೃತ್ಯುಂಜಯ ಸ್ವಾಮೀಜಿಯವರು ವಿಧಾನಸೌಧ ತಲುಪಿದರೂ ಕೂಡ ಶುಭ ಸುದ್ದಿ ನೀಡದಿದ್ದಲ್ಲಿ ಉಗ್ರ ಹೋರಾಟ ಕೈಗೊಳ್ಳಲಾಗುವುದು ಎಂದು ಸರ್ಕಾರಕ್ಕೆ ನಾಗರಾಜ್ ಎಚ್ಚರಿಕೆ ನೀಡಿದರು.