ಕರ್ನಾಟಕ

karnataka

ETV Bharat / state

ಸಿಎಂ ಅಧಿವೇಶನದಲ್ಲಿ ಭರವಸೆ ನೀಡಿದ್ದರಿಂದ ಹೋರಾಟ ವಾಪಸ್: ಜಯಮೃತ್ಯುಂಜಯ ಶ್ರೀ - ಕೂಡಲಸಂಗಮದ ಪಂಚಮಸಾಲಿ ಪೀಠದ ಶ್ರೀ ಜಯಮೃತ್ಯುಂಜಯ ಸ್ವಾಮೀಜಿ ಹೇಳಿಕೆ

ಅಕ್ಟೋಬರ್ 15 ರೊಳಗೆ ಬೃಹತ್ ಹೋರಾಟ ಮಾಡಲಾಗುವುದು. 25 ಲಕ್ಷಕ್ಕೂ ಅಧಿಕ ಜನರು ಬೆಂಗಳೂರಿನಲ್ಲಿ ಸೇರಿ ಸರ್ಕಾರವನ್ನು ಎಚ್ಚರಿಸುವ ಕೆಲಸ ಮಾಡುತ್ತೇವೆ ಎಂದು ಶ್ರೀ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ.

Jayamritunjaya Swamiji response to the reservation fight
ಕೂಡಲಸಂಗಮದ ಪಂಚಮಸಾಲಿ ಪೀಠದ ಶ್ರೀ ಜಯಮೃತ್ಯುಂಜಯ ಸ್ವಾಮೀಜಿ ಹೇಳಿಕೆ

By

Published : Mar 28, 2021, 2:11 PM IST

ದಾವಣಗೆರೆ:ಮುಖ್ಯಮಂತ್ರಿ ಯಡಿಯೂರಪ್ಪ ಭರವಸೆ ನೀಡಿದ್ದರಿಂದ ಧರಣಿ ಸತ್ಯಾಗ್ರಹವನ್ನು ಸೆಪ್ಟೆಂಬರ್‌ 15 ರವರೆಗೆ ಮುಂದೂಡಲಾಗಿದ್ದು, ಹಾದಿ ಬೀದಿಯಲ್ಲಿ ಸಿಎಂಭರವಸೆ ನೀಡಿಲ್ಲ, ಅಧಿವೇಶನದಲ್ಲಿ ಮಾತು ಕೊಟ್ಟಿದ್ದರಿಂದ ಸತ್ಯಾಗ್ರಹ ಮುಂದೂಡಲಾಗಿದೆ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ.

ಕೂಡಲಸಂಗಮದ ಪಂಚಮಸಾಲಿ ಪೀಠದ ಜಯಮೃತ್ಯುಂಜಯ ಸ್ವಾಮೀಜಿ ಹೇಳಿಕೆ

ನಗರದಲ್ಲಿ ಮಾಜಿ ಶಾಸಕ ಹೆಚ್.ಎಸ್. ಶಿವಶಂಕರ್ ನಿವಾಸದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಅಕ್ಟೋಬರ್ 15 ರೊಳಗೆ ಬೃಹತ್ ಮಟ್ಟದ ಉಗ್ರ ಹೋರಾಟ ಮಾಡಲಾಗುವುದು, 25 ಲಕ್ಷಕ್ಕೂ ಅಧಿಕ ಜನರು ಬೆಂಗಳೂರಿನಲ್ಲಿ ಸೇರಿ ಸರ್ಕಾರವನ್ನು ಎಚ್ಚರಿಸುವ ಕೆಲಸ ಮಾಡುತ್ತೇವೆ. ನಮ್ಮ ಸಮಾಜದವರು ಶಾಲೆ ದಾಖಲಾತಿಯಲ್ಲಿ ಪಂಚಮಸಾಲಿ ಎಂದು ನಮೂದು ಮಾಡಬೇಕು. ಯಾಕಂದ್ರೆ ಮುಂದಿನ ದಿನಗಳಲ್ಲಿ 2A ಮೀಸಲಾತಿ ಸಿಗುತ್ತದೆ, ಆಗ ತೊಂದರೆ ಅನುಭವಿಸುತ್ತೀರಿ ಎಂದು ಸ್ವಾಮೀಜಿ ಮಾಹಿತಿ ನೀಡಿದರು.

ಇದನ್ನೂ ಓದಿ : ಪೊಲೀಸರಿಗೆ ಯುವತಿಯನ್ನು ಪತ್ತೆ ಹಚ್ಚಲು ಆಗದಿರುವುದು ನಾಚಿಕೆಗೇಡಿನ ಸಂಗತಿ: ಸಿದ್ದರಾಮಯ್ಯ

ABOUT THE AUTHOR

...view details