ಕರ್ನಾಟಕ

karnataka

ETV Bharat / state

ಪ್ರತ್ಯೇಕ ಲಿಂಗಾಯತ ಧರ್ಮದ ಹೋರಾಟ ನಿಂತಿಲ್ಲ

ಮತ್ತೆ ಮುನ್ನೆಲೆಗೆ ಬಂದ ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟದ ಕೂಗು. ಈ ಬಗ್ಗೆ ದಾವಣಗೆರೆಯಲ್ಲಿ ಮಾತನಾಡಿದ ಕೂಡಲಸಂಗಮ ಪಂಚಮಸಾಲಿ ಪೀಠದ ಶ್ರೀಗಳು, ಸುಪ್ರೀಂನಿಂದಲೇ ನ್ಯಾಯ ಪಡೆಯುತ್ತೇವೆ ಎಂದಿದ್ದಾರೆ.

ಕೂಡಲಸಂಗಮ ಪಂಚಮಸಾಲಿ ಪೀಠದ ಸ್ವಾಮೀಜಿ ಜಯಮೃತ್ಯುಂಜಯ ಶ್ರೀಗಳು

By

Published : Jun 10, 2019, 5:33 PM IST

ದಾವಣಗೆರೆ:ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟ ನಿಂತಿಲ್ಲ. ಕಾನೂನಾತ್ಮಕವಾಗಿ ಸುಪ್ರೀಂಕೋರ್ಟ್ ಮೂಲಕ ಮಾನ್ಯತೆ ಪಡೆಯುತ್ತೇವೆ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಸ್ವಾಮೀಜಿ ಜಯಮೃತ್ಯುಂಜಯ ಶ್ರೀಗಳು ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀಗಳು, ಪ್ರತ್ಯೇಕ ಧರ್ಮದ ಮನವಿಯನ್ನು ಕೇಂದ್ರ ತಿರಸ್ಕರಿಸಿಲ್ಲ. ಯಾವುದೇ ತೀರ್ಮಾನವನ್ನು ನೀಡಿಲ್ಲ. ಇನ್ನು ಪೆಂಡಿಂಗ್ ಇಟ್ಟಿದೆ. ಕೇಂದ್ರ ಸರ್ಕಾರ ಸಮಸ್ಯೆ ಪರಿಹರಿಸಿದರೆ ಒಳ್ಳೆಯದು. ಇಲ್ಲದಿದ್ದರೆ ನಾವು ಸುಪ್ರೀಂ ಕೋರ್ಟ್​ನಿಂದ ನ್ಯಾಯ ಪಡೆಯುತ್ತೇವೆ. ಈ ಬಗ್ಗೆ ಕಾನೂನು ತಜ್ಞರೊಂದಿಗೆ ಚರ್ಚೆ ನಡೆಯುತ್ತಿದೆ. ಕೇಂದ್ರದ ಮೇಲೂ ಒತ್ತಡ ಹಾಕುವ ಪ್ರಯತ್ನ ನಡೆದಿದೆ. ಪ್ರಧಾನಿ ಮೋದಿಯವರು ಕರ್ನಾಟಕಕ್ಕೆ ಬಂದಾಗ ಬಸವಣ್ಣನವರ ಬಗ್ಗೆ ಒಳ್ಳೆಯ ಮಾತುಗಳನ್ನಾಡಿದ್ದಾರೆ.

ಕೂಡಲಸಂಗಮ ಪಂಚಮಸಾಲಿ ಪೀಠದ ಜಯಮೃತ್ಯುಂಜಯ ಶ್ರೀ

ಬಸವಣ್ಣನವರ ಬಗ್ಗೆ ಗೌರವ ಇದೆ ಎಂದು ಭಾವಿಸಿದ್ದೇವೆ. ಇನ್ನೊಂದು ಬಾರಿ ಪ್ರಧಾನಿಗೆ ಮನವಿ ಮಾಡುತ್ತೇವೆ. ಎಲ್ಲಾ ಮಾನ್ಯತೆಗಳು ಲೋಕಸಭೆಯಲ್ಲಿ ಸಿಕ್ಕಿಲ್ಲ. ಈಗಾಗಲೇ ಜೈನ, ಸಿಖ್, ಬೌದ್ಧ ಧರ್ಮಗಳಿಗೆ ಸುಪ್ರೀಂ ಕೋರ್ಟ್ ಮಾನ್ಯತೆ ನೀಡಿದೆ. ನಾವೂ ಸಹ ಸುಪ್ರೀಂನಿಂದಲೇ ನ್ಯಾಯ ಪಡೆಯುತ್ತೇವೆ ಎಂದರು.

ಅಭಿಯಾನದ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಅದಕ್ಕಾಗಿ ಜಿಲ್ಲಾ ಮತ್ತು ತಾಲೂಕು ಘಟಕಗಳನ್ನ ರಚಿಸಲಾಗಿದೆ. ಘಟಕಗಳ ಮೂಲಕ ಜನರಲ್ಲಿ ಧರ್ಮದ ಬಗ್ಗೆ ಮನವರಿಕೆ ಮಾಡುತ್ತೇವೆ. ನಮ್ಮಂತೆಯೇ ಕೇರಳ, ಆಂಧ್ರ, ತೆಲಂಗಾಣ, ತಮಿಳುನಾಡಿನಲ್ಲಿ ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟ ಆರಂಭಗೊಂಡಿದೆ. ಅದು ನಮಗೆ ಮತ್ತಷ್ಟು ಬಲ ತಂದು ಕೊಡಲಿದೆ. ಆ. 9 ರಂದು ಮಹಾರಾಷ್ಟ್ರದಲ್ಲಿ ಜಾಥಾ ಇದೆ. ಬಳಿಕ ನಮ್ಮ ಹೋರಾಟ ಚುರುಕುಗೊಳ್ಳಲಿದೆ ಎಂದು ಶ್ರೀಗಳು ಹೇಳಿದರು.

ABOUT THE AUTHOR

...view details